Breaking News

ಸಂಸತ್ತಿನ ಅಂಗಳಕ್ಕೆ,ಬೆಳವಡಿ ಮಲ್ಲಮ್ಮನ ಸವಾರಿ….!!

ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ್ ಅವರು ವೀರರಾಣಿ ಬೆಳಗಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ), ಬೆಳವಡಿ ಸಂಘಟನೆಯ ಪದಾಧಿಕಾರಿಗಳ ಜೊತೆಯಲ್ಲಿ ಕೇಂದ್ರ ಸಂಸದೀಯ ಸಚಿವರಾದ ಕಿರಣ್ ರಿಜಿಜು ಅವರನ್ನು ನವದೆಹಲಿಯ ನಿವಾಸದಲ್ಲಿ ಭೇಟಿ ಮಾಡಿ, ನೂತನ ಸಂಸದ ಭವನ ಆವರಣದಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮಳ EQUESTRIAN STATUE (ಕುದುರೆ ಸವಾರಿ ಮೂರ್ತಿ) ಸ್ಥಾಪನೆ ಮಾಡುವಂತೆ ಮನವಿ ಮಾಡುಕೊಂಡರು.

ವೀರ ರಾಣಿ ಬೆಳವಡಿ ಮಲ್ಲಮ್ಮ ಒಬ್ಬ ಧೀರ ಮಹಿಳೆ, 16ನೇ ಶತಮಾನದಲ್ಲಿ ಸುಮಾರು 2000ಕ್ಕೂ ಹೆಚ್ಚು ಮಹಿಳೆಯರನ್ನು ಹೊಂದಿದ ಸೈನ್ಯವನ್ನು ಅವರು ಸ್ಥಾಪಿಸಿದ್ದರು. ಅವರು ಹೊಂದಿದ ಸಾಮ್ರಾಜ್ಯ ಕೊಡುಗೆಯನ್ನು ಗೌರವಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರ ಪ್ರತಿ ವರ್ಷವೂ ಎರಡು ದಿನಗಳ ಕಾಲ ಉತ್ಸವವನ್ನು ಆಚರಿಸುತ್ತದೆ ಎಂದು ಸಂಕ್ಷಿಪ್ತವಾಗಿ ಕೇಂದ್ರ ಸಂಸದೀಯ ಸಚಿವರಿಗೆ ಸಂಸದರಾದ ಜಗದೀಶ್ ಶೆಟ್ಟರ್ ಅವರು ತಿಳಿಸುತ್ತಾ ಅವರ ಸಾಧನೆಯ ಇನ್ನೂ ಹೆಚ್ಚಿನ ಮಾಹಿತಿಯನ್ನು ಒಳಗೊಂಡ ಒಂದು ಕಿರು ಪುಸ್ತಕವನ್ನು ಹಾಗೂ 7 ನಿಮಿಷದ ಸಾಕ್ಷ ಚಿತ್ರವನ್ನು ಸಾದರಪಡಿಸಿದರು.

ವೀರರಾಣಿ ಬೆಳವಡಿ ಮಲ್ಲಮ್ಮನ ಕೊಡುಗೆಯನ್ನು ಗಣನೆಗೆ ತೆಗೆದುಕೊಂಡು, ಅವರ ಗೌರವಾರ್ಥ ಮುಂಬರುವ ದಿನಗಳಲ್ಲಿ ನವದೆಹಲಿಯ “ನೂತನ ಸಂಸದ ಭವನ ಆವರಣದಲ್ಲಿ” ಅವರದ್ದೊಂದು EQUESTRIAN STATUE (ಕುದುರೆ ಸವಾರಿ) ಮೂರ್ತಿ ಸ್ಥಾಪನೆ ಮಾಡುವಂತೆ ಕೋರಿದರು.

ವಿಷಯವನ್ನು ಆಲಿಸಿದ ಕೇಂದ್ರ ಸಚಿವರು ಪ್ರಸ್ತಾಪಿತ ಬೇಡಿಕೆಯನ್ನು ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಹಾಗೂ ಲೋಕಸಭಾ ಅಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆಂದು ಸಂಸದರಾದ ಜಗದೀಶ್ ಶೆಟ್ಟರ್ ಅವರು ತಿಳಿಸಿದರು.

ಪ್ರಸ್ತಾಪಿತ ವಿಷಯವಾಗಿ ಪ್ರಥಮವಾಗಿ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರಿಗೆ ವಿನಂತಿಸಿ ಪತ್ರ ಬರೆದಿದ್ದು, ಸದರಿ ಬೇಡಿಕೆಯನ್ನು ಅವಲೋಕಿಸುವಂತೆ ಕೇಂದ್ರ ಸಂಸದೀಯ ಸಚಿವರಾದ ಶ್ರೀ ಕಿರಣ್ ರಿಜೀಜು ಇವರಿಗೆ ಪ್ರಧಾನ ಮಂತ್ರಿಗಳು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಇಂದು ಈ ಭೇಟಿಗೆ ಅವಕಾಶವನ್ನು ಕೇಂದ್ರ ಸಚಿವರು ನಿಯೋಗಕ್ಕೆ ನೀಡಿದ್ದು ಇಲ್ಲಿ ಸ್ಮರಣೀಯ.

ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ಪಾಟೀಲ ನಿಯೋಗದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮ ಮಹಿಳಾ ಪ್ರತಿಷ್ಠಾನ(ರಿ) ಬೆಳವಡಿ ಕಾರ್ಯದರ್ಶಿಗಳು, ಸವಿತಾ ಪಾಟೀಲ್, ಉಪಾಧ್ಯಕ್ಷ ನೀಲವ್ವ ಕರಿಕಟ್ಟಿ, ಸದಸ್ಯರು ಪಾರ್ವತಿ ಕರಿಕಟ್ಟಿ, ಕಾನೂನು ಸಲಹೆಗಾರರು ರವೀಂದ್ರ ತೋಟಿಗೇರ, ಸಲಹೆಗಾರರು ಶ್ರೀ ಪ್ರಕಾಶ್ ಐಹೊಳೆಯವರು ಭಾಗವಹಿಸಿದ್ದರು.

Check Also

ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?

  ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.