ಬೆಳಗಾವಿ- ಆತ ಖಿಲಾಡಿ,ಎಟಿಎಂ ಹತ್ತಿರ ಸುತ್ತಾಡಿ,ಮಹಿಳೆಯರಿಗೆ,ವೃದ್ಧರಿಗೆ ಸಹಾಯ ಮಾಡುವದಾಗಿ ನಂಬಿಸಿ,ಎಟಿಎಂ ಬದಲಾಯಿಸಿ ಹಣ ದೋಚುತ್ತಿದ್ದ ವಂಚಕನನ್ನು ಚಿಕ್ಕೋಡಿ ಪೋಲೀಸರು ಬಂಧಿಸಿದ್ದಾರೆ.
ಅಮೂಲ ದಿಲೀಪ್ ಸಖಟೆ (30) ಈತ ಮೂಲತಃ ಮಹಾರಾಷ್ಟ್ರದ ಕೊಲ್ಹಾಪೂರದ ನಿವಾಸಿಯಾಗಿದ್ದು,ಚಿಕ್ಕೋಡಿಯ ಹಾಲಟ್ಟಿ ಗ್ರಾಮದ ವಿಜಯಾ ರಾನಪ್ಪ ಢಾಲೆ ಎಂಬ ಮಹಿಳೆಗೆ ಎಟಿಎಂ ನಿಂದ ಹಣ ತಗೆಯಲು ಸಹಾಯ ಮಾಡುವದಾಗಿ ಹೇಳಿ 37 ,500 ರೂ ಹಣ ಡ್ರಾ ಮಾಡಿ, ದೋಚಿಕೊಂಡು ಪರಾರಿಯಾಗಿದ್ದ.
ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದ ಚಿಕ್ಕೋಡಿ ಪೋಲೀಸರು ಪ್ರಕರಣ ಭೇದಿಸಿ ಕೊಲ್ಹಾಪೂರದ ಅಮೂಲ್ ಎಂಬಾತನನ್ನು ಬಂಧಿಸಿ ವಿಚಾರಣೆ ಮಾಡಿದಾಗ ಈತನ ಬಳಿ ಹಲವಾರು ಜನರನ್ನು ವಂಚಿಸಲು ಬಳಿಸಿದ್ದ 51 ಎಟಿಎಂ ಕಾರ್ಡ್ ಗಳು ಸಿಕ್ಕಿವೆ.
51 ಎಟಿಎಂ ಕಾರ್ಡುಗಳನ್ನು ಚಿಕ್ಕೋಡಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ