ಬೆಂಗಳೂರು-ರಾಷ್ಟ್ರಪಿತ ,ಮಹಾತ್ಮ ಗಾಂಧೀಜಿಯವರ 155 ನೇ ಜಯಂತಿ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರೌಢಶಾಲೆ, ಪದವಿಪೂರ್ವ ಹಾಗೂ ಪದವಿ/ಸ್ನಾತಕೋತ್ತರ ಪದವಿ ವಿಭಾಗಗಳಿಗೆ ಪ್ರತ್ಯೇಕವಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ.
ಬಾಪೂಜಿ ಪ್ರಬಂಧ ಸ್ಪರ್ಧೆ ಪ್ರೌಢಶಾಲಾ ವಿಭಾಗದಲ್ಲಿ ಬೆಳಗಾವಿಯ ದಿವ್ಯಾ ಗಾಣಿಗೇರ ರಾಜ್ಯಕ್ಕೆ ಪ್ರಥಮ ಪಡೆದು ಬೆಳಗಾವಿಗೆ ಕೀರ್ತಿ ತಂದಿದ್ದಾಳೆ.
*ಪ್ರೌಢಶಾಲೆ ವಿಭಾಗ ಫಲಿತಾಂಶ*
ದಿವ್ಯಾ ಶ್ರೀಶೈಲ ಗಾಣಿಗೇರ,ಸರ್ಕಾರಿ ಪ್ರೌಢಶಾಲೆ, ಕೆಎಸ್‌ಆರ್‌ಪಿ,ಮಚ್ಚೆ,ಬೆಳಗಾವಿ(ಪ್ರಥಮ),ಸಮರ್ಥ ನಾಗರಾಜ ಅರ್ಕಸಾಲಿ ,ಸರ್ಕಾರಿ ಪ್ರೌಢಶಾಲೆ,ಹುನಗುಂದ,ತಾ.ಮುಂಡಗೋಡ,ಉತ್ತರ ಕನ್ನಡ ಜಿಲ್ಲೆ(ದ್ವಿತೀಯ), ಚೈತನ್ಯ ಕೆ.ಎಂ.ಸಂತ ಅನ್ನಮ್ಮ ಪ್ರೌಢಶಾಲೆ, ವಿರಾಜಪೇಟೆ, ಕೊಡಗು ಜಿಲ್ಲೆ(ತೃತೀಯ)
*ಪದವಿಪೂರ್ವ ಕಾಲೇಜು ವಿಭಾಗ ಫಲಿತಾಂಶ*
ವಿಜಯಕುಮಾರ್ ಬ.ದೊಡ್ಡಮನಿ,ಸರ್ಕಾರಿ ಪ.ಪೂ.ಕಾಲೇಜು, ಮುಳಗುಂದ,ಗದಗ ಜಿಲ್ಲೆ (ಪ್ರಥಮ), ಪರೀಕ್ಷಾನಂದ್, ಮರಿಮಲ್ಲಪ್ಪ ಪ.ಪೂ.ಕಾಲೇಜು,ಮೈಸೂರು (ದ್ವಿತೀಯ),ಗೋರಮ್ಮ,ಬಾಲಕಿಯರ ಸರ್ಕಾರಿ ಪ.ಪೂ.ಕಾಲೇಜು,ಕೋಲಾರ(ತೃತೀಯ)
*ಪದವಿ/ಸ್ನಾತಕೋತ್ತರ ವಿಭಾಗ ಫಲಿತಾಂಶ*
ಪ್ರವೀಣ್ ನಿಂಗಪ್ಪ ಕಿತ್ನೂರ,ಕನ್ನಡ ವಿ.ವಿ.ಹಂಪಿ,ವಿಜಯನಗರ ಜಿಲ್ಲೆ (ಪ್ರಥಮ),
ಶರಣಪ್ಪ,ತುಮಕೂರು ವಿ.ವಿ.ತುಮಕೂರು(ದ್ವಿತೀಯ), ನಸೀಮಾ ಇ.ಚಪ್ಪರಬಂದ್,ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯಪುರ (ತೃತೀಯ)
ಗಾಂಧೀಜಿಯವರ ತತ್ವಗಳಿಂದ ದೇಶ ಕಟ್ಟುವ ಬಗೆ,ಗಾಂಧೀಜಿ ವಿಚಾರದಲ್ಲಿ ಸತ್ಯಾಗ್ರಹ,ಅಸ್ಪೃಶ್ಯತೆ ನಿವಾರಣೆಗೆ ಗಾಂಧೀಜಿಯವರ ಪ್ರಯೋಗಗಳು,ಗಾಂಧೀಜಿ ಹಾಗೂ ಪ್ರಜಾಪ್ರಭುತ್ವ, ಸ್ವರಾಜ್, ಆರ್ಥಿಕ ಚಿಂತನೆಗಳು,ಸತ್ಯದ ಪರಿಕಲ್ಪನೆ ಮತ್ತಿತರ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು.ರಾಜ್ಯದಾದ್ಯಂತ ಪ್ರೌಢಶಾಲೆ ವಿಭಾಗದಲ್ಲಿ 1,24,392 ವಿದ್ಯಾರ್ಥಿಗಳು,ಪಿಯುಸಿ ವಿಭಾಗದಲ್ಲಿ 12,840 ವಿದ್ಯಾರ್ಥಿಗಳು, ಕಾಲೇಜು ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ 17,062 ವಿದ್ಯಾರ್ಥಿಗಳು ಸೇರಿ ಒಟ್ಟು 1,54,294 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ರಾಜ್ಯ ಮಟ್ಟದಲ್ಲಿ ಪ್ರಥಮ ,ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಕ್ರಮವಾಗಿ 31000 ರೂ.,21,000 ರೂ ಹಾಗೂ 11,000 ರೂ.ನಗದು ಪುರಸ್ಕಾರ ಹಾಗೂ ಪ್ರಮಾಣ ಪತ್ರಗಳನ್ನು ಅಕ್ಟೋಬರ್ 2 ರಂದು ಸಂಜೆ 4.30 ಕ್ಕೆ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೇಂದ್ರ ಕಚೇರಿಯ ಸುಲೋಚನ ಸಭಾಂಗಣದಲ್ಲಿ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಇಲಾಖೆಯ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ತಿಳಿಸಿದ್ದಾರೆ.