ಬೆಳಗಾವಿ/ಮುಂಬಯಿ- ನವೆಂಬರ್ 23 ರಂದು ಬೆಳಗಾವಿಯ ಗಡಿ ವಿವಾದದ ಬಗ್ಗೆ ಮಾನ್ಯ ಸುಪ್ರೀಂ ಕೋರ್ಟಿನಲ್ಲಿ ಅಂತಿಮ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಮಹರಾಷ್ಟ್ರ ಸರ್ಕಾರ ಇಂದು ಮುಂಬಯಿ ಯಲ್ಲಿನ ಸಹ್ಯಾದ್ಯಿ ಗೆಸ್ಟ್ ಹೌಸ್ ನಲ್ಲಿ ಮಹಾರಾಷ್ಟ್ರ ಸರ್ವ ಪಕ್ಷಗಳ ಸಭೆ ನಡೆಸಿ ಕಾನೂನು ತಜ್ಞರ ಜೊತೆ ಸಮಾಲೋಚನೆ ನಡೆಸಿತು.
ಮಧ್ಯಾಹ್ನ ಹನ್ನೆರಡು ಗಂಟೆಗೆ ಆರಂಭವಾದ ಸಭೆ ಮಧ್ಯಾಹ್ನ ,3 ಗಂಟೆಗೆ ಮುಕ್ತಾಯವಾಯಿತು ಮೂರು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಣಯಗಳನ್ನು ಕೈಗೊಂಡಿದೆ.ಗಡಿ ಭಾಗದ ಸಮಸ್ಯಗಳನ್ನು ಆಲಿಸಿ ಅದಕ್ಕೆ ಪರಿಹಾರ ದೊರಕಿಸಿ ಕೊಡುವದಕ್ಕಾಗಿಯೇ ಮಹಾರಾಷ್ಟ್ರ ಇಬ್ಬರು ಸಚಿವರನ್ನು ನೇಮಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.ಜೊತೆಗೆ ನವೆಂಬರ್ 23 ರಂದು ಪ್ರಬಲ ವಾದ ಮಂಡಿಸಲು ನಿರ್ಣಯಿಸಿದೆ.
ಗಡಿವಿವಾದ ಮತ್ತು ಗಡಿ ಭಾಗದ ಸಮಸ್ಯೆಗಳನ್ನು ನೋಡಿಕೊಳ್ಳಲು ಮಹಾರಾಷ್ಟ್ರದ ಉನ್ಬತ ಶಿಕ್ಷಣ ಸಚಿವ ಚಂದ್ರಕಾಂತ ಪಾಟೀಲ ಮತ್ತು ಅಬಕಾರಿ ಸಚಿವ ಶಂಭೋ ರಾಜೆ ಅವರನ್ನು ನೇಮಿಸಿದೆ.
ಸಭೆಯಲ್ಲಿ ಭಾಗವಹಿಸಿದ ಮಹಾರಾಷ್ಟ್ರದ ಪ್ರತಿಪಕ್ಷಗಳ ನಾಯಕರು 23 ರಂದು ಸುಪ್ರೀಂ ಕೋರ್ಟಿನಲ್ಲಿ ನಡೆಯುವ ಅಂತಿಮ ವಿಚಾರಣೆಯ ಸಂಧರ್ಭದಲ್ಲಿ ಮಹಾರಾಷ್ಟ್ರದ ಪರವಾಗಿ ಪ್ರಬಲ ವಾದ ಮಂಡಿಸಲು ನುರಿತ ಕಾನೂನು ತಜ್ಞರನ್ನು ನೇಮಿಸುವದು,ಗಡಿ ವಿವಾದ ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರೋದಿಲ್ಲ ಎನ್ನುವ ತೀರ್ಪು ಹೊರಬಂದಲ್ಲಿ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಮಹಾರಾಷ್ಟ್ರದಿಂದ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುವದು ಸೇರಿದಂತೆ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ.
ಗಡಿ ವಿವಾದದ ಕುರಿತು ಮಹಾರಾಷ್ಟ್ರ ಸರ್ಕಾರ ವಿಶೇಷ ಕಾಳಜಿ ವಹಿಸಿ ಸರಣಿ ಸಭೆಗಳನ್ನು ಮಾಡಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದೆ ಆದ್ರೆ ಕರ್ನಾಟಕ ಸರ್ಕಾರ ಮಾತ್ರ ಈ ವಿಚಾರದಲ್ಲಿ ಕವದಿ ಹೊತ್ತು ಮಲಗಿಕೊಂಡಿದೆ.