Breaking News

ಈ ಅವಮಾನ ಸಹಿಸಲು ಸಾಧ್ಯವೇ ಇಲ್ಲ.ಇದಕ್ಕೆ ಕತ್ತರಿ ಬೀಳಲೇ ಬೇಕು…!!

ಬೆಳಗಾವಿ- ಕನ್ನಡದ ಸೂಪರ್ ಸ್ಟಾರ್ ಅಪಹರಣ ಆದಾಗ ಅವರ ಬಿಡುಗಡೆಗೆ ಕರೀಂ ತೆಲಗಿ ಹಣ ಕೊಟ್ಟಿದ್ದರು. ಇಂತಹ ಒಂದು ವಿವಾದಾತ್ಮಕ ಅಂಶ ಈಗ Sony LIV ನ #Scam2003OnSonyLIV ನಲ್ಲಿ ಪ್ರಸ್ತಾಪ ಆಗಿದೆ..ಇದು ತೆಲಗಿ ಛಾಪಾ‌ಕಾಗದ ಹಗರಣ ಆಧರಿಸಿದ ಸತ್ಯ ಘಟನೆಯ ವೆಬ್ ಸಿರೀಸ್.

ಇದರಲ್ಲಿ ಕನ್ನಡ ಚಿತ್ರರಂಗ ಹಾಗೂ ಸಂಬಂಧಿಸಿದವರ ಅನುಮತಿ ಪಡೆದು ಈ ಸನ್ನಿವೇಶ ಮಾಡಿದ್ರಾ? ಅನ್ನೋ ಪ್ರಶ್ನೆ ‌ಮೂಡಿದೆ.ಯಾಕಂದ್ರೆ ಈಗ ಬಿಡುಗಡೆ ಆಗಿರೋ ಭಾಗ ಎರಡರ ಮೊದಲ ಎಪಿಸೋಡ್‌ನಲ್ಲಿ ಕನ್ನಡದ ಸೂಪರ್ ಸ್ಟಾರ್ ವೊಬ್ಬರ ಅಪಹರಣ ಆಗುತ್ತದೆ. ಆ ಸೂಪರ್ ಸ್ಟಾರ್ ಹೆಸರು ಜೀವರಾಮ ಅಂತಾ ಇಟ್ಟಿದ್ದಾರೆ. ಚಂದನಚೋರ್ ಅಪಹರಣ ಮಾಡಿದಾ ಎನ್ನುವ ಅಂಶ ಇದ್ದು, ಸ್ಟಾರ್ ಬಿಡುಗಡೆಗೆ ಚೋರ್ ಹಣದ ಬೇಡಿಕೆ ಇಡುತ್ತಾನೆ. ಆಗ ಶೇಖ್ ಎಂಬ ರಾಜಕಾರಣಿ ತೆಲಗಿಯಿಂದ ಹಣ ಕೇಳುತ್ತಾನೆ.
ತೆಲಗಿ ಹಣವನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಾರೆ.

ಆ ಬಳಿಕವೇ ಸೂಪರ್ ಸ್ಟಾರ್ ಬಿಡುಗಡೆ ಆಗುತ್ತದೆ..ಇಷ್ಟು ಸನ್ನಿವೇಶ ಇದ್ದು ಬಿಟ್ರೆ ಅದು ಯಾರಿಗೆ ಸಂಬಂಧಿಸಿದ್ದು ಅಂತಾ ಕನ್ನಡಿಗರು ಸಲೀಸಾಗಿ ಉಹಿಸಿಬಿಡಬಲ್ಲರು.
ಯಾಕಂದ್ರೆ ಕರ್ನಾಟಕದಲ್ಲಿ ಅಪಹರಣಕ್ಕೆ‌ಒಳಗಾದ ಸ್ಟಾರ್ ಒಬ್ಬರೇ..ಕನ್ನಡದ ಸೂಪರ್ ಸ್ಟಾರ್ ಅಪಹರಣ ಆಗಿದ್ದು ಅಂದ್ರೆ ಅದು ಕನ್ನಡದ ವರನಟ ಡಾ. ರಾಜ್‌ಕುಮಾರ ಅಲ್ವಾ..?ಹಾಗಾದ್ರೆ ರಾಜಕುಮಾರ ಬಿಡುಗಡೆಗೆ ಹಣ ಸಂದಾಯ ಆಗಿತ್ತಾ?ಯಾಕಂದ್ರೆ ಈ ಆರೋಪ‌ ಮಾಡಿದ್ದ ನಕ್ಕಿರನ್ ಸಹಾಯಕನ ಮೇಲೆ ಆಗ ಸಿಎಂ ಆಗಿದ್ದ ಎಸ್.ಎಂ. ಕೃಷ್ಣ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ.

ಹಾಗಾದರೆ ಹಣ ಸಂದಾಯ ಆಗಿತ್ತು ಅನ್ನೋದೇ ಕೇಸ್ ಆಗಿರೋವಾಗಇವರು ಅದೇ ಸನ್ನಿವೇಶ ಇಟ್ಟುಕೊಂಡು ಹೇಗೆ ಸಿರೀಸ್ ನಲ್ಲಿ ಬಳಸಿಕೊಂಡ್ರು?ಅಷ್ಟಕ್ಕೂ ಅವತ್ತು ನಿಜಕ್ಕೂ ತೆಲಗಿ ಹಣದಿಂದ ರಾಜಕುಮಾರ ಅವರನ್ನು ಬಿಡುಗಡೆ ಮಾಡಿಕೊಂಡು ಬಂದ್ರಾ?ಅದರಲ್ಲಿಯೂ ಕನ್ನಡದ ‌ಒಬ್ಬ ವರನಟನ ಬಗ್ಗೆ ಸರಿಯಾದ ಗೌರವವೂ ಇಲ್ಲದಂತಹ ಸನ್ನಿವೇಶ ಹಾಕಿದ್ದಾರೆ..ಹೀಗಾಗಿ ಈ ಬಗ್ಗೆ ಕನ್ನಡ ಚಿತ್ರರಂಗ ಏನು ಹೇಳುತ್ತೆ?ನಮ್ಮ‌ ವರನಟ ಅವಮಾನ ಹೇಗೆ ಸಹಿಸಲು ಸಾಧ್ಯ.ಈ ಸನ್ನಿವೇಶಕ್ಕೆ ಕತ್ತರಿ ಬಿಳಲೇಬೇಕು..

ಕೃಪೆ- DVK ಫೇಸ್ ಬುಕ್ ವಾಲ್

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *