ಬೆಳಗಾವಿ-ಅಕ್ಕತಂಗೇರಹಾಳದಿಂದ ಬೆಳಗಾವಿಗೆ ಬರುತ್ತಿದ್ದ ವೇಳೆ ಕ್ರೂಸರ್ ವಾಹನ ಸೇತುವೆಗೆ ಡಿಕ್ಕಿ ಹೊಡೆದು ಬಳ್ಳಾರಿ ನಾಲೆಯಲ್ಲಿ ಉರುಳಿ ಬಿದ್ದ ಪರಿಣಾಮ 7 ಜನರು ಸ್ಥಳದಲ್ಲೇ ಮೃತಪಟ್ಟಿದ್ದು ಹಲವಾರು ಜನ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಮೃತಪಟ್ಟವರೆಲ್ಲರೂ ಅಕ್ಕತಂಗೇರಹಾಳ ಗ್ರಾಮದವರಾಗಿದ್ದಾರೆ.ಬೆಳಗಾವಿ ತಾಲೂಕಿನ ಕಲ್ಯಾಳ್ ಪೂಲ್ ಬಳಿ ಈ ಅಪಘಾತ ಸಂಭವಿಸಿದೆ..ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಸಾಂಬ್ರಾ ರೇಲ್ವೆ ನಿಲ್ದಾಣದ ಬಳಿ ಕಾಮಗಾರಿ ಮಾಡಲು ಕ್ರೂಸರ್ ವಾಹನದಲ್ಲಿ ತೆರಳುತ್ತಿದ್ದ ಕಾರ್ಮಿಕರು ಮೃತಪಟ್ಟಿರುವದು ದುರ್ದೈವ. ಸ್ಥಳಕ್ಕೆ ನಗರ ಪೋಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಭೇಟಿ ನೀಡಿ ಪರಶೀಲಿಸಿದರು.
ವಾಹನ ಚಾಲಕ ಬಚಾವ್..
ಅಪಘಾತಕ್ಕೀಡಾದ ಕ್ರೂಸರ್ ವಾಹನ ಚಲಾಯಿಸುತ್ತಿದ್ದ ವಾಹನ ಚಾಲಕ, ಅಕ್ಕತಂಗೇರಹಾಳ ಗ್ರಾಮದ 32 ವರ್ಷದ ಭೀಮಪ್ಪಾ ಮಲ್ಲಪ್ಪಾ ಕುಂದರಗಿ ಎಂಬಾತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.ಈತ ವಾಹನದಿಂದ ಜಿಗಿದ ಕಾರಣ ಗಾಯಗೊಂಡಿದ್ದಾನೆ. ಎಂದು ಹೇಳಲಾಗಿದೆ. ಕ್ರೂಸರ್ ವಾಹನದಲ್ಲಿ ಒಟ್ಟು 21 ಜನರು ಪ್ರಯಾಣಿಸುತ್ತಿದ್ದರು. 21 ಜನ ಪ್ರಯಾಣಿಕರಲ್ಲಿ 7 ಜನ ಮೃತಪಟ್ಟಿದ್ದು ಒಟ್ಟು 14 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರ ಮಾಹಿತಿ…
ಅಕ್ಕತಂಗೇರಹಾಳ ಗ್ರಾಮದ ಅಡಿವೆಪ್ಪ ಚಿಲಬಾಂವಿ (27), ಬಸವರಾಜ್ ದಳವಿ (30)
ಬಸವರಾಜ ಹನಮನ್ನವರ (51)
4)ಆಕಾಶ ಗಸ್ತಿ (22)
ಗೋಕಾಕ್ ತಾಲೂಕಿನ ದಾಸನಟ್ಟಿ ಗ್ರಾಮದ ಫಕಿರಪ್ಪ ಹರಿಜನ (55), ಮಲ್ಲಪ್ಪ ದಾಸನಟ್ಟಿ (30)
ಮಲ್ಲಾಪುರ(ಎಸ್‌ಎ) ಗ್ರಾಮದ ಬಸವರಾಜ ಸನದಿ(35) ಮೃತ ದುರ್ದೈವಿಗಳು
ಮೃತರಿಗೆ 12 ಲಕ್ಷ ರೂ ಪರಿಹಾರ..
ಬೆಳಗಾವಿ ಸಮೀಪದ ಕಲ್ಯಾಳ ಬ್ರಿಡ್ಜ್ ಬಳಿ ಬಳ್ಳಾರಿ ನಾಲೆಯಲ್ಲಿ ವಾಹನ ಪಲ್ಟಿಯಾಗಿ 7 ಜನರು ಮೃತಪಟ್ಟಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮೃತರ ಕುಟುಂಬಗಳಿಗೆ ಪರಿಹಾರ ಘೋಷಣೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಿಂದ 2 ಲಕ್ಷ ರೂ ಸರ್ಕಾರದಿಂದ 5 ಲಕ್ಷ ರೂ ಪರಿಹಾರ ಜೊತೆಗೆ ಮೃತಪಟ್ಟ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ 5 ಲಕ್ಷ ರೂ ಹೆಚ್ವುವರಿ ಪರಿಹಾರ ನೀಡುವದಾಗಿ ಸಿಎಂ ಬೊಮ್ಮಾಯಿ ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ.