ಬೆಳಗಾವಿ-ರಾಜ್ಯ ಸರ್ಕಾರ ಗಡಿ ಉಸ್ತುವಾರಿ ಸಚಿವರನ್ನಾಗಿ ಹೆಚ್ ಕೆ ಪಾಟೀಲರನ್ನು ನೇಮಕ ಮಾಡಿದಾಗ ಗಡಿನಾಡ ಕನ್ನಡಿಗರಲ್ಲಿ ಹೊಸ ಆಶಾಕಿರಣ ಮೂಡಿತ್ತು ಆದರೆ ಮಂತ್ರಿಗಳು ಆರಂಭದಲ್ಲಿ ಗಡಿನಾಡ ಕನ್ನಡ ಸಂಘಟನೆಗಳ ನಾಯಕರ ಸಭೆ ನಡೆಸಿ ಹೋದವರು ಗಡಿಯ ಉಸಾಬರಿಗೆ ಹೋಗದೇ ಇರುವದು ಗಡಿನಾಡ ಕನ್ನಡಿಗರನ್ನು ನಿರಾಶೆಗೊಳಿಸಿದೆ.
ಆರಂಭದಲ್ಲಿ ಸಭೆ ನಡೆಸಿ ಬೆಳಗಾವಿಯಲ್ಲಿ ಗಡಿ ಸಂರಕ್ಷಣಾ ಆಯೋಗದ ಪ್ರಾದೇಶಿಕ ಕಚೇರಿಯನ್ನು ಬೆಳಗಾವಿಯಲ್ಲಿ ತೆರದು ಬೆಳಗಾವಿ ಕರ್ನಾಟಕ್ಕೆ ಸೇರಿದೆ ಎನ್ನುವದರ ಬಗ್ಗೆ ಲಭ್ಯವಿರುವ ದಾಖಲೆಗಳನ್ನು ಸಂಗ್ರಹ ಮಾಡುವದಾಗಿ ಭರವಸೆ ನೀಡಿದ ಪುಣ್ಯಾತ್ಮರು ಮರಳಿ ಗಡಿಯ ಕುರಿತು ಸಭೆ ಮಾಡಲಿಲ್ಲ ಗಡಿನಾಡು ಕನ್ನಡಿಗರನ್ನು ಭೇಟಿಯೂ ಆಗಲಿಲ್ಲ
ಕಾವೇರಿಯ ಕಾನೂನಾತ್ಮಕ ಹೋರಾಟದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ ಗಡಿ ವಿಷಯದಲ್ಲಿಯೂ ಸರ್ಕಾರ ನಿರ್ಲಕ್ಷ್ಯ ಮಾಡಿದರೆ ನಮ್ಮ ಗತಿ ಏನು ಅನ್ನೋದು ಕನ್ನಡಿಗರ ಪ್ರಶ್ನೆಯಾಗಿದೆ
ಸರ್ಕಾರ ಗಡಿ ವಿಷಯದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಗಡಿನಾಡ ಕನ್ನಡಿಗರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದು ಅವರಿಗೆ ಧೈರ್ಯ ತುಂಬಬೇಕು ಎಂದು ಬೆಳಗಾವಿಯ ಕೆಲವು ಕನ್ನದ ನಾಯಕರು ಹೆಚ್ ಕೆ ಪಾಟೀಲರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡುವಂತೆ ಒತ್ತಾಯಿಸಿ ಈ ವಿಷಯದಲ್ಲಿ ಅವರು ಯಶಸ್ವಿಯಾಗಿದ್ದರು
ಗಡಿ ಉಸ್ತುವಾರಿ ಸಚಿವರು ಕೇವಲ ಒಂದೇ ಒಂದು ಬಾರಿ ಸಭೆ ನಡೆಸಿ ಸುಸ್ತಾಗಿದ್ದು ಅವರನ್ನು ಎಚ್ಚರಿಸುವ ಕೆಲಸವನ್ನು ನಾಯಕರಾದ ಅಶೋಕ ಚಂದರಗಿ,ಮತ್ತು ರಾಘವೇಂದ್ರ ಜೋಶಿ ಮತ್ತು ಸಿದ್ಧನಗೌಡಾ ಪಾಟೀಲರು ಮಾಡಬೇಕು
ಗಡಿ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವ ರೀತಿಯ ತಯಾರಿ ನಡೆಸಿದೆ ಯಾವ ಯಾವ ದಾಖಲೆಗಳನ್ನು ಸಂಗ್ರಹಿಸಿದೆ ಎನ್ನುವ ಆತಂಕ ಕನ್ನಡಿಗರನ್ನು ಕಾಡುತ್ತಿದೆ ಗಡಿ ಉಸ್ತುವಾರಿ ಮಂತ್ರಿಗಳು ಕೇವಲ ಹೇಲಿಕೆ ನೀಡುವದನ್ನು ಬಿಟ್ಟು ಬೆಳಗಾವಿಯಲ್ಲಿ ಗಡಿ ಸಂರಕ್ಷಣಾ ಆಯೋಗದ ಕಚೇರಿ ಆರಂಭಿಸಿ ಗಡಿನಾಡ ಕನ್ನಡಿಗರ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರಲಿ ಎನ್ನುವದೇ ನಮ್ಮ ಒತ್ತಾಯ
Check Also
ಬೆಳಗಾವಿಯ ಬೀದಿಗಿಳಿದ ಇಲೆಕ್ಟ್ರಿಕ್ ರಿಕ್ಷಾ…!
ಬೆಳಗಾವಿ ಬೆಳಗಾವಿ ನಗರ ದಿನದಿಂದ ದಿನಕ್ಕೆ ಸ್ಮಾರ್ಟ್ ಆಗುತ್ತಿದೆ. ನಗರದ ರಸ್ತೆಗಳಲ್ಲಿ ಇಲೆಕ್ಟ್ರಿಕ್ ರಿಕ್ಷಾಗಳು ರಾರಾಜಿಸುತ್ತಿವೆ. ಪರಿಸರ ಸ್ನೇಹಿಯಾಗಿರುವ ಈ …