ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ ಕಟ್ಟಲಾಗದು ಎಂಬುದನ್ನು
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಯುವಕ ರಮಜಾನ್ ಮಲ್ಲಿಕಸಾಬ್ ಪೀರಜಾದೆ ಸಾಧಿಸಿ ತೋರಿಸಿದ್ದಾರೆ.
ಸೋನಿ ಟಿ.ವಿಯಲ್ಲಿ ಪ್ರಸಾರವಾಗುವ,
ಇಡೀ ದೇಶದ ಗಮನಸೆಳೆದ ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧೆಯಲ್ಲಿ 50 ಲಕ್ಷ ರೂ. ಗೆದ್ದು ಬೀಗಿದ್ದಾರೆ.ಬಾಲಿವುಡ್ ನ ಖ್ಯಾತ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ 1 ಕೋಟಿ ಬಹುಮಾನದ ಪ್ರಶ್ನೆಗೆ ಉತ್ತರಿಸಲು ಹಿಂದೆ ಸರಿದ ಪರಿಣಾಮ, 50 ಲಕ್ಷಕ್ಕೆ ತೃಪ್ತರಾಗಿದ್ದಾರೆ.
ರಮಜಾನ್ ಬಡ ಕುಟುಂಬದಲ್ಲಿ ಜನಿಸಿದ ಯುವಕ. ತಾಯಿ ಮುನೇರಾ ಗೃಹಿಣಿ. ತಂದೆ ಮಲಿಕ್ ಸಾಬ್ ಗ್ಯಾಸ್ ವೆಲ್ಡರ್. ಅಲ್ಪ-ಸ್ವಲ್ಪ ಆದಾಯದಲ್ಲಿ ಮಕ್ಕಳಿಗೆ ಶಿಕ್ಷಣ ಕೊಟ್ಟಿರುವ ರಮಜಾನ್ .ತಂದೆ ಜೊತೆಗೂಡಿ ಕೆಲಸ ಮಾಡುತ್ತ, ವಾಚ್ ಮನ್ ಕೆಲಸ ಮಾಡಿಯೂ ಶಿಕ್ಷಣವನ್ನು ಮುಂದುವರಿಸಿದ್ದ ರಮಜಾನ್, ಮಹಾಲಿಂಗಪುರದ ಸಿಪಿ ಸಂಸ್ಥೆಯ ಕೆಎಲ್‌ಇ ಕಾಲೇಜಿನಲ್ಲಿ ಬಿಎ ಪದವಿ ಪೂರೈಸಿದ್ದಾರೆ. ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.
ಜ.13ರಂದು ರಾತ್ರಿ 9 ಗಂಟೆಗೆ ಹಿಂದಿ ಚಾನಲ್‌ನಲ್ಲಿ ಪ್ರಸಾರವಾಗುವ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ಸಾಧನೆ ಮೆರೆದಿದ್ದಾರೆ.