Breaking News
Home / Breaking News / ಬೆಳಗಾವಿ ಉತ್ತರಕ್ಕೆ ರಾಜು ಸೇಠ,ದಕ್ಷಿಣಕ್ಕೆ ಪ್ರಭಾವತಿ ಫೈನಲ್!!

ಬೆಳಗಾವಿ ಉತ್ತರಕ್ಕೆ ರಾಜು ಸೇಠ,ದಕ್ಷಿಣಕ್ಕೆ ಪ್ರಭಾವತಿ ಫೈನಲ್!!

ಬೆಳಗಾವಿ-ಕಾಂಗ್ರೆಸ್ ಪಕ್ಷ ಕೊನೆಗೂ ಮೂರನೇಯ ಕಂತಿನ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು ಬೆಳಗಾವಿ ಉತ್ತರಕ್ಕೆ ರಾಜು ಸೇಠ, ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಪ್ರಭಾವತಿ ಚಾವಡಿ ಅವರನ್ನು ಫೈನಲ್ ಮಾಡಲಾಗಿದೆ.

ಬೆಳಗಾವಿ ಉತ್ತರದ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕುರಿತು ಅನೇಕ ವದಂತಿಗಳು ಹರಡಿದ್ದವು,ಅನೀಲ ಬೆನಕೆ ಕಾಂಗ್ರೆಸ್ ಸೇರ್ತಾರೆ,ಎನ್ನುವ ವದಂತಿ ದಟ್ಟವಾಗಿ ಹರಡಿದ ಬೆನ್ನಲ್ಲಿಯೇ ಕಾಂಗ್ರೆಸ್ ಎಲ್ಲ ಉಹಾಪೋಹಗಳಿಗೆ ಬ್ರೇಕ್ ಹಾಕಿದ್ದು ಬೆಳಗಾವಿ ಉತ್ತರಕ್ಕೆ ರಾಜು ಸೇಠ ಅವರ ಹೆಸರನ್ನೇ ಫೈನಲ್ ಮಾಡಿದೆ.

ಅಥಣಿಯಿಂದ ಲಕ್ಷ್ಮಣ ಸವದಿ,ಅರಭಾವಿಯಿಂದ ಅರವಿಂದ ದಳವಾಯಿ,ರಾಯಬಾಗದಿಂದ ಮಹಾವೀರ ಮೋಹಿತೆ ಅವರ ಹೆಸರನ್ನು ಪೈನಲ್ ಮಾಡಲಾಗಿದೆ.ಅರಭಾವಿಯಲ್ಲಿ ಭೀಮಪ್ಪಾ ಗಡಾದ ಅವರ ಪಾಲಿಗೆ ಶಾಕೀಂಗ್ ಸುದ್ದಿ ಹೊರಬಿದ್ದಿದೆ.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *