ಬೆಳಗಾವಿ-29 ವರ್ಷ ವಯಸ್ಸಿನ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನೊಪ್ಪಿದ ಘಟನೆ,ಬೆಳಗಾವಿ ಮಹಾನಗರದ ಕಾಕತಿ ಠಾಣೆಯಲ್ಲಿ ನಡೆದಿದೆ.
ಕಾಕತಿ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೇದೆ,ಮೆಹಬೂಬ್ ರಾಜಮಹ್ಮದ್ ರೇಶ್ಮಿ (29) ಹೃದಯಾಘಾತದಿಂದ ಮೃತನಾದ ಪೇದೆಯಾಗಿದ್ದುಬೆಳಗ್ಗೆ ಠಾಣೆಗೆ ಬಂದಿದ್ದ ಮೆಹಬೂಬ್ ರೇಶ್ಮಿ ಎದೆ ನೋವು ಅಂತಾ ಮನೆಗೆ ಹೋಗಿದ್ದರು.
ತಕ್ಷಣವೇ ಮನೆಗೆ ತೆರಳಿ ಕೆಲಹೊತ್ತು ವಿಶ್ರಾಂತಿ ಪಡೆದಿದ್ದಾರೆ,ಆದರೆ ಎದೆ ನೋವು ಹೆಚ್ಚಾದ ಹಿನ್ನಲೆಯಲ್ಲಿ ಠಾಣೆಗೆ ಮಾಹಿತಿ ನೀಡಿದ ಕುಟುಂಬಸ್ಥರು,ತಕ್ಷಣವೇ ಠಾಣೆಯ ಸಿಬ್ಬಂದಿ ಕೆಎಲ್ಇಗೆ ದಾಖಲಿಸುವಾಗ ಮಾರ್ಗಮಧ್ಯೆ ಪೇದೆ ಸಾವನ್ನೊಪ್ಪಿದ್ದಾರೆ.
ಇವರ ಪತ್ನಿ ಕೂಡ ಕಾಕತಿ ಠಾಣೆಯಲ್ಲಿ ಮಹಿಳಾ ಪೇದೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ.ಪತ್ನಿ, ಇಬ್ಬರು ಪುತ್ರರು ಸೇರಿ ಅಪಾರ ಬಂದುಗಳನ್ನು ಅಗಲಿರುವ ಮೆಹಬೂಬ್ ರೇಶ್ಮಿ,ಮೆಹಬೂಬ್ ನಿಧನಕ್ಕೆ ಡಿಸಿಪಿ, ಎಸಿಪಿಗಳು ಸೇರಿ ಮಹಾನಗರ ಪೊಲೀಸರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ