Breaking News

ಹಸುಗಳನ್ನು ನೆನೆದು ಭಾವುಕರಾದ VK ಬಾಸ್…!!

ಬೆಳಗಾವಿ-ಬೆಳಗಾವಿಯ ಪ್ರವಾಸಿಮಂದಿರದಲ್ಲಿ ತಮ್ಮ ಫಾರ್ಮಹೌಸ್ ನಲ್ಲಿರುವ ಹಸುಗಳನ್ನು ನೆನೆದು ಮಾಜಿ ಸಚಿವ ವಿನಯ ಕುಲಕರ್ಣಿ ಭಾವುಕರಾದರು.

ಜಿಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣ ಸಂಬಂಧ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಭಂದ ಇರುವಹಿನ್ನೆಲೆಯಲ್ಲಿ ಭಾವುಕರಾಗಿ ಪ್ರತಿಕ್ರಿಯಿಸಿದ ಮಾಜಿ ಸಚಿವ ವಿನಯ ಕುಲಕರ್ಣಿ.

ನಾನೊಬ್ಬ ರಾಜಕಾರಣಿ ಅಷ್ಟೇ ಅಲ್ಲ, ನಾನೊಬ್ಬ ರೈತ, ನನ್ನ ಪಾರ್ಮ್‌ನಲ್ಲಿ ಐದು ಸಾವಿರ ಜಾನುವಾರುಗಳಿವೆ,ನನ್ನ ಮಕ್ಕಳಿಗಿಂತ ಹೆಚ್ಚು ಕಾಳಜಿಯಿಂದ ನಾನು ಅವುಗಳನ್ನು ಸಾಕಿದ್ದೇನೆ.ಧಾರವಾಡದಲ್ಲಿದ್ದಾಗ ಪ್ರತಿದಿನ ಬೆಳಗ್ಗೆ ಐದು ಗಂಟೆಗೆ ಪಾರ್ಮ್‌ಗೆ ಹೋಗುತ್ತಿದ್ದೆ,ಬೆಂಗಳೂರು ಪ್ರವಾಸದಲ್ಲಿದ್ದಾಗ ಹೋದಾಗ ಮಾತ್ರ ನನ್ನ ಫಾರ್ಮ್‌ಗೆ ಹೋಗಲು ಸಾಧ್ಯವಾಗ್ತಿರಲಿಲ್ಲ,ಧಾರವಾಡದಲ್ಲಿದ್ದಾಗ ಪ್ರತಿದಿನ ತಪ್ಪದೇ ಪಾರ್ಮ್‌ಗೆ ಹೋಗಿ ಹಸುಗಳ ಆರೈಕೆ ಮಾಡ್ತಿದ್ದೆ ಎಂದು ವಿನಯ ಕುಲಕರ್ಣಿ ಫಾರ್ಮಹೌಸ್ ನಲ್ಲಿ ಸಾಕಿರುವ ಹಸುಗಳನ್ನು ನೆನೆದು ಭಾವುಕರಾದರು.

ಇಷ್ಟು ದಿನ ಫಾರ್ಮ‌್‌ಗೆ ಹೋಗದೆ ಇರುವುದು ತುಂಬಾ ನೋವು ತರಿಸಿದೆ,ರಾಜ್ಯ, ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಟರರಿಸ್ಟಾ?,ಸದ್ಯಜಾನುವಾರುಗಳನ್ನು ನನ್ನ 22 ವರ್ಷದ ಪುತ್ರಿ ನೋಡಿಕೊಳ್ಳುತ್ತಿದ್ದಾಳೆ,ಎರಡು ಮೂರು ಹಸು ಕಟ್ಟಿದ ರೈತರೇ ಒಂದು ದಿನ ಮನೆ ಬಿಟ್ಟು ಹೋಗಲು ಹಿಂದೇಟು ಹಾಕುತ್ತಾರೆ,ಅಂತದ್ರಲ್ಲಿ ಸಾವಿರಾರು ಹಸುಗಳನ್ನು ಕಟ್ಟಿದ ನಾನು ಮನೆಗೆ ಹೋಗದಿದ್ರೆ ಮುಖ ಪ್ರಾಣಿಗಳ ಕಥೆ ಏನು ??ತನ್ನ ಫಾರ್ಮ್‌ನಲ್ಲಿರುವ ಜಾನುವಾರುಗಳ ನೆನೆದು ಬಾವುಕರಾದ ವಿನಯ್ ಕುಲಕರ್ಣಿ.

ನಾನು ಈ ದೇಶದ ಕಾನೂನಿಗೆ ಗೌರವಿಸುತ್ತೆನೆ, ಕಾನೂನು ಹೋರಾಟ ಮುಂದುವರೆಸುವೆ,
ಬರುವ ದಿನಗಳಲ್ಲಿ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡುವ ವಿಶ್ವಾಸ ವಿದೆ.ಧಾರವಾಡ ಗ್ರಾಮೀಣ ಕ್ಷೇತ್ರದಿಂದಲೇ ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವೆ,
ವಿನಯ್ ಕುಲಕರ್ಣಿ ಕ್ಷೇತ್ರ ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,ಧಾರವಾಡ ಪ್ರವೇಶಕ್ಕೆ ‌ಅನುಮತಿ ಸಿಗದಿದ್ದರೂ ಹೊರಗೆ ಇದ್ದೇ ಕಣಕ್ಕಿಳಿಯುವೆ.ಯಾವುದೇ ಕಾರಣಕ್ಕೂ ಧಾರವಾಡ ಗ್ರಾಮೀಣ ಕ್ಷೇತ್ರ ಬದಲಿಸುವುದಿಲ್ಲ ಎಂದ ವಿನಯ ಕುಲಕರ್ಣಿ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.

Check Also

ಕುಡಚಿ ರೈಲು ನಿಲ್ದಾಣದಲ್ಲಿ ʻವಂದೇ ಭಾರತ ರೈಲುʼ ನಿಲುಗಡೆಗೆ ಸಂಸದೆ ಪ್ರಿಯಾಂಕಾ ಮನವಿ

ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲನ್ನು (ನಂ.20669) ನಿಲುಗಡೆ ಮಾಡಬೇಕೆಂದು ಕೇಂದ್ರ …

Leave a Reply

Your email address will not be published. Required fields are marked *