ಬೆಳಗಾವಿ ನಗರ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ.
ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ.
ಇತ್ತೀಚೆಗೆ “ನಾಗರಿಕತ್ವ ತಿದ್ದುಪಡಿ ಬಿಲ್” ಪರ ಆಚರಣೆ ಹಾಗೂ ವಿರೋಧಿಸಿ ದಿನಾಂಕ.19/12/2019 ಮತ್ತು
21/12/2019 ರಂದು ಹಲವಾರು ಸಂಘಟನೆಗಳು ಬಂದ್ ಘೋಷಿಸಿಸು ಅಥವಾ ಪ್ರತಿಭಟನೆ ಕೈಗೊಳ್ಳುವ ಸಾಧ್ಯತೆಗಳಿದ್ದು
ಈ ನಿಟ್ಟಿನಲ್ಲಿ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಾ ವ್ಯಾಪ್ತಿಯಲ್ಲಿ
ದಿನಾಂಕ.18-12-2019 ರ ರಾತ್ರಿ 09.00 ಗಂಟೆಯಿಂದ ದಿನಾಂಕ.21-12-2019 ರ
ಮದ್ಯರಾತ್ರಿ 12.00 ಗಂಟೆಯವರೆಗೆ ಕಲಂ.144 ಸಿಆರ್‍ಪಿಸಿ ನೇದ್ದರಂತೆ ನಿಷೇಧಾಜ್ಞೆಯನ್ನು ಜಾರಿ ಮಾಡಿ
ಮಾನ್ಯ ಪೊಲೀಸ್ ಆಯುಕ್ತರು, ಬೆಳಗಾವಿ ನಗರ ರವರು ಆದೇಶ ಹೊರಡಿಸಿರುತ್ತಾರೆ.
ಕಾರಣ ಬೆಳಗಾವಿ ನಗರ ಹಾಗೂ ಬೆಳಗಾವಿ ತಾಲೂಕಿನ ಸಾರ್ವಜನಿಕರು ಸದರಿ ಕಾಲಕ್ಕೆ ಯಾವುದೇ
ಅಹಿತಕರ ಘಟನೆಗೆ ಆಸ್ಪದ ನೀಡದೇ, ಶಾಂತಿ ಕಾಪಾಡಿಕೊಂಡು ಬರುವಂತೆ ಕೋರಲಾಗಿದೆ. ಈ ನಿಷೇದಾಜ್ಞೆಯನ್ನು
ಉಲ್ಲಂಘಿಸಿದಲ್ಲಿ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಲ್ಲಿ ಪ್ರಯತ್ನಿಸಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ
ಜರುಗಿಸಲಾಗುವುದೆಂದು ಈ ಮೂಲಕ ಎಲ್ಲ ಸಾರ್ವಜನಿಕರಿಗೆ ತಿಳಿಸಲಾಗಿದೆ.
