Breaking News

ಇಂದು ಬೆಳಗಾವಿಯಲ್ಲಿ ಡಿಸ್ಕೋ ಕಿಂಗ್ ಬಪ್ಪಿ ಲಹರಿ ಸ್ಮರಣೆಯ ಸಂಗೀತ ಲಹರಿ

 

 

ಬೆಳಗಾವಿ- ಬೆಳಗಾವಿಯ ರೋಟರಿ ಕ್ಲಬ್ ಆಫ್ ಬೆಳಗಾವಿ ಅನ್ನೋತ್ಸವದ ಮೂಲಕ ಹೊಸ ಇತಿಹಾಸ ಮಾಡಿದೆ.ಅನ್ನೋತ್ಸವಕ್ಕೆ ನಿತ್ಯ ಲಕ್ಷಾಂತರ ಜನ ಬರುತ್ತಿದ್ದು ಇಂದು ಅನ್ನೋತ್ಸವದಲ್ಲಿ ಖ್ಯಾತ ಸಂಗೀತಗಾರ ಬಪ್ಪಿ ಲಹರಿ  ಅವರ ಸಂಗೀತವನ್ನು ಬೆಳಗಾವಿಯ ಹಾರ್ಮೋನಿ ಮ್ಯುಸಿಕಲ್ ತಂಡದವರು ಪ್ರಸ್ತುತ ಪಡಿಸಲಿದ್ದಾರೆ..

ಜನೇವರಿ 3 ರಿಂದ 14 ರವರೆಗೆ ಬೆಳಗಾವಿಯ ಸಾವಗಾಂವ ರಸ್ತೆಯಲ್ಲಿರುವ ಅಂಗಡಿ ಕಾಲೇಜು ಹತ್ತಿರ ಅನ್ನೋತ್ಸವ ನಡೆಯುತ್ತಿದೆ. ಪ್ರತಿದಿನ ಸಂಜೆ ಸಂಗೀತ ಕಾರ್ಯಕ್ರಮ ಸೇರಿದಂತೆ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ ಇಂದು ಸೋಮವಾರ ದಿ.13 ಈ ದಿನ ಸಂಜೆ ಅನ್ನೋತ್ಸದಲ್ಲಿ ಡಿಸ್ಕೋ ಕಿಂಗ್ ಬಪ್ಪಿ ಲಹರಿ ಅವರನ್ನು ಸ್ಮರಿಸುವ  ಸಂಗೀತ ಕಾರ್ಯಕ್ರಮ ಬೆಳಗಾವಿಯ ಹಾರ್ಮೋನಿ ಮ್ಯುಸಿಕ ತಂಡದವರು ನಡೆಸಲಿದ್ದು ಅನ್ನೋತ್ಸವಕ್ಕೆ ಜನಸಾಗರವೇ ಹರಿದು ಬರಲಿದೆ.

ರೋಟರಿ ಕ್ಲಬ್ ಆಫ್ ಬೆಳಗಾವಿ ಈ ಸಂಸ್ಥೆಯನ್ನು ಬೆಳಗಾವಿಯ ಅನೇಕ ಉದ್ಯಮಿಗಳು ,ಪ್ರಸಿದ್ದ ವ್ಯಕ್ತಿಗಳು, ಕೋಟ್ಯಾಧೀಶರು ನಡೆಸುತ್ತಿದ್ದಾರೆ. ಪ್ರತಿವರ್ಷ ಬೆಳಗಾವಿಯಲ್ಲಿ ಅತ್ಯಂತ ಅಚ್ವುಕಟ್ಟಾಗಿ ಅನ್ನೋತ್ಸವ ನಡೆಸಿ ರೋಟರಿಯ ಪದಾಧಿಕಾರಿಗಳು ಜನಮೆಚ್ಚುಗೆ ಪಡೆದಿದ್ದಾರೆ. ರೋಟರಿಯ ಪದಾಧಿಕಾರಿಗಳು ಕೋಟ್ಯಾಧೀಶರಾಗಿದ್ದರೂ ಸಹ ಅನ್ನೋತ್ಸವದಲ್ಲಿ ಎಲ್ಲ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಸೇವೆ ಮಾಡುತ್ತಾರೆ. ಅನ್ನೋತ್ಸವದಲ್ಲಿ ಬರುವ ಆದಾಯದಲ್ಲಿ ಬೆಳಗಾವಿ ಮಹಾನಗರದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾರೆ.ಬೆಳಗಾವಿಯ ರೋಟರಿ ಕ್ಲಬ್ ಆಫ್ ಬೆಳಗಾವಿ ಇದರ ಪದಾಧಿಕಾರಿಗಳ ಸ್ವಯಂ ಸೇವೆ ಮಾದರಿಯಾಗಿದ್ದು ಪ್ರೇರಣಾದಾಯಕವಾಗಿದೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಅನ್ನೋತ್ಸವ ಜನೇವರಿ 14 ರಂದು ಮುಕ್ತಾಯವಾಗಲಿದೆ. ಅನ್ನೋತ್ಸವದಲ್ಲಿ ವಿವಿಧ ರಾಜ್ಯಗಳ ಖಾದ್ಯಗಳು, ತಿಂಡಿ ತಿನಿಸುಗಳು ಎಲ್ಲರನ್ನೂ ಆಕರ್ಷಿಸುತ್ತಿವೆ. ಲಾಹೋರಿ,ನಿಜಾಮಿ ನಾನ್ ವೇಜ್ ತಿನಿಸುಗಳು ಬಟ್ಟೆ ಅಂಗಡಿಗಳು ಸೇರಿದಂತೆ ಅನ್ನೋತ್ಸವದಲ್ಲಿ ಬಗೆಬಗೆಯ ನೂರಾರು ಸ್ಟಾಲ್ ಗಳಿದ್ದು ಬೆಳಗಾವಿ ಮ್ಯಾಗ್ನೇಟ್ ಐಸ್ ಕ್ರೀಂ ಸ್ಟಾಲ್ ನಲ್ಲಿ ನಿತ್ಯ ಹೌಸ್ ಫುಲ್ ಯಾಕಂದ್ರೆ ಇಲ್ಲಿ ಮಕ್ಕಳನ್ನು ರಂಜಿಸುವ ಐಸ್ ಕ್ರೀಂ ಮ್ಯಾಜೀಕ್ ನಡೆಯುತ್ತಿದೆ.

ದಾವಣಗೆರೆ ಬೆಣ್ಣೆ ದೋಸಾ, ಬೆಂಕಿ ಹಚ್ಚಿದ ಪಾನ್ ,( ಫೈರ್ ಪಾನ್ ) ಸೀ ಫುಡ್ ಚೈನೀಸ್ ಫುಡ್ ಮೊಗಲಾಯಿ ಫುಡ್ ಜೊತೆಗೆ ದೇಸಿ ಫುಡ್ ಸ್ಟಾಲ್ ಗಳು ಸಹ ಅನ್ನೋತ್ಸವದಲ್ಲಿ ಇವೆ. ಹಾಗಾದ್ರೆ ನೀವೂ ಬನ್ನೀ ಬರುವಾಗ ನಿಮ್ಮ ಗೆಳೆಯರನ್ನು ಕರೆ ತನ್ನಿ
ಅನ್ನೋತ್ಸವದ ಸಮಯ ಸಂಜೆ 5 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಇರುತ್ತದೆ.

Check Also

ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವರ್ಕ್ ಫ್ರಾಮ್ ಹೋಮ್….!!!

  ಬೆಳಗಾವಿ- ರಸ್ತೆ ಅಪಘಾತದದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚವೆ ಲಕ್ಷ್ಮೀ ಹೆಬ್ಬಾಳಕರ್ ತಮ್ಮ …

Leave a Reply

Your email address will not be published. Required fields are marked *