ಬೆಳಗಾವಿ- ಬೆಳಗಾವಿ ಊತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಅವರು ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಬೇಟಿ ನೀಡಿ ಶಾಲೆಗಳ ಪರಿಸ್ಥಿತಿಯನ್ನು ಪರಶೀಲಿಸಿದರು
ಬೆಳಗಾವಿ ಊತ್ತರ ಮತಕ್ಷೇತ್ರದ ಕಣಬರ್ಗಿ ಕನ್ನಡ ಶಾಲೆ,ಕಾಕತಿವೇಸ್ ಊರ್ದು ಶಾಲೆ,ಪುಲಬಾಗ್ ಗಲ್ಲಿ, ಮಾಳಿಗಲ್ಲಿ ಸೇರಿದಂತೆ ಅನೇಕ ಶಾಲೆಗಳಿಗೆ ಬೇಟಿ ನೀಡಿದ ಶಾಸಕ ಸೇಠ ಪರಿಸ್ಥಿತಿಯನ್ನು ಪರಶೀಲಿಸಿದರು
ಕಣಬರ್ಗಿ ಕನ್ನಡ ಶಾಲೆಗೆ ೩೫ಲಕ್ಷ,ಕಾಕತಿವೇಸ್ ಶಾಲೆಗೆ ೫ಲಕ್ಷ, ಮಾಳಿಗಲ್ಲಿ ಶಾಲೆಗೆ ೩ಲಕ್ಷ, ಅನುದಾನ ನೀಡಿ ಶಾಲಾ ಕೊಠಡಿ ನಿರ್ಮಾಣ ಸೇರಿದಂತೆ ಶಾಲೆಗಳನ್ನು ದುರಸ್ಥಿ ಮಾಡಿಕೊಳ್ಳುವಂತೆ ಶಾಸಕ ಸೇಠ ಶಾಲಾ ಅಡಳಿತ ಮಂಡಳಿಗಳಿಗೆ ಸೂಚನೆ ನೀಡಿದರು
ಈ ಸಂಧರ್ಭದಲ್ಲಿ ಮಾತನಾಡಿದ ಸೇಠ,ಸರ್ಕಾರಿ ಶಾಲೆಗಳನ್ನು ಮೆಲ್ದರ್ಜೆಗೆರಿಸಿ ಶಾಲೆಗಳ ಅಭಿವೃದ್ಧಿಗಾಗಿ ಎರಡು ಕೋಟಿ ರೂ ಅನುದಾನ ಖರ್ಚು ಮಾಡಲು ನಿರ್ಧರಿಸಲಾಗಿದೆ.ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆಯಿಂದಲೂ ಒಂದೂವರೆ ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿದ್ದು ಊತ್ತರ ಮತಕ್ಷೇತ್ರದ ಎಲ್ಲ ಶಾಲೆಗಳ ಅಭಿವೃದ್ದಿ ಮಾಡುವ ಸಂಕಲ್ಪ ಮಾಡಿದ್ದೇನೆ
ಕ್ಷೇತ್ರದ, ಕನ್ನಡ, ಮರಾಠಿ. ಹಾಗು ಊರ್ದು ಶಾಲೆಗಳಿಗೆ ಬೇಟಿ ನೀಡಿ ಅಲ್ಲಿಯ ಪರಿಸ್ಥತಿಗೆ ತಕ್ಕಂತೆ ಅನುದಾನ ಬಿಡುಗಡೆ ಮಾಡಲಾಗುತ್ತಿದೆ ಎಂದು ಶಾಸಕ ಸೇಠ ತಿಳಿಸಿದರು.
ಒಂದು ವಾರದಲ್ಲಿ ಎಲ್ಲ ಶಾಲೆಗಳಿಗೆ ಬೇಟಿ ನಿಡುವ ಕಾರ್ಯಕ್ರಮ ಹಾಕಿಕೊಂಡಿದ್ದು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬೇಕಾಗುವ ಅನುದಾನವನ್ನು ತಮ್ಮ ಶಾಸಕರ ನಿಧಿಯಿಂದ ಖರ್ಚು ಮಾಡುತ್ತೇನೆ ಹೆಚ್ಚಿನ ಅನುದಾನದ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಶೇಷ ಅನುದಾನ ತರುತ್ತೇನೆ ಎಂದು ಶಾಸಕ ಸೇಠ ಭರವಸೆ ನೀಡಿದರು.
ರಾಜು ಸೇಠ,ಬುಡಾ ಸದಸ್ಯ ಪರಶುರಾಮ ವಗ್ಗಣ್ಣವರ,ಸೇರಿದಂತೆ ಶಾಲಾ ಅಡಳಿತ ಮಂಡಳಿಗಳ ಸದಸ್ಯರು ಊಪಸ್ಥಿತರಿದ್ದರು.
Check Also
ಈಜಲು ಹೋದ ಬಾಲಕ ನೀರು ಪಾಲು
ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …