ಬೆಳಗಾವಿ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸಾಲಹಳ್ಳಿ ಮತ್ತು ಗೋಕಾಕ ತಾಲ್ಲೂಕಿನ ಮೂಡಲಗಿಯಲ್ಲಿ SSLC ಪರೀಕ್ಷೆಯ ಹಿಂದಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಘಟನೆ ನಡೆದಿದೆ
ಮೂಡಲಗಿಯ ಕೃಷ್ಣಪ್ಪ ಸೋನವಾಲಕರ್ ಸರಕಾರಿ ಪ್ರೌಢಶಾಲೆಯಲ್ಲಿ ಘಟನೆ.ನಡೆದಿದೆ ೨೦ ಅಂಕಗಳ ಪ್ರಶ್ನೆಗಳನ್ನ ಬಿಳಿಹಾಳೆಯಲ್ಲಿ ಬರೆದು ಶಿಕ್ಷಕರು ಹಿಂದಿ ಪ್ರಶ್ನೆ ಪತ್ರಿಕೆಯನ್ನು ಲೀಕ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸಿದ್ದಪಡಿಸಿದ ಉತ್ತರಗಳನ್ನು ಮನಬಂದಂತೆ ಹಣಕ್ಕೆ ಕಿಡಗೇಡಿಗಳುಮಾರಾಟ ಮಾಡಿದ್ದಾರೆ ಓರಿಜಿನಲ್ ಪ್ರಶ್ನೆಪತ್ರಿಕೆಯನ್ನ ಫೋಟೋ ತೆಗೆದು ಲೀಕ್ ಮಾಡಿದ ಬಳಿಕ ಈ ಪ್ರಶ್ನೆ ಪತ್ರಿಕೆ ರಾಮದುರ್ಗದಾದ್ಯಂತ ವಾಟ್ಸಪ್ ಮೂಲಕ ಹರಿದಾಡಿದೆ ಎಂದು ತಿಳಿದು ಬಂದಿದೆ
ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಸಾಲಹಳ್ಳಿ ಮತ್ತು ಮೂಡಲಗಿಗೆ ದೌಡಾಯಿಸಿ ಪ್ರಶ್ನೆ ಪತ್ರಿಕೆಯ ಸೋರಿಕೆಯ ಕುರಿತು ತನಿಖೆ ಆರಂಭಿಸಿದ್ದಾರೆ