ಬೆಳಗಾವಿ-ಬೆಳಗಾವಿಯಲ್ಲಿ ದುರ್ಗೆ ಶಾಪಕ್ಕೆ 30ಜನ ಬಲಿ? ಆಗಿದ್ದಾರೆ ಎಂದು ಈ ಹಳ್ಳಿಯ ಜನ ನಂಬಿದ್ದಾರೆ.ದುರ್ಗಾದೇವಿಯ ಭಯಾನಕ ಶಾಪಕ್ಕೆ ಗುರಿಯಾದ್ರಾ ತುರನೂರ ಗ್ರಾಮದ ಜನ! ಅನ್ನೋದು ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆಯಾಗಿದೆ.
ಕೇವಲ ಒಂದೂವರೆ ತಿಂಗಳಲ್ಲಿಯೇ 30ಕ್ಕೂ ಅಧಿಕ ಜನರ ಬಲಿ ಪಡೀತಾ ದೇವಿಯ ಶಾಪ? ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತುರನೂರ ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿದೆ.ಪೂಜೆ ಸಲ್ಲಿಸುವ ಅರ್ಚಕನಿಂದ ದುರ್ಗಾದೇವಿ ಮೂರ್ತಿ ವಿರೂಪ ಹಿನ್ನೆಲೆ ಗ್ರಾಮದಲ್ಲಿ ಜನರ ಸಾವು ಆಗ್ತಿವೆ.ದೇವಿಗೆ ಎಣ್ಣೆಯಿಂದ ನಿತ್ಯ ಪೂಜೆ ಸಲ್ಲಿಸುವುದು ವಾಡಿಕೆ,ಎಣ್ಣೆಯ ಜಿಗಿಯನ್ನು ಕೆತ್ತನೆ ಮಾಡುವಾಗ ದೇವಿ ಮೂರ್ತಿಗೆ ಅರ್ಚಕನಿಂದ ವಿರೂಪ! ಆಗಿದೆ.ಈ ಘಟನೆ ಬಳಿಕ ಗ್ರಾಮದಲ್ಲಿ ಪ್ರತಿದಿನವೊಂದರಂತೆ ಸಾವು ಸಂಭವಿಸುತ್ತಿದೆ.ಸರಣಿ ಸಾವು ಕಾಕತಾಳೀಯವೋ? ದುರ್ಗಾದೇವಿ ಶಾಪವೋ? ಗೊತ್ತಿಲ್ಲ.ಆದ್ರೆ ತಿಂಗಳಲ್ಲಿ ಒಂದೇ ಹಳ್ಳಿಯಲ್ಲಿ ಸರಣಿ ಸಾವು ಆಗುತ್ತಲೇ ಇದೆ.
ಆದ್ರೆ, ಗ್ರಾಮಸ್ಥರು ಹೇಳುವಂತೆ ದೇವಿ ಮುನಿಸಿನಿಂದ ಗ್ರಾಮದಲ್ಲಿ ಸಾವು ಆಗ್ತಿವೆ.ಜೋಗತಿ ಮೈಯಲ್ಲಿ ಬಂದ ದುರ್ಗೆಯ ನುಡಿಗೆ ತುರನೂರ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ.
ನನ್ನ ಎರಡು ಕಣ್ಣು ಕೆತ್ತನೆ ಮಾಡಿರಬಹುದು..!ಆದರೆ,ನನಗೆ ಮೈತುಂಬ ಕಣ್ಣುಗಳಿವೆ ಎಂದು ಇಡೀ ಊರಿಗೆ ಊರೇ ಒಯ್ಯುತ್ತೇನೆಂದು ಜೋಗತಿ ಮೈಯಲ್ಲಿ ಬಂದು ದೇವಿ ಹೇಳಿದ್ದು ಎಂದು ಗ್ರಾಮಸ್ಥರು ಹೇಳ್ತಿದ್ದಾರೆ.
ದೇವಿಯ ಹೇಳಿಕೆ ಬೆನ್ನಲ್ಲೇ ಧಾರ್ಮಿಕ ಕಾರ್ಯ ಕೈಗೊಳ್ಳುತ್ತಿರುವ ಗ್ರಾಮಸ್ಥರು,ಅರ್ಚಕರ ಸಲಹೆಯಂತೆ ಹೋಮ ಹವನ, ಅಭಿಷೇಕ, ದೇವಿಯ ಕಾಂತಿ ಕಾರ್ಯಕ್ಕೆ ಗ್ರಾಮಸ್ಥರ ನಿರ್ಧರಿಸಿದ್ದಾರೆ.
ಅಲ್ಲದೆ ಗ್ರಾಮದಲ್ಲಿ ಮಂಗಳವಾರ ದಿನ ವಾರ ಹಿಡಿದು ದೇವರಿಗೆ ಉಡಿ ತುಂಬು ಕಾರ್ಯ ನಡೆಯುತ್ತಿದೆ.ಆ ದಿನ ಯಾರೂ ಕೆಲಸ ಕಾರ್ಯ ಮಾಡದೇ ಮನೆಯಲ್ಲಿ ದೇವಿ ಜಪ ಮಾಡಲಾಗುತ್ತಿದೆ.ಅರ್ಚಕರ ಸಲಹೆಯಂತೆ ಕಳೆದ 15 ದಿನಗಳಿಂದ ದೇವಿಯ ಗರ್ಭಗುಡಿ ಮುಚ್ಚಿರುವ ಗ್ರಾಮಸ್ಥರು ಮನೆಗಳಲ್ಲಿ ನಿತ್ಯ ದೇವಿಯ ಜಪ ಮಾಡುತ್ತಿದ್ದಾರೆ.
ಅರ್ಚಕರು ಬಂದಾಗ ಮಾತ್ರ ಗರ್ಭಗುಡಿ ತೆರೆದು ಪೂಜೆ ಸಲ್ಲಿಸಲಾಗುತ್ತಿದೆ. ಇದೇ ತಿಂಗಳ 15 ರಂದು ದೇವಿ ಜಾತ್ರೆ ಮಾಡಲು ಗ್ರಾಮಸ್ಥರ ನಿರ್ಧಾರ ಮಾಡಿದ್ದಾರೆ.ಆ ವೇಳೆ ಹೋಮ- ಹವನ, ಕುಂಭಮೇಳ, ಉಡಿ ತುಂಬುವ ಕಾರ್ಯ ನಡೆಯಲಿದೆ.ಮನೆಗೊಂದು ಕುರಿ ಮರಿಯನ್ನು ದೇವಿಗೆ ಹರಕೆ ಕೊಡಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.