ಬೆಳಗಾವಿ- ಬೆಳಗಾವಿ ಜಿಲ್ಲೆಯ ಏಳಿಗೆಗಾಗಿ,ರೈತರ ಹಿತಕ್ಕಾಗಿ,ಬ್ಯಾಂಕಿನ ಒಳಿತಿಗಾಗಿ,ಈ ಬಾರಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆಯಬೇಕು ಎಂದು ಪಕ್ಷದ ವರಿಷ್ಠರು ಸೂಚಿಸಿದ ಹಿನ್ನಲೆಯಲ್ಲಿ ಎಲ್ಲ ಭಿನ್ನಾಭಿಪ್ರಾಯ ಬದಿಗಿಟ್ಟು ಜಿಲ್ಲೆಯ ಎಲ್ಲ ಬಿಜೆಪಿ ನಾಯಕರು ಒಗ್ಗಟ್ಟಾಗಿದ್ದೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಡಿಸಿಸಿ ಬ್ಯಾಂಕಿನ ಚುನಾವಣೆ ನಡೆಯುತ್ತಿದೆ.ಇಂದು ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಬಹುತೇಕ 7 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದಾರೆ ಅಧಿಕೃತ ಘೋಷಣೆ ಆಗುವದಷ್ಟೇ ಬಾಕಿ ಉಳಿದಿವೆ ,ಉಳಿದ ಕ್ಷೇತ್ರಗಳಲ್ಲೂ ಅವಿರೋಧ ಆಯ್ಕೆ ಮಾಡಲು ನಾಯಕರೆಲ್ಲರೂ ಇಂದು ಸಂಜೆಯಿಂದ ಪ್ರಯತ್ನ ಆರಂಭಿಸುತ್ತೇವೆ ಈ ವಿಷಯದಲ್ಲೂ ನಾವು ಯಶಸ್ವಿಯಾಗುತ್ತೇವೆ ಎಂದು ಲಕ್ಷ್ಮಣ ಸವದಿ ವಿಶ್ವಾಸ ವ್ಯೆಕ್ತಪಡಿಸಿದರು.
ಅಂಜಲಿ ನಿಂಬಾಳ್ಕರ್ ಅವರು ನಾಮಪತ್ರ ವಾಪಸ್ ಪಡೆಯೋದಿಲ್ಲ ಅಂತಾ ಹೇಳಿದ್ದಾರೆ,ಪಕ್ಷ ಬೇಧ ಮರೆತು ಅವರನ್ನು ಮನವೊಲಿಸುವ ಕೆಲಸ ಮಾಡುತ್ತೇವೆ.ಈ ಬಾರಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಿಸುತ್ತೇವೆ.ಎಂದು ಲಕ್ಷ್ಮಣ ಸವದಿ ಹೇಳಿದ್ರು
ಮುಂದೆ ಬರುವ ಎಲ್ಲ ಪರಿಸ್ಥಿತಿ ಯಲ್ಲೂ ಬೆಳಗಾವಿ ಜಿಲ್ಲೆಯ ನಾಯಕರು ಒಗ್ಗಟ್ಟಾಗಿ ಹೋಗುತ್ತೇವೆ.ನಾವೆಲ್ಲ ಒಂದಾಗಿದ್ದೇವೆ,ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡಿದ್ದೇವೆ ಡಿಸಿಸಿ ಬ್ಯಾಂಕಿನ ಅದ್ಯಕ್ಷ ಉಪಾದ್ಯಕ್ಷ ಚುನಾವಣೆಯಲ್ಲೂ ಯಾವುದೇ ರೀತಿಯ ಬಿನ್ನಾಭಿಪ್ರಾಯ ಇರೋದಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ರು.
ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅನೇಕ ಸಂಕಷ್ಟಗಳು,ಎದುರಾದ ಹಿನ್ನಲೆಯಲ್ಲಿ ಅಭಿವೃದ್ಧಿ ಕುಂಠಿತವಾಗಿದೆ.ಇನ್ಮುಂದೆ ಅದಕ್ಕೆ ವೇಗ ಕೊಡುವ ಕೆಲಸ ಮಾಡುತ್ತೇವೆ.ಸಿಎಂ ಬದಲಾವಣೆ ಮಾಡುವ ವಿಚಾರ ಯತ್ನಾಳ ವ್ಯೆಕ್ತಪಡಿಸಿದ್ದು,ಅದು ಅವರ ವ್ಯೆಯಕ್ತಿಕ ವಿಚಾರ ಅದು ಪಕ್ಷದ ವಿಚಾರ ಅಲ್ಲ ಎಂದು ಸವದಿ ಹೇಳಿದ್ರು.
ಕೆಎಂಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಡಿಸಿಸಿ ಬ್ಯಾಂಕಿನ ವಿಷಯದಲ್ಲೇ ಸಮಂಧಗಳು ಹಾಳಾಗಿದ್ದವು,ಈಗ ಇದೇ ವಿಷಯದಲ್ಲಿ ನಾವು ಒಂದಾಗಿದ್ದೇವೆ,ಜಿಲ್ಲೆಯ ಬಿಜೆಪಿ ಮುಖಂಡರು ಸೇರಿ ಎಲ್ಲರೂ ಒಗ್ಗಟ್ಟಾಗಿ ಎಲ್ಲ ಚುನಾವಣೆಗಳನ್ನು ಎದುರಿಸುತ್ತೇವೆ.ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದ್ರು
ಉಮೇಶ ಕತ್ತಿ,ರಮೇಶ್ ಕತ್ತಿ ಶಶಿಕಲಾ ಜೊಲ್ಲೆ,ಅಣ್ಣಾಸಾಹೇಬ ಜೊಲ್ಲೆ ಈರಣ್ಣಾ ಕಡಾಡಿ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು