Breaking News
Home / Breaking News / ರಾಜಿ ಸಂಧಾನ,ಅಂಜಲಿ ನಿಂಬಾಳ್ಕರ್ ಗೆ ವರದಾನ ….?

ರಾಜಿ ಸಂಧಾನ,ಅಂಜಲಿ ನಿಂಬಾಳ್ಕರ್ ಗೆ ವರದಾನ ….?

ಬೆಳಗಾವಿ-ಇಂದು ಬೆಳಗಾವಿ ಜಿಲ್ಲೆಯಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯಿತು,ಹಲವಾರು ವರ್ಷಗಳಿಂದ ಕಿತ್ತಾಡುತ್ತಿದ್ದ ,ಲಕ್ಷ್ಮಣ ಸವದಿ ಮತ್ತು ಕತ್ತಿ ಸಹೋದರರು ಒಂದಾದ್ರು

ಇಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಲಕ್ಷ್ಮಣ ಸವದಿ,ಉಮೇಶ್ ಕತ್ತಿ ,ರಮೇಶ್ ಕತ್ತಿ,ಮಹಾಂತೇಶ ಕವಟಗಿಮಠ,ಶಶಿಕಲಾ ಜೊಲ್ಲೆ,ಅಣ್ಣಾ ಸಾಹೇಬ್ ಜೊಲ್ಲೆ,ಉಪ ಸಭಾಪತಿ ಮಾಮನಿ,ಈರಣ್ಣಾ ಕಡಾಡಿ ಸಂಜಯ ಪಾಟೀಲ ಅವರು ಒಂದೇ ವೇದಿಕೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ,ನಮ್ಮಲ್ಲಿರುವ ಗೊಂದಲಗಳಿಗೆ ತೆರೆ ಬಿದ್ದಿದೆ.ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎನ್ನುವ ಸಂದೇಶ ನೀಡಿದ್ರು

ಈ ಬಾರಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಜಿಲ್ಲೆಯ ಒಳತಿಗಾಗಿ,ರೈತರ ಹಿತಕ್ಕಾಗಿ ಪಕ್ಷ ಬೇಧ ಮರೆತು ಒಂದಾಗುತ್ತೇವೆ.ಮಹಿಳಾ ಸಬಲೀಕರಣಕ್ಕೆ ಒತ್ತು ಕೊಡುತ್ತೇವೆ ಎಂದು ಲಕ್ಷ್ಮಣ ಸವದಿ ಹೇಳಿದ್ರು

ಲಕ್ಷ್ಮಣ ಸವದಿ ಅವರು ಮಾತನಾಡುವಾಗ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದ್ದು ವಿಶೇಷವಾಗಿತ್ತು. ಖಾನಾಪೂರ ಕ್ಷೇತ್ರದಿಂದ ಶಾಸಕಿ ಅಂಜಲಿ ನಿಂಬಾಳ್ಕರ್ ಮತ್ತು ಮತ್ತು ಮಾಜಿ ಶಾಸಕ ಅರವಿಂದ್ ಪಾಟೀಲ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿ ನಾಯಕರು ಖಾನಾಪೂರ ಕ್ಷೇತ್ರವನ್ನು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರಿಗ ಬಿಟ್ಟು ಕೊಡುವ ಮೂಲಕ ಕಾಂಗ್ರೆಸ್ಸಿಗೆ ಸಮಾಧಾನ ಮಾಡುವ ರಾಜಿ ಸೂತ್ರಕ್ಕೆ ಮುಂದಾಗಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ

ಅರವಿಂದ ಪಾಟೀಲ ಅವರನ್ನು ಮನವೊಲಿಸುವಲ್ಲಿ ಲಕ್ಷ್ಮಣ ಸವದಿ ಯಶಸ್ವಿಯಾಗಿದ್ದಾರೆ ಎಂದು ಹೇಳಲಾಗುತ್ತಿದ್ದು ಬಿಜೆಪಿ ನಡೆಸಿರುವ ರಾಜಿ ಸಂಧಾನ,ಖಾನಾಪೂರ ಶಾಸಕಿ ಅಂಜಲಿ ನಿಂಬಾಳ್ಕರ್ ಗೆ ವರದಾನವಾಗುವ ಸಾದ್ಯತೆಗಳು ಹೆಚ್ಚಿವೆ

ಡಿಸಿಸಿ ಬ್ಯಾಂಕಿನ ನೂರು ವರ್ಷದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬಳು ನಿರ್ದೇಶಕಿ ಆಗುವ ಭಾಗ್ಯ ಒದಗಿ ಬಂದಿದೆ,ಶಾಸಕಿ ಅಂಜಲಿ ನಿಂಬಾಳ್ಕರ್ ಅವರು,ಡಿಸಿಸಿ ಬ್ಯಾಂಕಿಗೆ ಅವಿರೋಧವಾಗಿ ಆಯ್ಕೆಯಾದಲ್ಲಿ ಅವರು ಮೊದಲ ಮಹಿಳಾ ನಿರ್ದೇಶಕಿ ಎಂಬ ಕೀರ್ತಿಗೆ ಪಾತ್ರವಾಗಲಿದ್ದಾರೆ.

ಡಿಸಿಸಿ ಬ್ಯಾಂಕಿಗೆ ಅವಿರೋಧ ಆಯ್ಕೆ ಮಾಡುವ ಕಸರತ್ತಿನಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಕಮಾಂಡರ್ ಪಾತ್ರ ನಿಭಾಯಿಸುತ್ತಿದ್ದಾರೆ.ಈ ವಿಷಯದಲ್ಲಿ ಅವರೇ ಮುಖ್ಯ ಸೂತ್ರಧಾರಿಯಾಗಿದ್ದಾರೆ.

Check Also

ಧಾರವಾಡದಿಂದ, ಪ್ರಲ್ಹಾದ್ ಜೋಶಿ ಬದಲಾವಣೆಗೆ ಮಠಾಧೀಶರ ಪಟ್ಟು…!!

ಧಾರವಾಡ ‌ಲೋಕಸಭೆ ಅಭ್ಯರ್ಥಿ ಪ್ರಹ್ಲಾದ್ ‌ಜೋಶಿ ಬದಲಾವಣೆಗೆ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹ: ಮಾ.31 ರ ಗಡುವು ನೀಡಿದ ಮಠಾಧೀಶರು… ಹುಬ್ಬಳ್ಳಿ- …

Leave a Reply

Your email address will not be published. Required fields are marked *