Breaking News
Home / Breaking News / ಅಫೀಮ ಮಾರಾಟ ಜಾಲ ಪತ್ತೆ,ಇಬ್ಬರ ಅರೆಸ್ಟ್…

ಅಫೀಮ ಮಾರಾಟ ಜಾಲ ಪತ್ತೆ,ಇಬ್ಬರ ಅರೆಸ್ಟ್…

ಬೆಳಗಾವಿ- ಖಚಿತ ಮಾಹಿತಿ ಆದರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸಪೆಕ್ಟರ್ ನಿಂಗನಗೌಡ ಪಾಟೀಲ್ ರವರ ನೇತೃತ್ವದ ತಂಡ ಬೆಳಗಾವಿ ನಗರದ ಆಟೋ ನಗರದಲ್ಲಿ ದಾಳಿ ಮಾಡಿ,ಆಫೀಮು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.

ನಿಷೇಧಿತ ಅಫೀಮ ಮಾರಾಟ ಮಾಡುತ್ತಿದ್ದ,
1) *ರೋಹಿತಾಶ್ವ ಭಗವಾನರಾಮ ಬಿಷ್ನೋಯಿ (24 ) ಸಾ: ಜೋಧಪುರ, ರಾಜಸ್ಥಾನ ಹಾಲಿ ಎಮ್.ಕೆ ಹುಬ್ಬಳ್ಳಿ, ಬೆಳಗಾವಿ*
2) *ರಾಜಕುಮಾರ್ ಜುಗತಾರಾಮ್ ಬಿಶ್ನೊಯಿ(22) ವರ್ಷ, ಸಾ: ಜೋಧಪುರ, ರಾಜಸ್ಥಾನ ಹಾಲಿ ರುಕ್ಮಿಣಿ ನಗರ, ಬೆಳಗಾವಿ*

ಇವರನ್ನು ವಶಕ್ಕೆ ಪಡೆದು ಇವರಿಂದ
*1) 315 ಗ್ರಾಂ ಅಫೀಮ ಅಂದಾಜು ಬೆಲೆ ರೂ. 2,70,000/-* ಹಾಗೂ
*2) ಸ್ವಿಫ್ಟ್ ಡಿಜೈರ್ ಕಾರು-1*
*3) ಮೊಬೈಲ್ ಫೋನ್ -2*
ಇವುಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಈ ಸಂಬಂಧವಾಗಿ ಪಿಐ, ಸಿಸಿಬಿ ರವರು ನೀಡಿದ ದೂರಿನ ಮೇರೆಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ.

ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಇನ್ಸ್ ಪೆಕ್ಟರ್ ನಿಂಗನಗೌಡ ಪಾಟೀಲ್ ಹಾಗೂ ಸಿಬ್ಬಂದಿಗಳಾದ ಎಚ್ಎಸ್ ನಿಸುನ್ನವರ್, ಎಸ್ ಬಿ ಪಾಟೀಲ್, ಎಂ ಎಂ ವಡೆಯರ್, ಎಸ್ ಎಂ ಭಜಂತ್ರಿ, ವೈ ಡಿ ನದಾಫ್ ರವರುಗಳ ಕಾರ್ಯವನ್ನು ಪೊಲೀಸ ಆಯುಕ್ತರು ಹಾಗೂ ಡಿಸಿಪಿ (ಕಾ.ಸು) & ಡಿಸಿಪಿ (ಅಪರಾಧ & ಸಂಚಾರ) ರವರುಗಳು ಪ್ರಶಂಸಿರುತ್ತಾರೆ.

Check Also

ವಿವೇಕರಾವ್ ಪಾಟೀಲ ಇಂದು ಬಿಜೆಪಿಗೆ ಸೇರ್ಪಡೆ…!!

ಬೆಳಗಾವಿ- ಪ್ರತಾಪ್ ರಾವ್ ಪಾಟೀಲ್ ಚಿಕ್ಕೋಡಿ ಅಭ್ಯರ್ಥಿಗೆ ಬಹಿರಂಗವಾಗಿ ಬೆಂಬಲ ಸೂಚಿಸಿದ ಬೆನ್ನಲ್ಲಿಯೇ ನಿರೀಕ್ಷೆಯಂತೆ ಇಂದು ಹುಕ್ಕೇರಿಯಲ್ಲಿ ಅಮೀತ್ ಶಾ …

Leave a Reply

Your email address will not be published. Required fields are marked *