ಬೆಳಗಾವಿ-ಬೆಳಗಾವಿ ತಾಲೂಕಿನ ಸುಳೇಭಾವಿಯಲ್ಲಿ ಜೋಡಿಕೊಲೆ ಪ್ರಕರಣ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಸುಳೇಭಾವಿಯ ಶಶಿಕಾಂತ ಭೀಮಪ್ಪ ಮಿಸಾಳೆ(24) ಅಲಿಯಾಸ್ ಸಸ್ಸಾ, ಯಲ್ಲೇಶ್ ಹುಂಕ್ರಿ ಪಾಟೀಲ್(22) ,ಮಂಜುನಾಥ ಶಿವಾಜಿ ಪರೋಜಿ(22), ದೇವಪ್ಪ ರವಿ ಕುಕಡೊಳ್ಳಿ(26),ಖನಗಾಂವ ಬಿ.ಕೆ. ಗ್ರಾಮದ ಸಂತೋಷ ಯಲ್ಲಪ್ಪ ಹಣಬರಟ್ಟಿ(20), ಭರಮಣ್ಣ ನಾಗಪ್ಪ ನಾಯಕ(20) ಬಂಧಿಸಲಾಗಿದೆ ಎಂದುಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ರವೀಂದ್ರ ಗಡಾದಿ ಹೇಳಿದ್ದಾರೆ.
ಮಹೇಶ್ ಮುರಾರಿ, ಪ್ರಕಾಶ್ ಹುಂಕರಿ ಪಾಟೀಲ್ ಹತ್ಯೆಯಾಗಿತ್ತು,ಎರಡು ಗ್ಯಾಂಗ್‌ಗಳ ಮಧ್ಯೆ ವೈಷಮ್ಯ ಉಂಟಾಗಿ ಕೊಲೆ ಮಾಡಲಾಗಿತ್ತು.ನಿನ್ನೆ ಆರು ಜನರನ್ನು ವಶಕ್ಕೆ ಪಡೆಯಲಾಗಿತ್ತು,ಈ ಆರು ಜನರೇ ಹತ್ಯೆ ಮಾಡಿದ್ದು ಗೊತ್ತಾಗಿ ಬಂಧನ ಮಾಡಿದ್ದೇವೆ,ಕೋರ್ಟ್‌ಗೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಬಂಧಿತರ ಪೈಕಿ ನಾಲ್ವರು ಸುಳೇಭಾವಿ ಗ್ರಾಮದವರು, ಇಬ್ಬರು ಖನಗಾಂವ ಗ್ರಾಮದವರು,ಒಂದೇ ಗ್ಯಾಂಗ್‌ನಲ್ಲಿದ್ದ ಇವರೆಲ್ಲರ ಮಧ್ಯೆ ಐದು ತಿಂಗಳ ಹಿಂದೆ ವೈಷಮ್ಯ ಬೆಳೆದಿತ್ತು,ಮಹೇಶ್ ಮುರಾರಿ ಗ್ಯಾಂಗ್ ನಮಗೆ ಬೆದರಿಕೆ ಹಾಕ್ತಿತ್ತು ಅಂತಾ ಹೇಳುತ್ತಿದ್ದಾರೆ,ನಮಗೆ ಏನಾದರೂ ಮಾಡ್ತಾರೆ ಅಂತಾ ಅಟ್ಯಾಕ್ ಮಾಡಿ ಕೊಲೆ ಮಾಡಿದ್ದಾರೆ,ಕೊಲೆ ಮಾಡುವ ವೇಳೆ ಕಾರದ ಪುಡಿ ಎರಚಿದ ಬಗ್ಗೆ ಗಮನಕ್ಕೆ ಬಂದಿಲ್ಲ,ಕೊಲೆಯಾದವರು ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡ್ತಿದ್ದ ಬಗ್ಗೆ ನಮಗೆ ಗೊತ್ತಾಯ್ತು,ಎಂದು ಡಿಸಿಪಿ ರವೀಂದ್ರ ಗಡಾದಿ ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕರ್ತವ್ಯ ವೇಳೆ ಬೇಜವಾಬ್ದಾರಿ ತೋರಿದ ಆರೋಪದಡಿ ಇಬ್ಬರು ಬೀಟ್ ಪೊಲೀಸರ ಅಮಾನತು ಮಾಡಲಾಗಿದೆ.
ಇಬ್ಬರು ಬೀಟ್ ಪೊಲೀಸರನ್ನು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.ಬೆಳಗಾವಿಯಲ್ಲಿ ಡಿಸಿಪಿ ರವೀಂದ್ರ ಗಡಾದಿ ಹೇಳಿಕೆ ನೀಡಿದ್ದಾರೆ.