Breaking News

ಬೆಳಗಾವಿ ಕುವರಿಯ ಅಪೂರ್ವ ಸಾಧನೆ, ಬೆಳಗಾವಿಗೆ ಎರಡನೇಯ ರ್ಯಾಂಕ್!

ಬೆಳಗಾವಿ- ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕುಂದಾನಗರಿ ಕುವರಿಯ ಅಪೂರ್ವ ಸಾಧನೆ ಮಾಡಿದ್ದಾಳೆ.ಕಲಾ ವಿಭಾಗದಲ್ಲಿ ರಾಜ್ಯಕ್ಕೆ ‌ಎರಡನೇ ರ್ಯಾಂಕ್ ಪಡೆದ ಪ್ರಿಯಂಕಾ ಕುಲಕರ್ಣಿ ಬೆಳಗಾವಿಗೆ ಕೀರ್ತಿ ತಂದಿದ್ದಾಳೆ.

ಬೆಳಗಾವಿಯ ಕೆಎಲ್ಇ ಸಂಸ್ಥೆಯ ಲಿಂಗರಾಜ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿರುವ ಪ್ರಿಯಂಕಾ,
ಲಶೇ. 98.6 ಅಂಕ ಪಡೆದು ರಾಜ್ಯಕ್ಕೆ ಎರಡನೇ ರ್ಯಾಂಕ್ ಗಳಿಸಿರುವ ಪ್ರಿಯಂಕಾ ಕುಲಕರ್ಣಿ ಸಾಧನೆಗೈದಿದ್ದಾಳೆ.

ಭೂಗೋಳಶಾಸ್ತ್ರದಲ್ಲಿ 100 ಕ್ಕೆ ನೂರು ಅಂಕ ಪಡೆದಿರುವ ಪ್ರಿಯಂಕಾ ಒಟ್ಟು 592 ಅಂಕ ತಮ್ಮದಾಗಿಸಿಕೊಂಡಿದ್ದಾರೆ.
ತನ್ನ ಸಾಧನೆ ಬಗ್ಗೆ ಮಾಧ್ಯಮಗಳ ಜೊತೆಗೆ ಖುಷಿ ಹಂಚಿಕೊಂಡ ಪ್ರಿಯಂಕಾ ಕುಲಕರ್ಣಿ,
ಕಾಲೇಜಿನ ಪ್ರಾಧ್ಯಾಪಕರು, ಪೋಷಕರ ಸಹಕಾರದಿಂದ ಈ ಸಾಧನೆ ಸಾಧ್ಯವಾಗಿದೆ.
ನಾನು ನಿತ್ಯ‌ 3 ಗಂಟೆ ಓದುತ್ತಿದ್ದೆ, ಪಾಠದ‌ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುತ್ತಿದ್ದೆ.
ಪದವಿ ಶಿಕ್ಷಣದ ಜೊತೆಗೆ ಯುಪಿಎಸ್‌ಸಿ ಸಿದ್ಧತೆ ಮಾಡಿಕೊಳ್ಳಲಿದ್ದೇನೆ.
ನಾನು ಚಿಕ್ಕವಯಸ್ಸಿನಲ್ಲೇ ಜಿಲ್ಲಾಧಿಕಾರಿ ಆಗಬೇಕು,‌ ಜನರ ಸೇವೆ ಮಾಡುವ ಕನಸು ಕಂಡಿದ್ದೆ.
ಚಿಕ್ಕ ವಯಸ್ಸಿ‌ಲ್ಲಿದ್ದಾಗ ನಮ್ಮ ತಂದೆ ಬೆಳಗಾವಿಯ ಸದಾಶಿವ ನಗರದ ಡಿಸಿ ನಿವಾಸ ತೋರಿಸಿದ್ದರು
ಆಗಿನಿಂದಲೇ ಡಿಸಿ ಆಗಬೇಕು ಎಂಬ ಕನಸಿನೊಂದಿಗೆ ವಿದ್ಯಾಭ್ಯಾಸ ಮಾಡುತ್ತಿದ್ದೇನೆ.
ಒಳ್ಳೆಯ ಅಂಕ ಬರುವ ನಿರೀಕ್ಷೆಯಿತ್ತು, ಆದರೆ ರಾಜ್ಯಕ್ಕೆ ಎರಡನೇ ರ್ಯಾಂಕ್ ಬರುತ್ತೇನೆಂದು ಅಂದುಕೊಂಡಿರಲಿಲ್ಲ.
ಎರಡನೇ ರ್ಯಾಂಕ್ ಬಂದಿದಕ್ಕೆ ತುಂಬಾ ಖುಷಿಯಾಗಿದೆ ಜೀವನದಲ್ಲಿ ಎಂದೂ ಮರೆಯಲ್ಲ ಎಂದ ಪ್ರಿಯಂಕಾ ಹೇಳಿದ್ರು.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *