Breaking News

ಬೆಳಗಾವಿಯಲ್ಲಿ ಸಿಲಿಂಡರ್ ಸ್ಪೋಟ ನಾಲ್ವರಿಗೆ ಗಂಭೀರ ಗಾಯ.

 

ಬೆಳಗಾವಿ- ಬೆಳಗಾವಿ ನಗರದ ಗಾಂಧೀನಗರದ ಸುಭಾಷ್ ಗಲ್ಲಿಯಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಿಲಿಂಡರ್ ಸ್ಪೋಟವಾದ ಕಾರಣ ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ‌.

ಗಾಂಧೀನಗರದ ಸುಭಾಷ್ ಗಲ್ಲಿಯಲ್ಲಿ ಮಂಜುನಾಥ ಅಥಣಿ ಹಾಗೂ ಇವರ ಪತ್ನಿ ಲಕ್ಷ್ಮೀ ಗಂಭೀರವಣಾಗಿ ಗಾಯಗೊಂಡಿದ್ದು ಇವರ ಇಬ್ಬರು ಮಕ್ಕಳೂ ಗಾಯಗೊಂಡಿದ್ದು ಇವರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮಂಜುನಾಥ ಅಥಣಿ ಬೆಳಗಾವಿಯ ಕೆಎಸ್ಸಾರ್ಟಿಸಿಯಲ್ಲಿ ಕೆಲಸ ಮಾಡುತ್ತಿದ್ದು, ಇಂದು ಬೆಳಗಿನ ಜಾವ ಡ್ಯೂಟಿಗೆ ಹೋಗುವಾಗ  ಚಹಾ ಮಾಡಲು   ಸಿಲೆಂಡರ್ ಗ್ಯಾಸ್ ಹೊತ್ತಿಸಲು ಲೈಟರ್ ಆನ್ ಮಾಡಿದಾಗ ಸಿಲೆಂಡರ್ ಸ್ಪೋಟವಾದ ಪರಿಣಾಮ ಬೆಂಕಿ ಆವರಿಸಿ ಒಟ್ಡು ನಾಲ್ವರು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಳಗಾವಿಯ ಮಾಳಮಾರುತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Check Also

ಇಂದು ಬೆಳಗಾವಿ ನಗರದಲ್ಲಿ ಬಿಜೆಪಿಯ ಬೃಹತ್ ಪ್ರತಿಭಟನೆ

ಬೆಳಗಾವಿ- ರಾಜ್ಯದಲ್ಲಿ ಉಪ ಚುನಾವಣೆ ಪಕ್ಕದ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಸಂಧರ್ಭದಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಪ್ರಕರಣಗಳು ಪ್ರತಿಭಟನೆಗಳಿಗೆ …

Leave a Reply

Your email address will not be published. Required fields are marked *