ಬೆಳಗಾವಿ- ಜೀವನದಲ್ಲಿ ಜಿಗುಪ್ಸೆ ಹೊಂದಿದ ತಾಯಿಯೊಬ್ಬಳು ವೇದನೆಯನ್ನು ತಾಳಲಾರದೆ ಇಬ್ಬರು ಮಕ್ಕಳೊಂದಿದೆ ಮಲಪ್ರಭಾ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸವದತ್ತಿ ತಾಲ್ಲೂಕಿನಲ್ಲಿ ನಡೆದಿದೆ.
ಸವದತ್ತಿ ಪೋಲೀಸ್ ಠಾಣೆಯ ವ್ಯಾಪ್ತಿಯ ವಟ್ನಾಳ ಗ್ರಾಮದ ಹದ್ದಿಯಲ್ಲಿ ಮಲಪ್ರಭಾ ಹಿನ್ನೀರಿನ ದಡದಲ್ಲಿ ಮೂವರ ಶವ ಪತ್ತೆಯಾಗಿದೆ.ರಾಮದುರ್ಗ ತಾಲ್ಲೂಕಿನ ಚುಂಚನೂರು ಗ್ರಾಮದ 32 ವರ್ಷ ವಯಸ್ಸಿನ ಶಶಿಕಲಾ ಅಲಿಯಾಸ್ ತನುಜಾ ಪರಸಪ್ಪ ಗೋಡಿ,ಮಕ್ಕಳಾದಸುದೀಪ 4, ರಾಧಿಕಾ 3 ಇವರ ಶವಗಳು ಪತ್ತೆಯಾಗಿವೆ.
ತಾಯಿ ತನುಜಾ, ತನ್ನ ಮಕ್ಕಳಾದ ರಾಧಿಕಾ ಮತ್ತು ಸುಧೀಪ ಜೊತೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲೀಸ್ರು ತಿಳಿಸಿದ್ದು ಸವದತ್ತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ