Breaking News
Home / Breaking News / ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವ ಪತ್ತೆ…

ಬೆಳಗಾವಿಯ ಕಪಿಲೇಶ್ವರ ಹೊಂಡದಲ್ಲಿ ಎರಡು ಶವ ಪತ್ತೆ…

 

ಬೆಳಗಾವಿ- ಬೆಳಗಾವಿಯ ಕಪಲೇಶ್ವರ ಮಂದಿರದ ಹತ್ತಿರವಿರುವ ಕಪಿಲೇಶ್ವರ ಹೊಂಡದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಎರಡು ಶವಗಳು ಪತ್ತೆಯಾಗಿವೆ.

ಒಂದು ಹೆಣ್ಣು ಒಂದು ಗಂಡು ಹೀಗೆ ಎರಡು ಶವಗಳು ಕಪಿಲೇಶ್ವರ ಹೊಂಡದಲ್ಲಿ ತೇಲಾಡುತ್ತಿವೆ.ಎರಡು ಶವಗಳ ಮುಖ ಕೆಳಗಾಗಿದ್ದರಿಂದ ಶವಗಳ ಗುರುತು ಪತ್ತೆಯಾಗಿಲ್ಲ ಸ್ಥಳಕ್ಕೆ ಹಿರಿಯ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದು ಶವಗಳನ್ನು ಗುರುತಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ.

ಸದ್ಯಕ್ಕೆ ಒಂದು ಹೆಣ್ಣು ಒಂದು ಪುರುಷನ ಶವ ಎಂದು ಗೊತ್ತಾಗಿದೆ.ಕಪಿಲೇಶ್ವರ ಹೊಂಡದ ಸುತ್ತಲು ಜನ ಜಮಾಯಿಸಿದ್ದು ಪೋಲೀಸರು ಶವಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಇಂದು ಬೆಳಗ್ಗೆ ವಾಕ್ ಮಾಡುವಾಗ ಹೊಂಡದಲ್ಲಿ ಎರಡು ಶವಗಳು ತೇಲಾಡುತ್ತಿರುವದನ್ನು ಗಮನಿಸಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *