ಬೆಳಗಾವಿ- ಟೋಪಣ್ಣವರ ಎಂದಾಕ್ಷಣ ಬೆಳಗಾವಿ ಕನ್ನಡ ಹೋರಾಟದ ಇತಿಹಾಸ ಕಣ್ಮುಂದೆ ಬರುತ್ತದೆ.ಯಾಕಂದ್ರೆ ಮಹಾದೇವ ಟೋಪಣ್ಣವರ ಅವರ ಸೇವೆಯನ್ನು ಬೆಳಗಾವಿಯ ಕನ್ನಡಿಗರು ಎಂದೆಂದಿಗೂ ಮರೆಯಲು ಸಾಧ್ಯವೇ ಇಲ್ಲ.
ಎಂಬತ್ತರ ದಶಕದಲ್ಲಿ ಕನ್ನಡಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿರುವ ಮಹಾದೇವ ಟೋಪಣ್ಣವರ ಅವರ ಸುಪುತ್ರ ರಾಜೀವ ಟೋಪಣ್ಣವರ ಅವರು ತಂದೆಯಂತೆ ಒಂದು ದಶಕದವರೆಗೆ ಕನ್ನಡ ಹೋರಾಟ ಮಾಡಿ, ಈಗ ಆಮ್ ಆದ್ಮಿ ಪಕ್ಷದಲ್ಲಿರುವ ಅವರು ಬೆಳಗಾವಿ ಉತ್ತರ ಮತಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ನಿನ್ನೆ ಶನಿವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿರುವ ರಾಜೀವ ಟೋಪಣ್ಣವರ ಮಂಗಳವಾರ ತಮ್ಮ ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಲಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ