ಬೆಳಗಾವಿ – ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳ್ಳಂ ಬೆಳಿಗ್ಗೆ ಮೂರು ಕಾಡುಕೋಣ ಗಳು ಕಾಣಿಸಿಕೊಂಡಿವೆ.
ಸುರ್ಯೋದಯ ವಾಗುತ್ತಿದ್ದಂತೆಯೇ ಹರಗಾಪೂರ ಗ್ರಾಮದ ಪರಿಸರದಲ್ಲಿ ಮೂರು ಕಾಡುಕೋಣ ಗಳು ಕಾಣಿಸಿಕೊಂಡಿದ್ದು ಗ್ರಾಮದ ಜನ ಭಯಭೀತರಾಗಿ ಓಡಾಡಿದ್ದಾರೆ.
ಇನ್ನು ಕೆಲವರು ಕಾಡುಕೋಣ ಹರಗಾಪೂರಕ್ಕೆ ಹರಟೆ ಹೊಡೆಯಲು ಬಂದಿವೆ ಎಂದು ತಿಳಿದು ಕೆಲವರು ಚೀರಾಡಿ ,ಕೂಗಾಡಿ ,ಈ ಕಾಡುಕೋಣಗಳನ್ನು ಬೆದರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಗ್ರಾಮಸ್ಥರು ಒಂದು ಕಾಡುಕೋಣವನ್ನು ಹಿಡಿದು ಕಟ್ಟಿ ಹಾಕಿದ್ದಾರೆ ,ಉಳಿದ ಎರಡು ಕಾಡುಕೋಣ ಹಿಡಿಯುವ ಧುಮಡಿ ಮುಂದುವರೆದಿದೆ ಆದ್ರೆ ಅರಣ್ಯ ಇಲಾಖೆ ಅಧಿಕಾರಿಗಳು ಇನ್ನುವರೆಗೆ ಅಲ್ಲಿಗೆ ಹೋಗಿಲ್ಲ