Breaking News

ಇಂದು ಅಂತಿಮ ವಿಚಾರಣೆ, ಬೆಳಗಾವಿ ಗಡಿಯಲ್ಲಿ ಹೈ- ಅಲರ್ಟ್…!!

ಬೆಳಗಾವಿ-ಇಂದುಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಗಡಿವಿವಾದ ಕೇಸ್ ವಿಚಾರಣೆಗೆ ಬರೋ ಸಾಧ್ಯತೆ ಇದೆ‌ಗಡಿ ವಿಚಾರದಲ್ಲಿ ಸುಪ್ರೀಂ ಅಂತಿಮ ವಿಚಾರಣೆ ಹಿನ್ನಲೆ ಬೆಳಗಾವಿ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಬೆಳಗಾವಿ ನಗರದ ಆಯಾಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ತೀರುಗುತ್ತಿದ್ದು ವಿಶೇಷ ನಿಗಾ ವಹಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ ನಡುವೆ ಎಂದಿನಂತೆ ಬಸ್ ಸಂಚಾರ ಇದೆ.ಗಡಿಯಲ್ಲಿ ಬಿಗಿ ಪೊಲೀಸ ಭದ್ರತೆ ಕೈಗೊಂಡ ಬೆಳಗಾವಿ ಪೊಲೀಸರುಬೆಳಗಾವಿ ಜಿಲ್ಲೆಯ ಮಹಾರಾಷ್ಟ್ರ ಹೊಂದಿಕೊಂಡಿರುವ ಸಂಪರ್ಕ ರಸ್ತೆಗಳಲ್ಲಿ ಪೋಲೀಸರು ಗಸ್ತು ತಿರುಗುತ್ತಿದ್ದಾರೆ.

ಬೆಳಗಾವಿ ಮಹಾರಾಷ್ಟ್ರ ಗಡಿಯಲ್ಲಿ ಪ್ರದೇಶದಲ್ಲಿ 21 ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ.ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಗಡಿಯಲ್ಲಿ ನಿಯೋಜನೆ ಮಾಡಲಾಗಿದೆ.ರಾಷ್ಟ್ರೀಯ ಹೆದ್ದಾರಿ 4 ರ ನಿಪ್ಪಾಣಿ ತಾಲೂಕಿನ ಕುಗನೊಳ್ಳಿ ಚೆಕ್ ಪೋಸ್ಟನಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.ಒಂದು KSRP ತುಕುಡಿ ಸ್ಥಳೀಯ ಪೊಲೀಸರ 1 CPI ಹಾಗೂ ಓರ್ವPSI ನೇತೃತ್ವದಲ್ಲಿ ಭದ್ರತೆ ನಿಯೋಜಿಸಲಾಗಿದೆ.ADGP ಅಲೋಕ್ ಕುಮಾರ ನೇತೃತ್ವದಲ್ಲಿ ಎರಡು ರಾಜ್ಯಗಳ ಪೊಲೀಸರ ನಡುವೆ ಸಭೆ ನಡೆಸಲಾಗಿದೆ.ಎರಡು ಕಡೆಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ADGP ಸೂಚನೆ ನೀಡಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಕೇಸ್
ಕಳೆದ 18 ವರ್ಷಗಳ ನಂತರ ಅಂತಿಮ ವಿಚಾರಣೆಗೆ ಬರುತ್ತಿದೆ.2004ರಲ್ಲಿ ಮಹಾರಾಷ್ಟ್ರ ಸರ್ಕಾರದಿಂದ ಸುಪ್ರೀಂ ಕೋರ್ಟ್ ದಾವೆ ದಾಖಲಾಗಿತ್ತುಬೆಳಗಾವಿ ಸೇರಿ 864 ಪಟ್ಟಣ, ಗ್ರಾಮಗಳು ಮಹಾರಾಷ್ಟ್ರ ಸೇರಬೇಕು ಎಂದು ಅಂದಿನ ಮಹಾರಾಷ್ಟ್ರ ಸರ್ಕಾರ ವಾದ ಮಂಡಿಸಿತ್ತು.ಕೇಸ್ ನಲ್ಲಿ ಮೊದಲ ಪ್ರತಿವಾದಿಯನ್ನಾಗಿ ಕೇಂದ್ರ ಸರ್ಕಾರಎರಡನೇ ಪ್ರತಿವಾದಿಯನ್ನಾಗಿ ಕರ್ನಾಟಕ ಸರ್ಕಾರವನ್ನುಮಾಡಿರೋ ಮಹರಾಷ್ಟ್ರ ಸರ್ಕಾರ ಬೆಳಗಾವಿ ಗಡಿವಿವಾದವನ್ನು ಸುಪ್ರೀಂ ಕೋರ್ಟಿಗೆ ಮುಟ್ಟಿಸಿತ್ತು.

ಸುಪ್ರೀಂ ಕೋರ್ಟ್ ನಲ್ಲಿ ಬೆಳಗಾವಿ ಗಡಿವಿವಾದ ಕೇಸ್ ಇನ್ನೂ ಅಂಗೀಕಾರ ಆಗಿಲ್ಲ,ಗಡಿ ವಿವಾದ ಇತ್ಯರ್ಥ ಮಾಡೋ ಅಧಿಕಾರ ಸುಪ್ರೀಂ ಇಲ್ಲ ಎಂದು ರಾಜ್ಯದ ವಾದ ಮಾಡಿದೆ.
ಗಡಿ ವಿವಾದ ಇತ್ಯರ್ಥ ಮಾಡೋ ಅಧಿಕಾರಕ್ಕೆ ಸಂಸತ್ತಿಗೆ ಇದೆ ಎಂದು ಕರ್ನಾಟಕ ಸರ್ಕಾರ ವಾದ ಮಂಡಿಸಿದೆ.ಗಡಿ ವಿವಾದ ಸುಪ್ರೀಂ ವ್ಯಾಪ್ತಿಗೆ ಬರುತ್ತೋ. ಇಲ್ಲವೋಎನ್ನುವ ಅಂತಿಮ ವಿಚಾರಣೆನವೆಂಬರ್ 23ರಂದು ನಿಗದಿಯಾಗಿದ್ದ ಅಂತಿಮ ವಿಚಾರಣೆಕಾರಣಾಂತರದಿಂದ ಮುಂದುಡಿಕೆಯಾಗಿ ಇಂದು ವಿಚಾರಣೆಗೆ ಬರೋ ಸಾಧ್ಯತೆ ಇದೆ.

Check Also

ಬೆಳಗಾವಿ ಜಿಲ್ಲೆಯ ವೀರ ಯೋಧ ನಿಧನ

ಮೂಡಲಗಿ:ಕಲ್ಲೋಳಿ ಪಟ್ಟಣದ ವೀರ ಯೋಧ ಶ್ರೀ ಪ್ರವೀಣ್ ಸುಭಾಸ್ ಖಾನಗೌಡ್ರ (24) ಅವರು ಬುಧವಾರ ಚೆನ್ನೈನ ಭಾರತೀಯ ನೌಕಾ ಪಡೆಯಲ್ಲಿ …

Leave a Reply

Your email address will not be published. Required fields are marked *