Breaking News

ಬೆಳಗಾವಿಯಲ್ಲಿ ಬುಡಾ ವಿರುದ್ದ ಆಲ್ ಪಾರ್ಟಿ ಪ್ರತಿಭಟನೆ….!!!

ಮನವಿ ಸ್ವೀಕರಿಸಿದ ಬಿಸ್ವಾಸ್, ಕಣಬರ್ಗಿಯ ಬುಡಾ ಲೇಔಟ್ ಠರಾವ್ ಪಾಸ್ ಆಗುವ ವಿಶ್ವಾಸ….

ಬೆಳಗಾವಿ- ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಸಭೆ ನಡೆಯಬೇಕು,ಈ ಸಭೆಯಲ್ಲಿ ಕಣಬರ್ಗಿ ಗ್ರಾಮದ ಹೊಸ ಲೇಔಟ್ ಕುರಿತು ಠರಾವ್ ಪಾಸ್ ಆಗಲೇಬೇಕು ಎಂದು, ಆಗ್ರಹಿಸಿ ಆಮ್ ಆದ್ಮಿ,ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಮುಖಂಡರು ಜಂಟಿಯಾಗಿ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್ಸಿನ ಆರ್ ಪಿ ಪಾಟೀಲ,ಬಿಜೆಪಿಯ ರಾಜೀವ ಟೋಪಣ್ಣವರ ,ಸುಜೀತ ಮುಳಗುಂದ ಸೇರಿದಂತೆ ಆಮ್ ಆದ್ಮಿ ಪಾರ್ಟಿಯ ಮುಖಂಡರು ಹಾಗು ವಿವಿಧ ಸಂಘಟನೆಗಳ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ವಿಶೇಷ.

ನಗರಾಭಿವೃದ್ಧಿ ಪ್ರಾಧಿಕಾರವನ್ನು ನಗರದ ಉಭಯ ಶಾಸಕರು ವ್ಯಯಕ್ತಿಕವಾಗಿ ಬಳಸಿಕೊಳ್ಳಬಾರದು. ಅ.25ರಂದು ಪ್ರಾಧಿಕಾರದ ಸಭೆ ಕರೆದು, ಬುಡಾದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸುವ ಬಗ್ಗೆ ಠರಾವ್ ಪಾಸ್ ಮಾಡಬೇಕು ಎಂದು ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ವಿವಿಧ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದವು.
ನಗರದಲ್ಲಿನ ಚನ್ನಮ್ಮವೃತ್ತದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಮನವಿ ಸ್ವೀಕರಿಸಲು ಸ್ವತಃ ಪ್ರಾದೇಶಿಕ ಆಯುಕ್ತ ಆಧಿತ್ಯ ಆಮ್ಲಾನ್ ಬಿಸ್ವಾಸ್ ಅವರೇ ಬರಬೇಕು ಎಂದು ಪಟ್ಟು ಹಿಡಿದರು.

ಬಳಿಕ ಸ್ಥಳಕ್ಕಾಗಮಿಸಿ ಮನವಿ ಸ್ವೀಕರಿಸಿದ ಬಿಸ್ವಾಸ್ ಅವರು, ಸಭೆ ನಡೆಸುವ ಬಗ್ಗೆ ಭರವಸೆ ನೀಡಿದರು.
ಬಿಜೆಪಿ ಇಬ್ಬರೂ ಶಾಸಕರು ಬುಡಾ ಸಭೆಗಳಿಗೆ ಹಾಜರಾದೇ ಈ ನಿರ್ಗಮಿತ ಅಧ್ಯಕ್ಷ ಘೂಳಪ್ಪ ಹೊಸಮನಿ ಸೇರಿದಂತೆ ಎಲ್ಲ ಸದಸ್ಯರಿಗೆ ನಗರವನ್ನು ಅಭಿವೃದ್ಧಿ ಪಡಿಸುವುದಕ್ಕಾಗಿ ಸಹಕರಿಸದೇ, ಅಭಿವೃದ್ಧಿಗೆ ಮಾರಕವಾಗಿ ಅಡೆತಡೆವೊಡ್ಡುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಜನ ನಿವೇಶನ ಸೇರಿದಂತೆ ಇನ್ನಿತರ ಮೂಲಸೌಕರ್ಯಗಳಿಗಾಗಿ ಅರ್ಜಿಸಲ್ಲಿಸಿ ಕಚೇರಿಗೆ ಅಲೆಯುತ್ತಿದ್ದಾರೆ. ಹೀಗಾಗಿ ಸೂಕ್ತ ಕ್ರಮ ಜರುಗಿಸದಿದ್ದರೇ ನಗರದ ಎಲ್ಲ ಸರ್ಕಾರಿ ಕಚೇರಿಗಳಿಗೆ ಬೀಗ ಜಡಿದು, ತೀವ್ರ ಪ್ರತಿಭಟನೆ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ಸಂಘಟನೆಯ ಮುಖಂಡ, ವಕೀಲ ಎನ್.ಆರ್.ಲಾತೂರ್ ಮಾತನಾಡಿ, ಖಾಸಗಿ ಬಡಾವಣೆಗಳು ರಾಜಕಾರಣಿಗಳು, ರಾಜಕಾರಣಿಗಳ ಹಿಂಬಾಲಕರ ಕೈಯಲ್ಲಿವೆ. ತಮ್ಮದೇ ಲೇಔಟ್ ಅಭಿವೃದ್ಧಿಯಾಗಬೇಕು. ಅವರು ಹೇಳಿದ ಬೆಲೆಗೆ ನಿವೇಶನಗಳನ್ನು ಸಾರ್ವಜನಿಕರು ಖರೀದಿ ಮಾಡುವ ಅನಿವಾರ್ಯತೆ ನಿರ್ಮಿಸಿದ್ದಾರೆ. ಸರ್ಕಾರಿ ಬಡಾವಣೆ ನಿರ್ಮಾಣ ಆದರೆ, ಖಾಸಗಿ ವ್ಯಕ್ತಿಗಳ ಬಡಾವಣೆಗಳಿಗೆ ಬೆಲೆ ಕಡಿಮೆ ಆಗುತ್ತದೆ ಎಂಬ ಉದ್ದೇಶದಿಂದ ಸರ್ಕಾರಿ ಬಡಾವಣೆ ನಿರ್ಮಾಣ ಮಾಡಲು ಬಿಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಕ್ಷಣವೇ ಬುಡಾ ಸಭೆ ಕರೆದು ಅರ್ಹರಿಗೆ ನಿವೇಶನ ಹಂಚಿಕೆ ಮಾಡಬೇಕು. ಇದರಲ್ಲಿ ಕಟ್ಟಡ ಕಾರ್ಮಿಕರಿಗೆ ಶೇ.50ರಷ್ಟು ಮೀಸಲಿಡಬೇಕು. ಬುಡಾದಲ್ಲಿ ರಾಜಕೀಯ ಮಾಡಿ, ಜನರಿಗೆ ಅನ್ಯಾಯ ಮಾಮಾಡಲು ಯತ್ನಿಸಿದರೆ ಸುಮ್ಮನೆ ಕೂರುವುದಿಲ್ಲ. ಅಂಥವರ ವಿರುದ್ಧ ಕಾನೂನು ಬದ್ಧವಾಗಿ ಹೋರಾಟ ನಡೆಲಾಗುವುದು ಎಂದು ಎಚ್ಚರಿಸಿದರು.

ದಲಿತ ಮುಖಂಡ ಮಲ್ಲೇಶ ಚೌಗಲೇ ಹಾಗೂ ವಕೀಲ ಆರ್.ಪಿ.ಪಾಟೀಲ ಮಾತನಾಡಿ, ಬುಡಾದಲ್ಲಿ ನಗರದ ಅಭಿವೃದ್ಧಿಗೆ ನೂರಾರು ಕೋಟಿ ರೂ.ಹಣ ಇದ್ದರೂ, ಅದನ್ನು ಬಳಸಿಕೊಂಡು ಶಾಸಕರಿಗೆ ಜನರ ಹಿತಕಾಯುವ ಆಸಕ್ತಿ ಇಲ್ಲ. ಅವರ ಮಾತು ಕೇಳದ ಅಧಿಕಾರಿಗಳು ಹಾಗೂ ಅಧ್ಯಕ್ಷರನ್ನು ತೆಗೆದು ಹಾಕುವ ಕೆಲಸ ಮಾಡುತ್ತಿದ್ದಾರೆ. ಸತತ ಮೂರು ಸಭೆಗೆ ಗೈರಾಗುವವರ ಸದಸ್ಯತ್ವ ರದ್ದು ಮಾಡಬೇಕು ಎಂಬ ಬಗ್ಗೆ ಕಾನೂನಿನಲ್ಲಿದೆ. ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಬಹು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡ ರಾಜಕುಮಾರ ಟೋಪನ್ನವರ, ಸಿದ್ರಾಯಿ ಸೀಗಿಹಳ್ಳಿ, ಸುಜೀತ್ ಮುಳಗುಂದ, ಮುಕ್ತಾರ್ ಇನಾಮದಾರ್, ರವೀಂದ್ರ ಬೆಲ್ಲದ ಸೇರಿದಂತೆ ಇನ್ನಿತರರು ಇದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *