Breaking News

ಲಕ್ಷ್ಮಣ ಸವದಿ,ರಮೇಶ್ ಜಾರಕಿಹೊಳಿ ನಡುವೆ ಟಾಕ್ ವಾರ್ ಶುರು!!

ಬೆಳಗಾವಿ-ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ,ಇಂದು ಬೆಳಗ್ಗೆ ಬೆಳಗಾವಿಗೆ ಆಗಮಿಸಿರುವ ಲಕ್ಷ್ಮಣ ಸವದಿ ರಮೇಶ್ ಜಾರಕಿಹೊಳಿಗೆ ಟಾಂಗ್ ಕೊಟ್ಟೊದ್ದಾರೆ.ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಸವದಿ ಕುರಿತು ಪೀಡೆ ತೊಳಗಿತು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರ,ಅವರ ದೃಷ್ಟಿಯಲ್ಲಿ ಪೀಡೆ ಅಂತಾ ಇರಬಹುದುಆ ಬೆಳವು ಹೊಕ್ಕ ಮನೆ ಅಳಿವಾಗುತ್ತಿದೆ(ಹಾಳಾಗುತ್ತಿದೆ),ಪಕ್ಷದಲ್ಲಿ ಬೆಳವು ಹೊಕ್ಕಿದೆ ಅಂತಾನೇ ನಾನು ಆ ಮನೆಯಿಂದ ಹೊರ ಬಂದಿದ್ದೇನೆ,ರಮೇಶ್ ಜಾರಕಿಹೊಳಿಗೆ ಬೆಳವು ಎಂದು ಸಂಬೋಧಿಸಿ ನೇರಾನೇರ ಟಕ್ಕರ್ ಕೊಟ್ಟಿದ್ದಾರೆ.

ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವ ವಾತಾವರಣ ಅವರೇ ನಿರ್ಮಾಣ ಮಾಡಿದ್ದು,ಆಪರೇಷನ್ ಕಮಲ ವೇಳೆ ಬಿಜೆಪಿ ನಾಯಕರು ಭಾಷೆ ಕೊಟ್ಟಿದ್ರು,ನೀನು ಉಪಚುನಾವಣೆಯಲ್ಲಿ ಅವರನ್ನ ಗೆಲ್ಲಿಸಬೇಕು,ಬಳಿಕ ಮುಂದಿನ ಅವಧಿಗೆ ಡಿಸಿಎಂ ಮಾಡೋದಾಗಿ ಹೇಳಿದ್ರು,ನಾನೇನೂ ಡಿಸಿಎಂ ಕೇಳಿರಲಿಲ್ಲ, ಮಂತ್ರಿ ಮಾಡಿ ಅಂತೂ ಕೇಳಿರಲಿಲ್ಲ,ಅವರೇ ಕೊಟ್ಟಿದ್ದು, ಡಿಸಿಎಂ ಸ್ಥಾನದಿಂದ ತಗೆಯುವ ವೇಳೆ ಕೇಳಲಿಲ್ಲ.ನಾನೇನೂ ಭ್ರಷ್ಟಾಚಾರ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ನಾ?ಪಕ್ಷಕ್ಕೆ ಕಪ್ಪು ಚುಕ್ಕೆ ತರದ ಹಾಗೇ ಶ್ರದ್ಧೆ ಬದ್ಧತೆಯಿಂದ 20 ವರ್ಷ ಬಿಜೆಪಿ ಪರ ಕೆಲಸ ಮಾಡಿದ್ದೇನೆ.ಇಡೀ ರಾಜ್ಯ ಸುತ್ತಿ ಅನೇಕ ಕಡೆ ಶಾಸಕರ ಆಯ್ಕೆ ಮಾಡುವ ಕೆಲಸ ಮಾಡಿದ್ದೇನೆ ಎಂದರು.

ಉಪಚುನಾವಣೆ ವೇಳೆ ಜವಾಬ್ದಾರಿ ಕೊಟ್ಟಾಗ ಅಭ್ಯರ್ಥಿಗಳ ಗೆಲ್ಲಿಸುವ ಕೆಲಸ ಮಾಡಿದ್ದೇನೆ,ಸಾರ್ವತ್ರಿಕ ಚುನಾವಣೆಯಲ್ಲಿ ಭಾಷೆ ಕೊಟ್ಟ ರೀತಿ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದಿದ್ದೆ,17 ಜನರಿಗೆ ಭಾಷೆ ಕೊಟ್ಟಿದ್ದು ಅವರೆಲ್ಲರಿಗೂ ಕೊಡಬೇಕು ಅಂದ್ರು,17 ಜನರಿಗೆ ಕೊಡಬೇಕೆಂದವರು ಶಂಕರ್ ಗೆ ಏಕೆ ಟಿಕೆಟ್ ಕೊಡಲಿಲ್ಲ ?ಶಂಕರ್‌ನ ಕಿತ್ತು ಹಾಕಿ ಸ್ಪರ್ಧೆಗೂ ಅವಕಾಶ ಕೊಡಲಿಲ್ಲ.ಒಂದು ಮಾನದಂಡ ಮಾಡಿದ್ರೆ ಪ್ರಧಾನಿ ಹಿಡಿದು ಸಾಮಾನ್ಯ ಕಾರ್ಯಕರ್ತವರೆಗೂ ಒಂದೇ ಇರುತ್ತೆ.ಅವರ ಬದುಕನ್ನೇ ಬಿಜೆಪಿಗೆ ಮುಡುಪಿಟ್ಟ ಜಗದೀಶ್ ಶೆಟ್ಟರ್‌ಗೆ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿಲ್ಲ.ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಗಾಳಿಗೆ ತೂರುವ ಕಾರ್ಯ ಆಗಿದೆ.ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಯಾರೂ ತಡೆಯಲಿಕ್ಕೆ ಸಾಧ್ಯವಾಗಲ್ಲ.ಹಿರಿಯರು, ಅಭಿಮಾನಿಗಳ ಕರೆದು ಚರ್ಚೆ ಮಾಡಿ ಎಲ್ಲರ ಒಪ್ಪಿಗೆ ಪಡೆದು ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದಿದ್ದೆ,ಅವರು ಮೊದಲನೇ ಆಪ್ಶನ್ ಕಾಂಗ್ರೆಸ್ ಜೊತೆ ಚರ್ಚೆ ಮಾಡಿ ಎಂದಿದ್ರು,ಇಲ್ಲವಾದ್ರೆ ಪಕ್ಷೇತರ ಆಗಿ ಸ್ಪರ್ಧಿಸಿ ಅಂತಾ ಎರಡನೇ ಆಪ್ಷನ್ ಕೊಟ್ಟಿದ್ರು.ನನ್ನ ಕ್ಷೇತ್ರದ ಜನ ಕಷ್ಟಕಾಲದಲ್ಲಿ ಸಹಾಯ ಮಾಡಿದ್ದಾರೆ ಎಂದು ಲಕ್ಷ್ಮಣ ಸವದಿ ತಮ್ಮ ಮನದಾಳದ ಮಾತನ್ನು ಹೊರಹಾಕಿದ್ರು.

ಕ್ಷೇತ್ರದ ರೈತರು ಸ್ವಾಭಿಮಾನ ದಿಂದ ತಮ್ಮ ಕಾಲು ಮೇಲೆ ನಿಲ್ಲುವ ಸಂಕಲ್ಪ ಇದೆ ಎಂದಿದ್ದೆ,ಭರವಸೆ ಈಡೇರಿಸುವ ಕೆಲಸ ಮಾಡ್ತೀವಿ ಅಂದ್ರು,
ನೀನೇ ಸ್ಪರ್ಧೆ ಮಾಡಬೇಕು ಬೇರೆ ಬೇರೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕು ಎಂದಿದ್ದಾರೆ.ಅದನ್ನ ಒಪ್ಪಿ ಕಾಂಗ್ರೆಸ್ ಪಕ್ಷದ ಸದಸ್ಯನಾಗಿ ಬಂದಿದ್ದೇನೆಒಂದೆರಡು ದಿನಗಳಲ್ಲಿ ನನ್ನ ನಾಮಪತ್ರ ಸಲ್ಲಿಸುತ್ತೇನೆ.ಬಿ ಫಾರಂ ಇಂದು ಸಂಜೆ ಬರುತ್ತೆ ಎಂದ ಲಕ್ಷ್ಮಣ್ ಸವದಿ ಹೇಳಿದ್ರು.

ಲಕ್ಷ್ಮಣ್ ಸವದಿ ದುಡುಕಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿ,ನಾನು ದುಡುಕಿಲ್ಲ, ಸಿಎಂ ಮೇಲೆ ಗೌರವ ಇದೆ.ನಿಜವಾಗಿ ದುಡುಕಿದ್ದು ಅವರು ಎಂದು ಸಿಎಂ ಬೊಮ್ಮಾಯಿ ಹೇಳಿಕೆಗೆ ಉತ್ತರಿಸಿದ ಲಕ್ಷ್ಮಣ್ ಸವದಿ,
ಯಡಿಯೂರಪ್ಪ ಪಕ್ಷ ಬಿಟ್ಟು ಪಕ್ಷ ಬಂದವರಿದ್ದಾರೆ.
ಯಡಿಯೂರಪ್ಪರಿಗೆ ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಕ್ಕಿಲ್ಲ.ಜಗದೀಶ್ ಶೆಟ್ಟರ್ ನಾವು 20-25 ವರ್ಷಗಳಿಂದ ಜೊತೆಗಿದ್ದೇವೆ.ಜಗದೀಶ್ ಶೆಟ್ಟರ್ ಏನು ತಪ್ಪು ಮಾಡಿದ್ದಾರೆ, ಭ್ರಷ್ಟಾಚಾರ ಮಾಡಿದ್ದಾರಾ?ಅವರಿಗೆ ಕೇವಲ 67 ವಯಸ್ಸು ವಯಸ್ಸಿನ ಮಾನದಂಡ ಇದ್ರೆ ಏಕೆ ಟಿಕೆಟ್ ಕೊಡ್ತಿಲ್ಲಬಿಜೆಪಿ ಸ್ಥಾಪನೆಯಾದಾಗಿನಿಂದ ಜಗದೀಶ್ ಶೆಟ್ಟರ್ ತಂದೆ ಕೆಲಸ ಮಾಡಿದ್ದಾರೆ.ಇವತ್ತು 11 ಗಂಟೆಗೆ ಜಗದೀಶ್ ಶೆಟ್ಟರ್ ಕಾರ್ಯಕರ್ತರ ಸಭೆ ಮಾಡ್ತಾರೆ.ಬಳಿಕ ತಮ್ಮ ನಿರ್ಧಾರ ಅವರು ಪ್ರಕಟ ಮಾಡ್ತಾರೆ.ಟಿಕೆಟ್ ವಂಚಿತ ಬಿಜೆಪಿ ಶಾಸಕ ಅನಿಲ್ ಬೆನಕೆ ಕಾಂಗ್ರೆಸ್ ಸೇರ್ಪಡೆ ವಿಚಾರ,ಅವರು ತಮ್ಮ ನಿರ್ಧಾರ ಕೈಗೊಳ್ಳುತ್ತಾರೆ.ಅವರವರ ರಾಜಕೀಯ ಭವಿಷ್ಯ ಅವರು ನಿರ್ಧಾರ ಮಾಡ್ತಾರೆ ಎಂದ ಸವದಿ ಹೇಳಿದ್ರು.

Check Also

ಕ್ಯಾಂಟೋನ್ ಮೆಂಟ್ ವಸತಿ ಪ್ರದೇಶ ಮಹಾನಗರ ಪಾಲಿಕೆಗೆ ಹಸ್ತಾಂತರ ಕುರಿತು ಸಭೆ

15 ದಿನಗಳಲ್ಲಿ ಸಮೀಕ್ಷಾ ವರದಿ‌ ಸಲ್ಲಿಸಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಬೆಳಗಾವಿ ನಗರದ ಪ್ರದೇಶದ ಕ್ಯಾಂಟೋನಮೆಂಟ್ …

Leave a Reply

Your email address will not be published. Required fields are marked *