ಬೆಳಗಾವಿ-ವಿಜಯಪೂರದ ವಿಮಾನ ನಿಲ್ಧಾಣಕ್ಕೆ ಜಗಜ್ಯೋತಿ ಬಸವೇಶ್ವರ ವಿಮಾನ ನಿಲ್ಧಾಣ ಎಂದು ನಾಮಕರಣ ಮಾಡಲು ಇಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.ಜೊತೆಗೆ ವಿಜಯಪುರ ವಿಮಾನ ನಿಲ್ಧಾಣದ ಅಭಿವೃದ್ಧಿಗೆ ಸುಮಾರು 350 ಕೋಟಿ ರೂ ಸರ್ಕಾರ ಮಂಜೂರು ಮಾಡಿದೆ.
ಬೆಳಗಾವಿಯ ಸಾಂಬ್ರಾ, ವಿಮಾನ ನಿಕ್ಧಾಣಕ್ಕೆ ವೀರರಾಣಿ ಚನ್ನಮ್ಮಾಜಿಯ ಹೆಸರು ನಾಮಕರಣ ಮಾಡುವಂತೆ ಕಳೆದ ಒಂದು ದಶಕದಿಂದ ನಡೆದ ಹೋರಾಟಕ್ಕೆ ಸರ್ಕಾರ ಸ್ಪಂದಿಸದೇ ಇರುವುದು ದುರ್ದೈವದ ಸಂಗತಿಯಾಗಿದೆ. ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಹೆಸರಿಡಲು ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಮ್ಮತಿ ಸೂಚಿಸಿದರೂ ಸರ್ಕಾರ ಇನ್ನುವರೆಗೆ ಈ ಬೇಡಿಕೆ ಈಡೇರಿಸಲು ಮುಂದಾಗುತ್ತಿಲ್ಲ,ಸ್ಥಳೀಯ ಜನಪ್ರತಿನಿಧಿಗಳ ನಿಶ್ಕಾಳಜಿ,ಸರ್ಕಾರದ ಇಚ್ಛಾಶಕ್ತಿಯ ಕೊರತೆಯಿಂದಾಗಿ,ವಿಮಾನ ನಿಲ್ಧಾಣಕ್ಕೆ ಹೆಸರಿಡುವ ವಿಚಾರದಲ್ಲಿ ಬೆಳಗಾವಿಗೆ ಅನ್ಯಾಯವಾಗಿದೆ.
ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕಿ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ಇತಿಹಾಸದ ಗತವೈಭವ ಬಿಂಬಿಸುವ ಕಿತ್ತೂರು ಉತ್ಸವ ಅಕ್ಡೋಬರ್ 23 ರಿಂದ ಮೂರು ದಿನಗಳ ಕಾಲ ನಡೆಯುತ್ತಿದೆ.ಇಂತಹ ಸೂಕ್ತ ಸಂಧರ್ಭದಲ್ಲಿ ಸರ್ಕಾರ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಾ, ಬೆಳಗಾವಿಯ ಹೈಟೆಕ್ ಬಸ್ ನಿಕ್ಧಾಣಕ್ಜೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರು ನಾಮಕರಣ ಮಾಡುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳಬೇಕಾಗಿದೆ.ಈ ವಿಚಾರದಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರು,ಮತ್ತು ಸಂಸದರು ಪಕ್ಷಾತೀತವಾಗಿ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ.