Breaking News

ಜೆಡಿಎಸ್ ಸೆರೋಲ್ಲ…ಬಿಜೆಪಿ ಬಿಡೋಲ್ಲ,- ರಮೇಶ್ ಜಾರಕಿಹೊಳಿ

ಬೆಳಗಾವಿ- ನಾನು ಜೆಡಿಎಸ್ ಸೇರುತ್ತಿದ್ದೇನೆ ಎಂದು ಕೆಲವರು ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವದಿಲ್ಲ.ನಾನು ಬಿಜೆಪಿ ಬಿಡೋಲ್ಲ,ಬಿಡೋಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಮಾದ್ಯಮಗಳ ಎದುರು ಸ್ಪಷ್ಟಪಡಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಸಮೀಪದಲ್ಲಿ ರಮೇಶ್ ಜಾರಕಿಹೊಳಿ ಅವರ ಆಪ್ತ ನಾಗೇಶ್ ಮನ್ನೋಳಕರ ಮಾಲಿಕತ್ವದ ಸ್ಮಾರ್ಟ್ ಕ್ಯಾಶ್ಯು ಕಾರ್ಖಾನೆಯನ್ನು ಉದ್ಘಾಟಿಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ,ಕಾಂಗ್ರೆಸ್ ನಲ್ಲಿ ನಾನು ಮಂತ್ರಿಯಾಗಿದ್ದೆ,ಆ ಮಂತ್ರಿ ಸ್ಥಾನ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿ ಸರ್ಕಾರ ರಚಿಸಿದ್ದೇವೆ.ಈಗ ನನ್ನನ್ನು ಮಂತ್ರಿ ಮಾಡಿ ಎಂದು ನಾನು ಯಾರ ಬಳಿಯೂ ಹೋಗಿಲ್ಲ.ಮಂತ್ರಿ ಸ್ಥಾನಕ್ಕಾಗಿ ನಾನು ದೆಹಲಿಗೆ ಹೋಗಿದ್ದೇನೆ ಎಂದು ಮಾದ್ಯಮಗಳಲ್ಲಿ ವರದಿ ಆಗಿದೆ.ಆದ್ರೆ ಬಿಜೆಪಿ ನಾಯಕರು ನನ್ನನ್ನು ಮಂತ್ರಿ ಮಾಡಲಿ ಬಿಡಲಿ ನಾನು ಬಿಜೆಪಿ ಬಿಡೋದಿಲ್ಲ.2023 ರಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದರು.

ಇನ್ನುವರೆಗೆ ನಿಮ್ಮನ್ನು ಮಂತ್ರಿ ಮಾಡಿಲ್ಲವಲ್ಲ ಎಂದು ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಬಿಜೆಪಿ ನಾಯಕರು ಬಹುಶ ನನ್ನ ತಾಳ್ಮೆಯನ್ನು ಪರೀಕ್ಷೆ ಮಾಡುತ್ತಿರಬಹುದು,ಆದ್ರೆ 2023 ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷ ನನಗೆ ಪ್ರಮುಖ ಜವಾಬ್ದಾರಿ ಕೊಡಲಿದೆ. ನಾನು ಮಂತ್ರಿ ಆಗಲಿ ಬಿಡಲಿ, ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ರಮೇಶ್ ಜಾರಕಿಹೊಳಿ ಹೇಳಿದ್ರು

1994 ರಲ್ಲಿ ದೇವೇಗೌಡರು ನನಗೆ ಜನತಾದಳ ಸೇರುವಂತೆ ಆಹ್ವಾನ ನೀಡಿದ್ರು,ಆದ್ರೆ ಆವಾಗ ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠುರನಾಗಿದ್ದೆ.ಕಾಂಗ್ರೆಸ್ ಪಕ್ಷ ನನಗೆ ಮೋಸ ಮಾಡಿಲ್ಲ,ಆದ್ರೆ ಆ ಪಕ್ಷದಲ್ಲಿನ ಆಂತರಿಕವಾಗಿ ನಡೆಯುತ್ತಿದ್ದ ನಾಯಕರ ರಾಜಕಾರಣದಿಂದ ಬೇಸತ್ತು ಬಿಜೆಪಿ ಸೇರ್ಡೆಯಾಗಿದ್ದೇನೆ.ಈಗ ಬಿಜೆಪಿ ಪಕ್ಷದ ನಿಷ್ಠುರನಾಗಿ ಪಕ್ಷದ ಸೇವೆ ಮಾಡುತ್ತೇನೆ.ಯಾವುದೇ ಕಾರಣಕ್ಕೂ ನಾನು ಬಿಜೆಪಿ ಬಿಡೋಲ್ಲ,ಬಿಡೋಲ್ಲ ಎಂದು ಸ್ಪಷ್ಟಡಿಸಿದರು.

Check Also

ನಗರದ ಹೊರವಲಯದ ಮನೆಯಲ್ಲಿ ಕೊಳೆತ ಎರಡು ಶವ ಪತ್ತೆ….

ಅಥಣಿ- ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವಗಳು ಪತ್ತೆಯಾಗಿವೆ.ಅಥಣಿ ಪಟ್ಟಣದ ಮದಭಾವಿ ರಸ್ತೆ ಚೌವ್ಹಾಣ್ ತೋಟದಲ್ಲಿ ಜೋಡಿ ಶವಗಳು ಪತ್ತೆಯಾಗಿವೆ. …

Leave a Reply

Your email address will not be published. Required fields are marked *