Breaking News

ಬೆಳಗಾವಿ ಕೈ ತಪ್ಪಿದ ಮತ್ತೊಂದು ಮಹತ್ವದ ಕೇಂದ್ರ

ಕೇಂದ್ರ ಸರ್ಕಾರ ಬೆಳಗಾವಿ ಹಾಗೂ ಕಲಬುರಗಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಆರಂಭಿಸುವುದಾಗಿ ಹೇಳಿತ್ತು. ಇದೀಗ ಬೆಳಗಾವಿ ಬದಲು ಹುಬ್ಬಳ್ಳಿಗೆ ಆದ್ಯತೆ ನೀಡಿದೆ. ಈ ಮೂಲಕ ಬೆಳಗಾವಿಗೆ ಮತ್ತೊಮ್ಮೆ ಘೋರ ಅನ್ಯಾಯ ಆಗಿದೆ. ಬೆಳಗಾವಿಗೆ ಆಗುತ್ತಿರುವ ಅನ್ಯಾಯದ ಪರಮಾವಧಿ ಇದಾಗಿದೆ. ಹಿಂದೆಯೂ ವಿಭಾಗೀಯ ಕೇಂದ್ರ ಬೆಳಗಾವಿಗೆ ಬರಬೇಕಿದ್ದ ಅನೇಕ ಯೋಜನೆಗಳು ಹುಬ್ಬಳ್ಳಿ ಧಾರವಾಡ ಪಾಲಾಗಿದ್ದವು. ಇದೀಗ ಈ ಪಟ್ಟಿಗೆ ವಿಮಾನ ಚಾಲನಾ ತರಬೇತಿ ಕೇಂದ್ರ ಹೊಸ ಸೇರ್ಪಡೆ ಆದಂತಾಗಿದೆ.

ಬೆಳಗಾವಿ :
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರಕ್ಕೆ ಕೇಂದ್ರ ಸರಕಾರ ಹಸಿರು ನಿಶಾನೆ ತೋರಿದೆ. ಇದರಿಂದ ಮಹತ್ವದ ಕೇಂದ್ರವೊಂದು ಬೆಳಗಾವಿ ಕೈ ತಪ್ಪಿದಂತಾಗಿದೆ.
ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪೈಲೆಟ್ ಗಳ ಕೊರತೆಯಿದೆ. ಇದನ್ನು ನೀಗಿಸಲು ಕೇಂದ್ರ ಸರಕಾರ ಮುಂದಾಗಿದೆ. ಇದಕ್ಕಾಗಿ ಪೈಲಟ್ ತರಬೇತಿ ಕೇಂದ್ರಗಳನ್ನು ದೇಶಾದ್ಯಂತ ಸ್ಥಾಪಿಸಲು ಮುಂದಾಗಿದ್ದು ಮಹತ್ವದ ಕೇಂದ್ರ ಇದೀಗ ಹುಬ್ಬಳ್ಳಿ ಪಾಲಾಗುತ್ತಿದೆ.

ಈ ಹಿಂದೆ ಬೆಳಗಾವಿಯಲ್ಲಿ ವಿಮಾನ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಇತ್ತು. ಅದಕ್ಕೆ ಪೂರಕವಾಗಿ ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಆಗಾಗ ಈ ಪ್ರಸ್ತಾಪವನ್ನು ಮಂಡಿಸುತ್ತಿದ್ದರು. ಆದರೆ ಅವರ ನಿಧನದಿಂದ ಆ ಕನಸು ಕಮರಿ ಹೋಗಿದೆ. ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಆಸಕ್ತಿಯ ಫಲವಾಗಿ ಬೆಳಗಾವಿಗೆ ಬರಬೇಕಿದ್ದ ವಿಮಾನ ಚಾಲನಾ ತರಬೇತಿ ಕೇಂದ್ರ ಹುಬ್ಬಳ್ಳಿ ಪಾಲಾಗುತ್ತಿದೆ. ಕೇಂದ್ರ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಈ ತರಬೇತಿ ಕೇಂದ್ರ ಒಪ್ಪಿಗೆ ಸೂಚಿಸಿದ್ದು ಶೀಘ್ರ ಇದಕ್ಕಾಗಿ ವಿಮಾನಯಾನ ಪ್ರಾಧಿಕಾರ ಟೆಂಡರ್ ಕರೆಯುವ ಸಾಧ್ಯತೆಯಿದೆ. ಪ್ರಹ್ಲಾದ್ ಜೋಶಿ ಅವರು ಕೆಲ ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ಚಾಲನಾ ತರಬೇತಿ ಕೇಂದ್ರ ಸ್ಥಾಪನೆಗೆ ಜ್ಯೋತಿರಾದಿತ್ಯ ಸಿಂಧಿಯಾ ಅವರಲ್ಲಿ ಮನವಿ ಮಾಡಿದ್ದರು. ದೇಶದಲ್ಲಿ ವಿಮಾನ ಚಾಲನೆ ಮಾಡುವ ಪೈಲಟ್ ಗಳ ಕೊರತೆ ನೀಗಿಸಲು ಆರು ವಿಮಾನ ತರಬೇತಿ ಕೇಂದ್ರ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಅದರಲ್ಲಿ ಇದೀಗ ಹುಬ್ಬಳ್ಳಿಯೂ ಸೇರ್ಪಡೆ ಆಗುತ್ತಿದೆ.

ಬೆಳಗಾವಿ ವಿಮಾನ ನಿಲ್ದಾಣ ಸ್ವಾತಂತ್ರ್ಯಪೂರ್ವವೇ ನಿರ್ಮಾಣವಾಗಿದೆ. ಗೋವಾ ವಿಮೋಚನೆ ಕಾಲಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದಲೇ ಕಾರ್ಯಾಚರಣೆ ಮಾಡಲಾಗಿತ್ತು. ಅತ್ಯಂತ ಸುರಕ್ಷಿತ ಹಾಗೂ ಸುಪ್ರಸಿದ್ಧ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಬೆಳಗಾವಿ ವಿಮಾನ ನಿಲ್ದಾಣದ ಪಾಲಿಗಿದೆ. ಸಾಕಷ್ಟು ಅವಿಸ್ಮರಣೀಯ ಘಟನೆಗಳಿಗೆ ಬೆಳಗಾವಿ ವಿಮಾನ ನಿಲ್ದಾಣ ಸಾಕ್ಷಿಯಾಗಿತ್ತು. ಆದರೆ ಇದೀಗ ಬೆಳಗಾವಿಗೆ ಬರಬೇಕಿದ್ದ ಎಲ್ಲಾ ಯೋಜನೆಗಳು ನೆರೆಯ ಹುಬ್ಬಳ್ಳಿ ಪಾಲಾಗುತ್ತಿರುವುದು ಬೆಳಗಾವಿ ವಿಭಾಗದ ರಾಜಕೀಯ ಇಚ್ಛಾಶಕ್ತಿ ಕೊರತೆಗೆ ಮತ್ತೊಂದು ನಿದರ್ಶನ ಎನ್ನಬಹುದು.

Check Also

ಯು.ಟಿ ಖಾದರ್ ಹೊಸ ಇತಿಹಾದ, ಬೆಳಗಾವಿ ಸುವರ್ಣಸೌಧದೊಳಗೆ “ಅನುಭವ ಮಂಟಪ.

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಸನ್ಮಾನ್ಯ ಶ್ರೀ ಯು. ಟಿ. ಖಾದರ್ ಅವರ ನೇತೃತ್ವದಲ್ಲಿ, ಜನಮಾನಸದಲ್ಲಿ ಸದಾ ಸ್ಮರಣೀಯವಾಗಿ ಉಳಿಯುವ ಮತ್ತೊಂದು …

Leave a Reply

Your email address will not be published. Required fields are marked *