Breaking News
Home / Breaking News / ಬಾವಿಗೆ ಬಿದ್ದ ನಾಯಿ ರಕ್ಷಿಸಿ ಮಾನವೀಯತೆ ಮೆರೆದ ಫೈಯರ್ ಬ್ರಗೇಡ್.

ಬಾವಿಗೆ ಬಿದ್ದ ನಾಯಿ ರಕ್ಷಿಸಿ ಮಾನವೀಯತೆ ಮೆರೆದ ಫೈಯರ್ ಬ್ರಗೇಡ್.

 

ಬೆಳಗಾವಿ – ಬೆಳಗಾವಿ ಮಹಾನಗರದ ಕ್ಯಾಂಪ್ ಪ್ರದೇಶದ ಬಾವಿಗೆ ಬಿದ್ದು ನರಳಾಡುತ್ತಿದ್ದ ನಾಯಿಯನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ನಾಯಿಯನ್ನು ರಕ್ಷಣೆ ಮಾಡಿದ್ದಾರೆ.

ಬೆಳಗಾವಿಯ ಅಂತೋನಿ ಎಂಬಾತರ ಮನೆಯ ಹಿತ್ತಲಲ್ಲಿ ಸಾಕು ನಾಯಿ ನಿನ್ನೆ ಶನಿವಾರ ಸಂಜೆಯೇ ಬಿದ್ದು ನರಳಾಡುತ್ತಿತ್ತು.ಮನೆಯ ಮಾಲೀಕರು ನಾಯಿಯನ್ನು ಬಾವಿಯಿಂದ ಹೊರತೆಗೆಯಲು ಹರಸಹಾಸ ಪಟ್ಟಿದ್ದಾರೆ. ನಂತರ ಇವತ್ತು ಸಂಜೆ ಬೆಳಗಾವಿಯ ಅಗ್ನಿ ಶಾಮಕ ದಳಕ್ಕೆ ಕರೆ ಮಾಡಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ತಂಡ ಸುಮಾರು ಎರಡು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ನಾಯಿಯನ್ನು ರಕ್ಷಣೆ ಮಾಡಿ ಮಾಲೀಕರಿಗೆ ಒಪ್ಪಿಸಿದ್ದಾರೆ.

ನಾಯಿ ರಕ್ಷಣೆಯ ಕಾರ್ಯಚರಣೆಯಲ್ಲಿ,ವಾಯ್ ಜಿ ಕೋಲಕಾರ,ಆರ್ ಜಿ ಅಪ್ಪಯ್ಯನವರ,ಹೆಚ್ ಓ ಹೆಗಡೆ,ಸಿಡಿ ವಾರಿ,ಮಡ್ಡೆನ್ನವರ ಮೊದಲಾದವರು ಭಾಗವಹಿಸಿದ್ದರು

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *