ಬೆಳಗಾವಿ- ಮಕ್ಕಳ ನಡುವಿನ ಕ್ರಿಕೆಟ್ ಜಗಳ ವಿಕೋಪಕ್ಕೆ ಹೋಗಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು, ಕಲ್ಲು ತೂರಾಟ ನಡೆದ ಘಟನೆ ಬೆಳಗಾವಿಯ ಶಹಾಪೂರ್ ಪ್ರದೇಶದ ಅಳ್ವಾನ್ ಗಲ್ಲಿಯಲ್ಲಿ ನಡೆದಿದೆ.
ಮಕ್ಕಳ ನಡುವಿನ ಕ್ರಿಕೆಟ್ ಜಗಳ ಸಂಜೆ ಹೊತ್ತಿಗೆ ವಿಕೋಪಕ್ಕೆ ಹೋಗಿದೆ, ವಾದ ವಿವಾದ ಆಗಿದೆ
ಈ ಸಂಧರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಕಲ್ಲು ತೂರಾಟ ಆಗಿದೆ. ಈ ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನೆ ನಡೆತುತ್ತಿದ್ದಂತೆ ನಗರ ಪೋಲೀಸ್ ಆಯುಕ್ತರು ಇತರ ಪೋಲೀಸ್ ಅಧಿಕಾರಿಗಳೊಂದಿದೆ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಅಳ್ವಾನ್ ಗಲ್ಲಿಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತಿಯನ್ನು ನಿಯೋಜಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಶಾಂತವಾಗಿದೆ ಈ ಘಟನೆಯಲ್ಲಿ ಗಾಯಗೊಂಡ ಇಬ್ವರನ್ಬು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಆದ್ರೆ ಘಟನೆಯಲ್ಲಿ ನಿಜವಾಗಿಯೂ ಎಷ್ಟು ಜನ ಗಾಯಗೊಂಡಿದ್ದಾರೆ.ಘಟನೆಗೆ ಕಾರಣ ಏನು ? ಎನ್ನುವ ಅಧಿಕೃತ ಮಾಹಿತಿ ಇನ್ನುವರೆಗೆ ಸಿಕ್ಕಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ