Breaking News
Home / Breaking News / ಬೆಳಗಾವಿ, ಗಡಿವಿವಾದ, ಮಹಾರಾಷ್ಟ್ರದಲ್ಲಿ ಹೈ ಪವರ್, ಕರ್ನಾಟಕದಲ್ಲಿ ಡೋಂಟ್ ಕೇರ್…!!

ಬೆಳಗಾವಿ, ಗಡಿವಿವಾದ, ಮಹಾರಾಷ್ಟ್ರದಲ್ಲಿ ಹೈ ಪವರ್, ಕರ್ನಾಟಕದಲ್ಲಿ ಡೋಂಟ್ ಕೇರ್…!!

ಬೆಳಗಾವಿ-ಬೆಳಗಾವಿ ಗಡಿ ವಿವಾದವನ್ನು ಮಹಾರಾಷ್ಟ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.ಈ ಕುರಿತು ಮುಂಬಯಿ ಮಹಾನಗರದಲ್ಲಿ ಹೈ- ಪವರ್ ಮೀಟೀಂಗ್ ಮಾಡುತ್ತಿದೆ.

ನವೆಂಬರ್ 23 ರಂದು ಬೆಳಗಾವಿ ಗಡಿ ವಿವಾದದ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.ಗಡಿ ವಿವಾದದ ಸುಪ್ರೀಂ ಕೋರ್ಟಿನ ವ್ಯಾಪ್ತಿಗೆ ಬರುತ್ತದೆಯೋ ಇಲ್ಲವೋ ಅನ್ನೋದರ ಬಗ್ಗೆ ಸುಪ್ರೀಂ ಕೋರ್ಟ್ ನಿರ್ಣಯ ಪ್ರಕಟಿಸಲಿದ್ದು ಈ ವಿಚಾರವಾಗಿ ಚರ್ಚಿಸಲು ಮಹಾರಾಷ್ಟ್ರ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸುತ್ತಿದ್ದು ಈ ಸಭೆಗೆ ಕಾನೂನು ತಜ್ಞರನ್ನು ಆಹ್ವಾನಿಸಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಸಲಿದೆ.

ನವೆಂಬರ್ 23 ರಂದು ಸುಪ್ರೀಂ ಕೋರ್ಟಿನಲ್ಲಿ ಬೆಳಗಾವಿ ಗಡಿ ವಿವಾದದ ಕುರಿತು ಅಂತಿಮ ವಿಚಾರಣೆ ನಡೆಯುತ್ತಿದ್ದರೂ ಕರ್ನಾಟಕ ಸರ್ಕಾರ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಬೆಳಗಾವಿ ಗಡಿ ವಿವಾದದ ಕುರಿತು ತಕ್ಷಣ ಸಭೆ ಕರೆದು ಕಾನೂನು ತಜ್ಞರ ಜೊತೆ ಸಮಾಲೋಚಣೆ ಮಾಡಿ,ನವೆಂಬರ್ 23 ರಂದು ಸುಪ್ರೀಂ ಕೋರ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರದ ವಾದಕ್ಕೆ ಪ್ರತಿಯಾಗಿ ವಾದ ಮಂಡಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರೂ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರ ಡೋಂಟ್ ಕೇರ್ ಮಾಡುತ್ತಿರುವದು ಸತ್ಯ.

ಇಂದು ಮಹಾರಾಷ್ಟ್ರದಲ್ಲಿ ಸಭೆ ನಡೆಯುತ್ತಿದೆ. ಕರ್ನಾಟಕ ಸರ್ಕಾರವೂ ನಾಳೆ ಸಭೆ ನಡೆಸಿ ಈ ವಿಚಾರದ ಕುರಿತು ಅತ್ಯಂತ ಅನುಭವಿ ಕಾನೂನು ತಜ್ಞರ ತಂಡವನ್ನು ನೇಮಿಸಿ ಸಮರ್ಥವಾಗಿ ವಾದ ಮಂಡಿಸಲು ಮಹಾರಾಷ್ಟ್ರ ಸರ್ಕಾರಕ್ಕೆ ಪ್ರತ್ಯುತ್ತರ ನೀಡಲು ಸಿಎಂ ಬೊಮ್ಮಾಯಿ ಇಚ್ಛಾಶಕ್ತಿ ಪ್ರದರ್ಶಿಸಬೇಕಾಗಿದೆ.

ಮುಖ್ಯಾಂಶಗಳು

 

ಕರ್ನಾಟಕ ಮಹಾರಾಷ್ಟ್ರ ಬೆಳಗಾವಿ ಗಡಿವಿವಾದ

*ನ.23ರಂದು ಸುಪ್ರೀಂಕೋರ್ಟ್‌ನಲ್ಲಿ ಗಡಿವಿವಾದ ಪ್ರಕರಣದ ಅಂತಿಮ ವಿಚಾರಣೆ*

ಗಡಿವಿವಾದ ಸುಪ್ರೀಂಕೋರ್ಟ್ ವ್ಯಾಪ್ತಿಗೆ ಬರುತ್ತೋ ಇಲ್ವೋ ಎಂಬ ಬಗ್ಗೆ ಅಂತಿಮ ವಿಚಾರಣೆ ಹಿನ್ನೆಲೆ

*ಇಂದು ಮಹಾರಾಷ್ಟ್ರ ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ*

*ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದ 14 ಸದಸ್ಯರ ಉನ್ನತ ಮಟ್ಟದ ಸಮಿತಿ ಸಭೆ*

ಮುಂಬೈನ ಸಹ್ಯಾದ್ರಿ ಅತಿಥಿ ಗೃಹದಲ್ಲಿ ನಡೆಯಲಿರುವ ಸಭೆ

ಅಂತಿಮ ಘಟ್ಟ ತಲುಪಿರುವ ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಇಂದು ಹೈಪವರ್ ಮೀಟಿಂಗ್

ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಎನ್‍ಸಿಪಿ, ಶಿವಸೇನೆಯ ಘಟಾನುಘಟಿ ನಾಯಕರು ಭಾಗಿ

ಕೇಂದ್ರ ಸಚಿವ ನಾರಾಯಣ ರಾಣೆ, ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಮಹಾರಾಷ್ಟ್ರ ಮಾಜಿ ಸಿಎಂ ಪೃಥ್ವಿರಾಜ್ ಚೌಹಾನ್

ಮಹಾರಾಷ್ಟ್ರ ವಿಪಕ್ಷ ನಾಯಕ ಅಜಿತ್ ಪವಾರ್, ಅಂಬಾದಾಸ್ ದಾನ್ವೆ ಸೇರಿ 14 ಸದಸ್ಯರು ಭಾಗಿ

ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಪ್ರಮುಖ ರಾಜಕೀಯ ಅಸ್ತ್ರವಾಗಿರುವ ಗಡಿವಿವಾದ

ಪಕ್ಷಾತೀತವಾಗಿ ಸಭೆಯಲ್ಲಿ ಭಾಗವಹಿಸಲಿರುವ ಮಹಾರಾಷ್ಟ್ರದ ರಾಜಕೀಯ ನಾಯಕರು

ಗಡಿವಿವಾದ ತನ್ನ ವ್ಯಾಪ್ತಿಗೆ ಬರುತ್ತೋ ಇಲ್ವೋ ಎಂಬ ಬಗ್ಗೆ ಅಂತಿಮ ವಿಚಾರಣೆ

ಗಡಿವಿವಾದ ಪ್ರಕರಣ ವಿಚಾರಣೆ ಕೈಗೆತ್ತಿಕೊಳ್ಳಬೇಕೋ ಬೇಡವೋ ಎಂಬ ಬಗ್ಗೆ ವಿಚಾರಣೆ

ಮಹಾಜನ್ ವರದಿ ತಿರಸ್ಕರಿಸಿ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಮಹಾರಾಷ್ಟ್ರ ಸರ್ಕಾರ

ಇತ್ತೀಚೆಗಷ್ಟೇ ಸಿಎಂ ಏಕನಾಥ ಶಿಂಧೆ ಭೇಟಿಯಾಗಿದ್ದ ಎಂಇಎಸ್ ನಿಯೋಗ

ಎಂಇಎಸ್ ನಿಯೋಗ ಭೇಟಿ ಬೆನ್ನಲ್ಲೇ 14 ಸದಸ್ಯರ ಉನ್ನತ ಮಟ್ಟದ ಸಮಿತಿ ರಚನೆ

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *