Breaking News
Home / Breaking News / ಸ್ಥಳೀಯ ನಾಯಕರ ಒಗ್ಗಟ್ಟು,ಶೆಟ್ಟರ್ ಗೆ ಬಿಕ್ಕಟ್ಟು,ಬಿಜೆಪಿಯಲ್ಲಿ ಯಡವಟ್ಟು….!!!

ಸ್ಥಳೀಯ ನಾಯಕರ ಒಗ್ಗಟ್ಟು,ಶೆಟ್ಟರ್ ಗೆ ಬಿಕ್ಕಟ್ಟು,ಬಿಜೆಪಿಯಲ್ಲಿ ಯಡವಟ್ಟು….!!!

ಬೆಳಗಾವಿ- ಬೆಳಗಾವಿ ಲೋಕಸಭಾ ಮತಕ್ಷೇತ್ರ್ರದ ಬಿಜೆಪಿ ಟಿಕೆಟ್ ಇನ್ನುವರೆಗೆ ಅಧಿಕೃತವಾಗಿ ಘೋಷಣೆ ಆಗಿಲ್ಲ ಆದ್ರೆ ಈ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ಆಗೋದು ಖಚಿತವಾದ ಬಳಿಕ, ಬೇರೆ ಜಿಲ್ಲೆಯ ನಾಯಕರಿಗೆ ಬೆಳಗಾವಿಯಿಂದ ಟಿಕೆಟ್ ಬೇಡ,ಎನ್ನುವ ಅಪಸ್ವರ ಶುರುವಾಗಿದ್ದು ಚುನಾವಣೆಯ ಆರಂಭದಲ್ಲೇ ಬಿಜೆಪಿಯಲ್ಲಿ ಬಿಕ್ಕಟ್ಟು ಎದುರಾಗಿದೆ.

ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿಯಿಂದ ಟಿಕೆಟ್ ಬೇಡ ಎಂದು ನೇರವಾಗಿ ಬೆಳಗಾವಿಯ ಯಾವ ಬಿಜೆಪಿ ನಾಯಕನೂ ಹೇಳಿಲ್ಲ,ಆದ್ರೆ ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ,ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನೀಲ ಬೆನಕೆ,ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ,ಹಾಗೂ ಎಂಬಿ ಝಿರಲಿ ,ರಾಜೇಂದ್ರ ಹರಕುಣಿ ಸೇರಿದಂತೆ ಕೆಲವು ಬಿಜೆಪಿ ನಾಯಕರು ಬಿಜೆಪಿಯ ಹಿರಿಯು ಮುಖಂಡ,ಪ್ರಭಾಕರ ಕೋರೆ ಅವರ ಮನೆಯಲ್ಲಿ ಎರಡು ದಿನದ ಹಿಂದೆ ಸಭೆ ಸೇರಿ,ಬೇರೆ ಜಿಲ್ಲೆಯ ನಾಯಕ ಬೆಳಗಾವಿಯಿಂದ ಸ್ಪರ್ದೆ ಮಾಡೋದು ಬೇಡ,ಸ್ಥಳೀಯ ನಾಯಕರಿಗೆ ಟಿಕೆಟ್ ಕೊಡಿ ಎಂದು ಪ್ರಭಾಕರ ಕೋರೆ ಅವರ ಎದುರು ಅಳಲು ತೋಡಿಕೊಂಡು ಅವರ ಮುಖೇನ ಬಿಜೆಪಿ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ರು.

ಇದಾದ ಬಳಿಕ ಜಗದೀಶ್ ಶೆಟ್ಟರ್ ಅವರು ಬೆಳಗಾವಿ ಕ್ಷೇತ್ರದಲ್ಲಿ ಹದಿನೈದು ಹದಿನಾರು ಲಕ್ಷ ಜನ ಮತದಾರರು ಇದ್ದಾರೆ, ಕೇವಲ ಏಳೆಂಟು ಜನ ವಿರೋಧ ಮಾಡಿದ್ದಾರೆ ಎಂದು ಆಡಿದ ಮಾತು ಬೆಳಗಾವಿಯ ಈ ಏಳೆಂಟು ಜನ ಬಿಜೆಪಿ ನಾಯಕರನ್ನು ಕೆರಳಿಸಿದೆ. ಜಗದೀಶ್ ಶೆಟ್ಟರ್ ಹೇಳಿದ ಮಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಸ್ಪರ್ದೆ ಮಾಡಲು ಮತ್ತಷ್ಟು ಬಿಕ್ಕಟ್ಟು ಎದುರಾಗಿದೆ.ಏಳೆಂಟು ಜನ ಮತ್ತಷ್ಟು ಕೆರಳುವಂತೆ ಮಾಡಿದೆ. ಈ ಏಳೆಂಟು ಜನ ಬೆಳಗಾವಿ ಬಿಜೆಪಿ ನಾಯಕರ ಟೀಂ ಒಂದು ಕಡೆ ಮತ್ತೆ ಗೌಪ್ಯ ಸಭೆ ನಡೆಸಿ,ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುವ ನಿರ್ಧಾರ ಕೈಗೊಂಡಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದು ಬಂದಿದೆ.

ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಬಿಜೆಪಿ ನಾಯಕರ ಈ ಟೀಂ, ಪ್ರಪೋಜ್ ಮಾಡುತ್ತದೆಯೋ ಅಥವಾ ಅಪೋಜ್ ಮಾಡುತ್ತಿದೆಯೋ ಒಂದೂ ಗೊತ್ತಾಗುತ್ತಿಲ್ಲ, ಯಾಕಂದ್ರೆ ಈ ಏಳೆಂಟು ನಾಯಕರು ಎಲ್ಲಿಯೂ ಜಗದೀಶ್ ಶೆಟ್ಟರ್ ಅವರನ್ನು ಬಹಿರಂಗವಾಗಿ ವಿರೋಧಿಸಿಲ್ಲ ಹೀಗಾಗಿ ಈ ಟೀಂ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಪ್ರವಾಸ ಮಾಡಿ ಜಗದೀಶ್ ಶೆಟ್ಟರ್ ವಿರುದ್ಧ ಮತ್ತಷ್ಟು ಮಸಲತ್ತು ಮಾಡುವ ಸಾಧ್ಯತೆ ಇದೆ.

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಆರಂಭದಲ್ಲೇ ಬಿಕ್ಕಟು ಎದುರಾಗಿದೆ.ಜಗದೀಶ್ ಶೆಟ್ಟರ್ ಅವರು ಆಡಿದ ಮಾತು ಯಡವಟ್ಡು ಮಾಡಿದ್ದು ಬಿಜೆಪಿಯ ಆಂತರಿಕ ಕಲಹ ಮತ್ತಷ್ಟು ಉಲ್ಬಣಗೊಂಡಿದೆ. ಈ ಬಿಕ್ಕಟು ಶಮನ ಮಾಡಲು ರಾಜ್ಯದ ಬಿಜೆಪಿ ನಾಯಕರು ಇನ್ನುವರೆಗೆ ಮದ್ಯಸ್ಥಿಕೆ ಮಾಡಿಲ್ಲ, ಈ ವಿಚಾರ ಇನ್ನಷ್ಟು ವಿಳಂಬವಾದ್ರೆ ಬೆಳಗಾವಿಯಲ್ಲಿ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ….

ಬೆಳಗಾವಿಯ ಬಿಜೆಪಿ ನಾಯಕರ ಈ ಅಪಸ್ವರ ಕೈ ಪಾರ್ಟಿಗೆ BOOSTER ಸಿಕ್ಕಂತೆ ಆಗಿದೆ.

Check Also

ಸುಳ್ಳು ಹೇಳಿ ನಿಮ್ಮನ್ನು ಬಕ್ರಾ ಮಾಡುವ ಮೋದಿಗೆ ಅಧಿಕಾರ ಕೊಡಬೇಡಿ- ಸಿದ್ರಾಮಯ್ಯ

ಸುಳ್ಳು ಹೇಳುವ ಪ್ರಧಾನಿ ಮೋದಿಗೆ ಅಧಿಕಾರ ನೀಡಬೇಡಿ: ಸಿಎಂ ಸಿದ್ದರಾಮಯ್ಯ ಕಾಗವಾಡ ತಾಲೂಕಿನ ಉಗಾರ ಖುರ್ದನ ವಿಹಾರ ಮೈದಾನದಲ್ಲಿ ಹಮ್ಮಿಕೊಂಡ …

Leave a Reply

Your email address will not be published. Required fields are marked *