Breaking News

ಬೆಳಗಾವಿ ಎಪಿಎಂಸಿ: ತರಕಾರಿ ಮಾರಾಟ-ಖರೀದಿಗೆ ಸಮಯ ನಿಗದಿ

ಬೆಳಗಾವಿ- ಬೆಳಗಾವಿ ಸಗಟು ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚು ಜನಸಂದಣಿ ಸೇರುತ್ತಿರುವುದರಿಂದ ರೈತ ಬಾಂಧವರು ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಬೇಡಿಕೆ

ಇರುವಷ್ಟು ಮಾತ್ರ ತರಕಾರಿಗಳನ್ನು ವ್ಯಾಪಾರಕ್ಕಾಗಿ ತರಬೇಕು ಎಂದು ಎಪಿಎಂಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಕೋವಿಡ್ -19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಮಾರುಕಟ್ಟೆ ಪ್ರಾಂಗಣದಲ್ಲಿ ಜನಸಂದಣಿ ಕಡಿಮೆಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅದೇ ರೀತಿ ನಗರದಲ್ಲಿ ಮಾರಾಟಕ್ಕಾಗಿ ಖರೀದಿ ಮಾಡುವ ಚಿಲ್ಲರೆ ವರ್ತಕರು ಮತ್ತು ಸಗಟು ಖರೀದಿದಾರರು ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಸರದಿ ಸಾಲಿನಲ್ಲಿ ಖರೀದಿಸಬೇಕು ಎಂದು ಕೋರಿದ್ದಾರೆ.
ಒಂದೇ ಕಡೆ ಗುಂಪಿನಲ್ಲಿ ಸೇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದಲ್ಲಿ ಸಾಂಕ್ರಾಮಿಕ ರೋಗ ತಡೆಗಟ್ಟುವುದು ಕಠಿಣವಾಗುತ್ತದೆ.
ಅದೂ ಅಲ್ಲದೇ ಬೆಳಗಾವಿ ನಗರದ ನಾಗರಿಕರು ತರಕಾರಿ ಖರೀದಿಸಲು ನೇರವಾಗಿ ಎಪಿಎಂಸಿಗೆ ಬರುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.
ತೋಟಗಾರಿಕೆ ಇಲಾಖೆಯಿಂದ ನಗರದ ಎಲ್ಲಾ ವಾರ್ಡಗಳಲ್ಲಿ ಪ್ರತಿದಿನ ತರಕಾರಿಯನ್ನು ಮಾರಾಟ
ಮಾಡಲು ವ್ಯವಸ್ಥೆ ಮಾಡಲಾಗಿದ್ದು, ಆತಂಕಪಡುವ ಅವಶ್ಯಕತೆ ಇರುವುದಿಲ್ಲ. ಆದಕಾರಣ, ಎಲ್ಲ
ನಾಗರೀಕರು ಕೋವಿಡ್-19 ನಿಯಂತ್ರಣ ಮಾಡಲು ಸಹಕರಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.
****

Check Also

ಶಿಕ್ಷಣ ಕ್ಷೇತ್ರಕ್ಕೆ 1500 ಕೋಟಿ ದೇಣಿಗೆ ನೀಡಿದ ಅಜೀಂ ಪ್ರೇಮಜೀ….

“ನಮ್ಮ‌ ಶಾಲೆ‌ ನಮ್ಮ‌ ಜವಾಬ್ದಾರಿ” ಲೋಗೋ ಅನಾವರಣ ಸರಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ಸಹಕಾರಿ: ಸಚಿವ ಮಧು ಬಂಗಾರಪ್ಪ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.