Breaking News
Home / Breaking News / ಬೆಳ್ಳಂ ಬೆಳಗ್ಗೆ ಕೋರೆ ಮನೆಯಲ್ಲಿ ಮಾಸ್ಟರ್ ಪ್ಲ್ಯಾನ್….!!

ಬೆಳ್ಳಂ ಬೆಳಗ್ಗೆ ಕೋರೆ ಮನೆಯಲ್ಲಿ ಮಾಸ್ಟರ್ ಪ್ಲ್ಯಾನ್….!!

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಇಂದು ಬೆಳ್ಳಂ ಬೆಳಗ್ಗೆ ಕೋರೆ ನಿವಾಸದಲ್ಲಿ ಚಹಾ ಪೇ ಚರ್ಚಾ ಮಾಡಿದ್ರು ಮಾಜಿ ಶಾಸಕರ ಅನೀಲ ಬೆನಕೆ ಅವರು ಸಹ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಜಗದೀಶ್ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಘೋಷಣೆಯಾದ ಬಳಿಕ ಅವರು ಇದೇ ಮೊದಲ ಬಾರಿಗೆ ಪ್ರಭಾಕರ ಕೋರೆ ಅವರನ್ನು ಭೇಟಿಯಾಗಿ ರಾಜಕೀಯ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದ್ರು…

ಪ್ರಭಾಕರ ಕೋರೆ ಅವರು ಬಿಜೆಪಿಯ ಹಿರಿಯ ನಾಯಕರಾಗಿದ್ದು ವೀರಶೈವ ಲಿಂಗಾಯತ ಸಮಾಜದ ಪ್ರಭಾವಿ ಮುಖಂಡರಾಗಿದ್ದಾರೆ.ಜಗದೀಶ್ ಶೆಟ್ಟರ್ ಗೆಲುವಿಗಾಗಿ ಪ್ರಭಾಕರ್ ಕೋರೆ ಅವರು ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ‌.

ಜಗದೀಶ್ ಶೆಟ್ಟರ್ ಅವರಿಗೆ ಆರಂಭದಲ್ಲಿ ಸ್ಥಳೀಯ ನಾಯಕರು ವಿರೋಧ ಮಾಡಿದ್ರು, ನಮಗೆ ಲೋಕಲ್ ಅಭ್ಯರ್ಥಿಯೇ ಬೇಕು ಎಂದು ಪಟ್ಟು ಹಿಡಿದಿದ್ರು ಆದ್ರೆ ಮಾಜಿ ಸಿಎಂ ಯಡಿಯೂರಪ್ಪ ಅವರ ಮದ್ಯಸ್ಥಿಕೆಯಿಂದ ಈ ಸ್ಥಳೀಯ ನಾಯಕರ ಅಸಮಾಧಾನ ಸಂಪೂರ್ಣವಾಗಿ ಶಮನವಾಗಿದೆ.ಈಗ ಎಲ್ಲ ಸ್ಥಳೀಯ ನಾಯಕರು ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಕೆಲಸ ಮಾಡುತ್ತಿದ್ದಾರೆ‌‌.

ಬೆಳಗಾವಿ ಜಿಲ್ಲೆಯ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು, ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿಯಲ್ಲಿ ಅದ್ಧೂರಿಯಾಗಿ ಸ್ವಾಗತ ಮಾಡಿಕೊಂಡು ಈಗ ಕ್ಷೇತ್ರದಲ್ಲಿ ಪ್ರಚಾರ ಶುರುಮಾಡಿದ್ದಾರೆ.ಬೆಳಗಾವಿ ನಗರ,ಸವದತ್ತಿ,ಯಲ್ಲಿ ಪ್ರಚಾರ ಮುಗಿಸಿರುವ ಜಗದೀಶ್ ಶೆಟ್ಟರ್ ಅವರು ಇಂದು ಗೋಕಾಕ್ ಮತ್ತು ಅರಭಾಂವಿ ಯಲ್ಲಿ ಪ್ರಚಾರ ನಡೆಸಿದ್ದಾರೆ.

Check Also

ಜೈ..ಜಗದೀಶ್ ಹರೇ..ಶೆಟ್ಟರ್ ಮಂತ್ರಿ ಆಗೋದು ಖರೇ…!!

ಬೆಳಗಾವಿ- ಜಗದೀಶ್ ಶೆಟ್ಟರ್ ಅವರಿಗೆ ಭರ್ಜರಿಯಾಗಿ ಬೆಳಗಾವಿಯ ಜನ ಗೆಲ್ಲಿಸಿದ್ದಾರೆ‌. ಶೆಟ್ಟರ್ ಅವರಿಗೆ ಬೆಳಗಾವಿ ಲಕ್ಕಿ ಯಾಕಂದ್ರೆ ಬೆಳಗಾವಿಯಿಂದ ಗೆದ್ದಿರುವ …

Leave a Reply

Your email address will not be published. Required fields are marked *