Breaking News

ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ

ಬೆಳಗಾವಿ- ಪ್ರತಿವರ್ಷ ಕಬ್ಬು ಕಟಾವ್ ಮಾಡುವ ಹಂಗಾಮು ಶುರುವಾದ್ರೆ ಸಾಕು ಪಕ್ಕದ ಮಹಾರಾಷ್ಟ್ರ ದಿಂದ ಬೆಳಗಾವಿ ಜಿಲ್ಲೆಗೆ ಸಾವಿರಾರು ಕುಟುಂಬಗಳು ಕಬ್ಬು ಕಟಾವ್ ಬರುತ್ತವೆ.ಈ ಕುಟುಂಬಗಳ ಬಡತನದ ಕಹಾನಿ ಕೇಳಿದ್ರೆ ಕಣ್ಣೀರು ಕಪಾಳಕ್ಕೆ ಬರುವದರಲ್ಲಿ ಸಂದೇಹವಿಲ್ಲ.

ಕಬ್ಬು ಕಟಾವ್ ಮಾಡಲು ಗೋಕಾಕಿಗೆ ಬಂದಿದ್ದ ಮಹಾರಾಷ್ಟ್ರ ಮೂಲದ ಕುಟುಂಬದಲ್ಲಿ ಕರಾಳ ಘಟನೆ ನಡೆದಿದೆ. ಪತಿ ತನ್ನ ಪತ್ನಿಯನ್ನೇ ಭೀಕರವಾಗಿ ಹತ್ಯೆ ಮಾಡಿದ ಬಳಿಕ ತಾಯಿಯ ಶವಕ್ಕೆ ಮಗು ಅಪ್ಪಿಕೊಂಡು ಅಳುತ್ತಿರುವ. ದೃಶ್ಯ ಎಲ್ಲರೂ ಕಣ್ಣೀರು ಹಾಕುವಂತೆ ಮಾಡಿತು.ಕುಡಿದ ಅಮಲಿನಲ್ಲಿ ಕಲ್ಲಿನಿಂದ ಜಜ್ಜಿ ಪತ್ನಿಯ ಭೀಕರ ಕೊಲೆ ಮಾಡಿದ ಪಾಪಿ ಪತಿ,ಕೊಲೆ ಮಾಡುವುದನ್ನು ವಿಡಿಯೋ ಮಾಡಿ ಪತ್ನಿ ಸಂಬಂಧಿಗಳಿಗೆ‌ ಕಳಿಸಿದ್ದಾನೆ.ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಉಪ್ಪಾರಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮಹಾರಾಷ್ಟ್ರ ಮೂಲದ ಬಾಲಾಜಿ ಕಬಲಿ(35)ಎಂಬಾತನಿಂದ ಅಮಾನುಷ ಕೃತ್ಯ ನಡೆದಿದೆ.ಮಿರಾಬಾಯಿ ಕಬಲಿ(25)ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ.ಕಬ್ಬು ಕಟಾವು ಗ್ಯಾಂಗ್ ಜೊತೆ ಕೆಲಸಕ್ಕೆ ಬಂದಿದ್ದ ದಂಪತಿ ಇವರು.

ಪತ್ನಿಯ ಕೊಲೆಯ ಲೈವ್ ವಿಡಿಯೋ ಮಾಡಿಕೊಂಡಿದ್ದ ಮೊಬೈಲ್ ಜಪ್ತಿ ಮಾಡಲಾಗಿದೆ.ಗೋಕಾಕ್ ಗ್ರಾಮೀಣ ಪೋಲಿಸರು ಆರೋಪಿ ಪತಿಯನ್ನು ವಶಕ್ಕೆ ಪಡೆದಿದ್ದಾರೆ.ಕೊಲೆಯಾಗಿ ಬಿದ್ದ ತಾಯಿಯ ಮೊಲೆಹಾಲು ಕುಡಿಯಲು 2ವರ್ಷದ ಮಗು ಪರದಾಡುತ್ತಿರುವ ದೃಶ್ಯ ಹಾಗೂಮೃತದೇಹದ ಮುಂದೆ ಹಸಿವಿನಿಂದ ಮಕ್ಕಳ ರೋಧನ ಕರುಳು ಹಿಂಡುವ ದೃಶ್ಯ ಎಲ್ಲರು ಕಣ್ಣೀರು ಸುರಿಸುವಂತೆ ಮಾಡಿತು.ತಾಯಿ ಕಳೆದುಕೊಂಡು ಇಬ್ಬರು ಮಕ್ಕಳು ತಬ್ಬಲಿಯಾಗಿದ್ದಾರೆ.

Check Also

ನಾಳೆ ಬೆಳಗಾವಿಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರ ದಂಡು

ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಬೆಳಗಾವಿ: ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ …

Leave a Reply

Your email address will not be published. Required fields are marked *