Breaking News
Home / Breaking News / ಗಡಿ ವಿವಾದದ ಕುರಿತು ಕೇಂದ್ರ ನಿಲುವು ಸ್ಪಷ್ಠಪಡಿಸಿದ ಮೇಲೆಯೂ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕೆಡಿಸುವದು ಸರಿಯಲ್ಲ- ಬೊಮ್ಮಾಯಿ

ಗಡಿ ವಿವಾದದ ಕುರಿತು ಕೇಂದ್ರ ನಿಲುವು ಸ್ಪಷ್ಠಪಡಿಸಿದ ಮೇಲೆಯೂ ಮಹಾರಾಷ್ಟ್ರ ನಾಯಕರು ಸಾಮರಸ್ಯ ಕೆಡಿಸುವದು ಸರಿಯಲ್ಲ- ಬೊಮ್ಮಾಯಿ

ಬೆಳಗಾವಿ- ಬೆಳಗಾವಿ ಗಡಿ ವಿಚಾರದ ಕುರಿತು ಕೇಂದ್ರ ಸರ್ಕಾರ ತನ್ನ ನಿಲುವು ಸ್ಪಷ್ಢಪಡಿಸಿದೆ ಮಹಾರಾಷ್ಟ್ರದ ಅರ್ಜಿಯನ್ನು ಡಿಸ್ ಮಿಸ್ ಮಾಡಿ ಎಂದು ಹೇಳಿದ್ದು ,ಮಹಾರಾಷ್ಟ್ರದ ಅರ್ಜಿಯನ್ನು ತರಸ್ಕರಿಸುವಂತೆ ಕೇಂದ್ರ ಸರ್ಕಾರ ಹೇಳಿದ ಮೇಲೆಯೂ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದವನ್ನು ಕೆದಕುವದು ಸರಿಯಲ್ಲ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು

ಬೆಳಗಾವಿಯಲ್ಲಿ ಮಾದ್ಯಮ ಮಿತ್ರರ ಜೊತೆ ಮಾತನಾಡಿದ ಅವರು ,ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹಿರಿಯ ಅಧಿಕಾರಿಗಳ ಸಭೆ ಕರೆದು ಗಡಿ ರಕ್ಷಣೆಯ ಕುರಿತು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ,,ಸರ್ಕಾರ ನೆಲ ಜಲ ಭಾಷೆಯ ಸಾಂಸ್ಕೃತಿಯ ರಕ್ಷಣೆಗೆ ಬದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದರು

ಮಂಗಳೂರು ವಿಮಾನ ನಿಲ್ದಾಣ ಬಾಂಬ್ ಪ್ರಕರಣಕ್ಕೆ ಸಮಂದಿಸಿದಂತೆ ಮಂಗಳೂರು ಪೊಲೀಸರು ಮೂರು ತಂಡ ಮಾಡಿ ತನಿಖೆ ಮಾಡಿದೆ. ಹಲವು ರೋಚಕ ವಿಷಯಗಳು ಹೊರಬಂದಿವೆ. ಬೆಂಗಳೂರು ವಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿ ಎರಡು ಬಾರಿ ಸಿಕ್ಕಿದ್ದ.ಕೆಲಸ ಸಿಕ್ಕಿಲ್ಲ. ಮಂಗಳೂರಿನಲ್ಲೂ ಕೆಲಸಕ್ಕೆ ಪ್ರಯತ್ನಿಸಿದ್ದ  ಮಾನಸಿಕವಾಗಿ ಅಸ್ವಸ್ಥನಾಗಿರುವ ವ್ಯೆಕ್ತಿಯೊಬ್ಬ ಇಂದು ಪೋಲೀಸರಿಗೆ ಶರಣಾಗಿದ್ದಾನೆ

ಮಂಗಳೂರು ಪೊಲೀಸ್ ವಶಕ್ಕೆ ಕೊಡಲಾಗಿದೆ ಮಂಗಳೂರು ಪೋಲೀಸರು ತನಿಖೆ ನಡೆಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು

ಮಂಗಳೂರು ಬಾಂಬ್ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರಿಗೆ ಸಿಕ್ಕಿರುವ ರಾಸಾಯನಿಕ ಪದಾರ್ಥಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ಕುರಿತು
ಅತ್ಯಂತ ಬೇಜವಾಬ್ದಾರಿ ಹೇಳಿಕೆ ಕೊಡುವದು ಸರಿಯಲ್ಲ ಎಲ್ಲ ವಿಡಿಯೊ ದೃಶ್ಯ ಸೆರೆಯಾಗಿದೆ. ಕುಮಾರಸ್ವಾಮಿ
ರಾಜಕಾರಣ ಮಾಡಲು ಹೊರಟಿದ್ದಾರೆ. ಅಲ್ಪ ಸಂಖ್ಯಾತರ ಓಲೈಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದಿರುವದರಿಂದ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಇದು ಸರಿಯಲ್ಲ.
ದೇಶದ್ರೋಹ ಕೆಲಸ ಮಾಡುವವರಿಗೆ ಪ್ರಚೋದನೆ ನೀಡಬಾರದು ಎಂದು ಬೊಮ್ಮಾಯಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟರು.

ಬೆಳಗಾವಿ ಸೇರಿ ಮೂರು ಎಪಿಎಂಸಿ ಬಗ್ಗೆ ದೂರು ಬಂದಿದೆ. ಅದರ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಈ ಕುರಿತು ಎಪಿಎಂಸಿ ನಿರ್ದೇಶಕರಿಗೆ ಸೂಚನೆ ನೀಡಿದ್ದೇವೆ ಎಂದ ಬೊಮ್ಮಾಯಿ,
ಗಡಿ ವಿಚಾರ ರಾಜ್ಯ ಮರು ವಿಂಗಡಣೆ ಆದ ಮೇಲೆ ಎರಡು ರಾಜ್ಯಗಳ ಮಧ್ಯೆ ಸಾಮರಸ್ಯ ಕಾಪಾಡುವದನ್ನು ಬಿಟ್ಟು ಸಾಮರಸ್ಯ ಕೆದಕುವ ಯತ್ನ ಮಹಾ ರಾಜಕಾರಣಿಗಳು ಮಾಡ್ತಾದ್ದಾರೆ.
2016,ಆಗಸ್ಟ,ಕೇಂದ್ರ ನಿಲುವು ಹೇಳಿದೆ. ಮಹಾ ಅರ್ಜಿ ಕಿತ್ತೊಗೆಯಬೇಕು. ಅರ್ಜಿ ಆದ್ಯತೆ ಕೊಡಬಾರದು ಎಂದು ಕೇಂದ್ರ ಹೇಳಿದೆ ಎಂದರು ಬೊಮ್ಮಾಯಿ

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *