Breaking News

ಮಹಾರಾಷ್ಟ್ರದ ಸಚಿವ ಬೆಳಗಾವಿಗೆ ಬರೋದು ಫಿಕ್ಸ್ ಆಗಿದೆ…!!

ಬೆಳಗಾವಿ- ಕರ್ನಾಟಕ ಮಹಾರಾಷ್ಟ್ರ ನಡುವಿನ ಬೆಳಗಾವಿ ಗಡಿವಿವಾದವನ್ನು ರಾಜಜೀಯ ಅಸ್ತ್ರವನ್ನಾಗಿ ಬಳಿಸಿಕೊಖ್ಳಲು ಮಹಾರಾಷ್ಡ್ರ ಸರ್ಕಾರ ಕುತಂತ್ರ ನಡೆಸಿದೆ.ಉರಿಯೋ ಬೆಂಕಿಗೆ ತುಪ್ಪ ಸುರಿಯುತ್ತಿರುವ ಮಹಾರಾಷ್ಟ್ರ ಸರ್ಕಾರ, ಬೆಳಗಾವಿಯ ನಾಡದ್ರೋಹಿ ಎಂಇಎಸ್ ಕರೆಗೆ ಓಗೊಟ್ಟು ಡಿಸೆಂಬರ್ 3ರಂದು ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಸಚಿವರನ್ನು ಬೆಳಗಾವಿಗೆ ಕಳುಹಿಸುತ್ತಿದೆ.

ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ್ ಅವರು ಬೆಳಗಾವಿ ಭೇಟಿ ಫಿಕ್ಸ್ ಆಗಿದೆ.ನಾಡದ್ರೋಹಿ ಎಂಇಎಸ್ ಮನವಿ ಮೇರೆಗೆ ಬೆಳಗಾವಿಗೆ ಆಗಮಿಸುತ್ತಿರುವ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಬೆಳಗಾವಿ ಭೇಟಿಯ ಪ್ರವಾಸಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಪ್ರವಾಸ ಪಟ್ಟಿ ಕರ್ನಾಟಕ ಮುಖ್ಯಕಾರ್ಯದರ್ಶಿಗೆ ರವಾನೆ ಆಗಿದೆ.

ಮಹಾರಾಷ್ಟ್ರದ ಸಚಿವರ ಬೆಳಗಾವಿ ಪ್ರವಾಸದ ವಿವರ ಹೀಗಿದೆ.

ಡಿಸೆಂಬರ್ 3ರ ಬೆಳಗ್ಗೆ 11ಕ್ಕೆ ಬೆಳಗಾವಿಗೆ ಆಗಮಿಸಲಿರುವ ಸಚಿವ ಚಂದ್ರಕಾಂತ ಪಾಟೀಲ್

ಬೆಳಗಾವಿ ಹಾಗೂ ಗಡಿಭಾಗದ ಗ್ರಾಮಗಳಲ್ಲಿ ಸರಣಿ ಸಭೆ ನಡೆಸಲಿರುವ ಸಚಿವ ಚಂದ್ರಕಾಂತ ಪಾಟೀಲ್

ಗಡಿ ಹೋರಾಟದಲ್ಲಿ ಗಲಭೆ ಸೃಷ್ಟಿಸಿ ಗೋಲಿಬಾರ್‌ನಲ್ಲಿ ಮೃತಪಟ್ಟ ಮರಾಠಿ ಭಾಷಿಕರ ಕುಟುಂಬಸ್ಥರ ಭೇಟಿಯಾಗಲಿರುವ ಚಂದ್ರಕಾಂತ ಪಾಟೀಲ್

ಈ ಮೂಲಕ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಮುಂದಾದ ಮಹಾರಾಷ್ಟ್ರದ ಸಚಿವ

ಡಿ.3ರ ಬೆಳಗ್ಗೆ 11ಕ್ಕೆ ಶಹಾಪುರದ ಛತ್ರಪತಿ ಶಿವಾಜಿ ಮಹಾರಾಜ ಉದ್ಯಾನವನಕ್ಕೆ ಭೇಟಿ

ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿರುವ ಸಚಿವ ಚಂದ್ರಕಾಂತ ಪಾಟೀಲ್

ಬಳಿಕ ಗಡಿಹೋರಾಟ ವೇಳೆ ಗಲಭೆ ಸೃಷ್ಟಿಸಿ ಮೃತಪಟ್ಟವರ ಸ್ಮರಣಾರ್ಥ ಹಿಂಡಲಗಾ ಗ್ರಾಮದ ಬಳಿ ನಿರ್ಮಿಸಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಮರ್ಪಣೆ

ಡಿ.3ರ ಬೆಳಗ್ಗೆ 11.35ಕ್ಕೆ ಬೆಳಗಾವಿಯ ಎಂಇಎಸ್ ಕಚೇರಿಗೆ ಭೇಟಿ ನೀಡಲಿರುವ ಸಚಿವ ಚಂದ್ರಕಾಂತ ಪಾಟೀಲ್

ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚೆ ನಡೆಸಲಿರುವ ಸಚಿವ ಚಂದ್ರಕಾಂತ ಪಾಟೀಲ್

ಬೆಳಗ್ಗೆ 11.55ಕ್ಕೆ ತುಕಾರಾಮ ಮಹಾರಾಜ ಸಾಂಸ್ಕೃತಿಕ ಕಾರ್ಯಾಲಯಕ್ಕೆ ಭೇಟಿ ನೀಡಿ ಸಭೆ

ಮಧ್ಯಾಹ್ನ 1.30ಕ್ಕೆ ಎಂಇಎಸ್ ಮುಖಂಡ ಪ್ರಕಾಶ್ ಮರಗಾಳೆ ನಿವಾಸಕ್ಕೆ ಭೇಟಿ

ಬಳಿಕ ಗಡಿ ಹೋರಾಟದಲ್ಲಿ ಮೃತಪಟ್ಟ ಮಧು ಬಾಂದೇಕರ್, ವಿದ್ಯಾ ಶಿಂಧೋಳಕರ್ ನಿವಾಸಕ್ಕೆ ಭೇಟಿ

ಮಧ್ಯಾಹ್ನ 3.15ಕ್ಕೆ ಹಳೆಯ ಬೆಳಗಾವಿಯಲ್ಲಿ ಸಚಿವ ಚಂದ್ರಕಾಂತ ಪಾಟೀಲ್ ರೌಂಡ್ಸ್

ಬಳಿಕ ಸಂಜೆ 6 ಗಂಟೆಯವರೆಗೂ ಗಡಿ ಭಾಗದ ಗ್ರಾಮಗಳಲ್ಲಿ ಸರಣಿ ಸಭೆ

ಸುಳಗಾ, ಉಚಗಾಂವ, ಬೆಳಗುಂದಿ, ಹಿಂಡಲಗಾದ ವಿಜಯನಗರ, ಕಂಗ್ರಾಳಿ ಕೆಹೆಚ್ ಗ್ರಾಮಗಳಿಗೆ ಭೇಟಿ ನೀಡಿ ಸರಣಿ ಸಭೆ ನಡೆಸಲಿರುವ ಮಹಾರಾಷ್ಟ್ರ ಸಚಿವ ಚಂದ್ರಕಾಂತ ಪಾಟೀಲ್

ಸಂಜೆ 6ಗಂಟೆಗೆ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ಪ್ರಯಾಣ ಬೆಳೆಸಲಿರುವ ಸಚಿವ ಚಂದ್ರಕಾಂತ ಪಾಟೀಲ್

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *