Breaking News

ಯಲ್ಲಮ್ಮನಗುಡ್ಡ: ಮಳಿಗೆಗಳ ಹರಾಜಿನಿಂದ ಕೋಟಿ, ಕೋಟಿ ಆದಾಯ

ಬೆಳಗಾವಿ, : ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಿರ್ಮಿಸಲಾಗಿರುವ ಹೊಸ ಮಳಿಗೆಗಳ ಬಹಿರಂಗ ಹರಾಜಿನಿಂದ ಸುಮಾರು ಎರಡು ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ.

ಶನಿವಾರ ನಡೆದ ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 226 ಮಳಿಗೆಗಳ ಹರಾಜಿನ ಮೂಲಕ ಈಗಾಗಲೇ 1,74,22,000 ರೂಪಾಯಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

39 ಮಳಿಗೆಗಳಿಗೆ ಸರಕಾರಿ ಸವಾಲಿಗಿಂತ ಕಡಿಮೆ ಮೊತ್ತಕ್ಕೆ ಕೇಳಲಾಗಿರುತ್ತದೆ. ಇದಲ್ಲದೇ ಬೇಡಿಕೆ ಇಲ್ಲದ 24 ಮಳಿಗೆಗಳನ್ನು ಹರಾಜು ಮಾಡಬೇಕಿರುತ್ತದೆ.
ಇವುಗಳ ಹರಾಜು ಪ್ರಕ್ರಿಯೆ ಪೂರ್ಣಗೊಂಡರೆ ಒಟ್ಟಾತೆ ಆದಾಯವು ಎರಡು ಕೋಟಿ ರೂಪಾಯಿಗಿಂತ ಅಧಿಕವಾಗಲಿದೆ ಎಂದು ಅವರು ತಿಳಿಸಿದ್ದಾರೆ.
****

Check Also

ಕುಡಚಿಯ ಮಾಸಾಬಿ ದರ್ಗಾಕ್ಕೆ ಪ್ರಿಯಾಂಕಾ ಬಂಪರ್

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳ ಲಕ್ಷಾಂತರ ಭಕ್ತರನ್ನು ಹೊಂದಿರುವ ರಾಯಬಾಗ ತಾಲ್ಲೂಕಿನ ಕುಡಚಿಯ ಮಾಸಾಬಿ ದರ್ಗಾಕ್ಕೆ ಚಿಕ್ಕೋಡಿ …

Leave a Reply

Your email address will not be published. Required fields are marked *