ಬೆಳಗಾವಿ- ಕುಂದಾನಗರಿ,ಗಡಿನಾಡು ಗುಡಿ,ಕ್ರಾಂತಿಯ ನೆಲ,ಐತಿಹಾಸಿಕ ಬೆಳಗಾವಿ ನಗರ ಈಗ ಎಲ್ಲರ ಪ್ರೀತಿಗೆ ಪಾತ್ರವಾಗುತ್ತಿದೆ.
ಇಲ್ಲಿಯ ಕುಂದಾ ತಿಂದವರು,ಐ ಲವ್ ಬೆಳಗಾವಿ ಎಂದು ಹೇಳ್ತಾ ಇದ್ರು ಕರದಂಟ್ ತಿಂದವರು ಗ್ರೇಟ್ ಬೆಳಗಾವಿ ಅಂದ್ರು,ಇಲ್ಲಿಯ ಕಮಲ ಬಸದಿ ನೋಡಿವರು.ವಂಡರ್ ಬೆಳಗಾವಿ ಅಂದ್ರು ಇಲ್ಲಿಯ ವಾತಾವರಣ ಅನುಭವಿಸಿದ ಅಧಿಕಾರಿಗಳು ಬೆಳಗಾವಿಯಲ್ಲೇ ಮನೆ ಕಟ್ಟಿಕೊಂಡು ಖಾಯಂ ನಿವಾಸಿಗಳಾಗಿ ಐ ಮ್ಯಾರಿ ವಿತ್ ಬೆಳಗಾವಿ ಅಂದ್ರು…
ಇಲ್ಲಿಯ ಮರಾಠಾ ರೆಜಿಮೆಂಟ್,ಇಲ್ಲಿಯ ಏರ್ಫೋರ್ಸ್ ನೋಡಿದ ಪ್ರವಾಸಿಗರು ಐ ಸಲ್ಯುಟ್ ಬೆಳಗಾವಿ ಅಂದ್ರು,ಫೌಂಡ್ರಿ ಕಾರ್ಖಾನೆಗಳು ಉದ್ಯಮಿಗಳಿಗೆ ವೆಲ್ ಕಮ್ ಮಾಡಿದ್ರೆ ಇದೆನ್ನಲ್ಲಾ ಗಮನಿಸಿದ ಬೆಳಗಾವಿ ಮಹಾನಗರ ಪಾಲಿಕೆ ನಗರದ ಚನ್ನಮ್ಮ ವೃತ್ತದಲ್ಲಿ ಐ ಲವ್ ಬೆಳಗಾವಿ ಎಂಬ ಫಲಕ ಹಾಕಿದ್ದು ಈ ಫಲಕ ಎಲ್ಲರ ಗಮನ ಸೆಳೆಯುತ್ತಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ