Breaking News
Home / Breaking News / ಬಸವ ಜಯಂತಿಯ ದಿನದ ರಜೆ ರದ್ದಾಗಲಿ ಕಾಯಕ ನಡೆಯಲಿ..

ಬಸವ ಜಯಂತಿಯ ದಿನದ ರಜೆ ರದ್ದಾಗಲಿ ಕಾಯಕ ನಡೆಯಲಿ..

ಬೆಳಗಾವಿ- ಬಸವಣ್ಣನವರು ಮನುಷ್ಯನಲ್ಲಿರುವ ಅಲಸ್ಯತನವನ್ನು ಹೊಡಡದೋಡಿಸಲು ಕಾಯಕವೇ ಕೈಲಾಸ ಎನ್ನುವ ಸಂದೇಶ ನೀಡಿ ಶ್ರಮವೇ ಧರ್ಮ ಎಂದು ಪ್ರತಿಪಾದಿಸಿದರು ಬಸವಣ್ಣನವರ ಜಯಂತಿ ದಿನದ ರಜೆ ರದ್ದಾಗಿ ವಿಶ್ವ ಗುರುವಿನ ಜಯಂತಿಯ ದಿನ ಕಾಯಕ ನಡೆಯಲಿ ಎಂದು ಸಂಸದ ಸುರೇಶ ಅಂಗಡಿ ಅಭಿಪ್ರಾಯ ಪಟ್ಟರು

ನಗರದ ಬಸವೇಶ್ವರ ವೃತ್ತದಲ್ಲಿ ಬಸವೇಶ್ವರರ ಪ್ರತಿಮೆಗೆ ಪುಷ್ಪ ಗೌರವ ಸಲ್ಲಿಸಿ ಬಸವ ಜಯಂತಿಗೆ ಚಾಲನೆ ನೀಡಿ ಮಾತನಾಡಿದ ಅವರು ಬಸವಣ್ಣನವರ ವಚನಗಳು ಸಮಾಜವನ್ನು ತಿದ್ದುವ ಶಕ್ತಿಯನ್ನು ಹೊಂದಿವೆ ವಚನ ಸಾಹಿತ್ಯ ಹನ್ನೆರಡನೆಯ ಶತಮಾನದಿಂದ ಹಿಡಿದು ಇಲ್ಲಿಯವರೆಗೆ ಸಮಾಜದಲ್ಲಿರುವ ಅಂಧಶೃದ್ಧೆ ಮತ್ತು ಮೌಡ್ಯವನ್ನು ಹೊಡೆದೋಡಿಸುವ ಕೆಲಸ ಮಾಡುತ್ತಿದೆ ಎಂದರು

ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಮಾತನಾಡಿ ಬಸವಣ್ಣನವರು ಒಂದು ಸಮಾಜಕ್ಜೆ ಸೀಮಿತವಾಗಿಲ್ಲ ಅವರ ಸಂದೇಶ ಮತ್ತು ಆದರ್ಶಗಳನ್ನು ಎಲ್ಲ ಸಮಾಜದವರೂ ಅನುಸರಿಸಬೇಕು ವಚನಗಳ ಮೂಲಕ ಸಾಮಾಜಿಕ ಕ್ರಾಂತಿ ಮಾಡಿ ಸಮಾಜದಲ್ಲಿ ಸಮಾನತೆ ತರುವ ಮೂಲಕ ಎಲ್ಲ ಸಮಾಜಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿರುವ ಬಸವಣ್ಣನವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಸಚಿವರು ಕರೆ ನೀಡಿದರು

ಶಾಸಕ ಸಂಜೆಯ ಪಾಟೀಲ್,  ಶಾಸಕ ಸಂಭಾಜಿ ಪಾಟೀಲ್ , ಜಿಲ್ಲಾಧಿಕಾರಿ ಎನ್ ಜಯರಾಮ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು

ಸಚಿವ ಹಾಗೂ ಸಂಸದರಿಂದ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ.ಮಾಡಲಾಯಿತು

Check Also

ಗೋ ಬ್ಯಾಕ್ ಸಂಧಾನಕ್ಕಾಗಿ ,ದಿಢೀರ್ ಬೆಳಗಾವಿಗೆ ಯಡಿಯೂರಪ್ಪ…!!

ಬೆಳಗಾವಿ- ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಿಂದ ಸ್ಪರ್ದಿಸುವ ವಿಚಾರದಲ್ಲಿ ಬಿಜೆಪಿಯಿಂದಲೇ ಗೋ ಬ್ಯಾಕ್ ಆಂದೋಲನ ಶುರುವಾದ …

Leave a Reply

Your email address will not be published. Required fields are marked *