ಮೂಡಲಗಿ- ಮನೆಯವರು ಸೋದರಮಾವನ ಜೊತೆ ಮದುವೆ ಮಾಡಿಸಿದ ಬಳಿಕವೂ ಗಂಡನನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ,ಹಳೆಯ ಲವರ್ ನನ್ನು ಕರೆಯಿಸಿ ಗಂಡನ ಕಥೆ ಮುಗಿಸಿದ ಖಿಲಾಡಿ ಹೆಂಡತಿ ಇವಳೇ…..
ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಲವ್ ಕೇಸ್ ಒಂದು ಅಮಾಯಕನನ್ನು ಬಲಿ ಪಡೆದ ಪ್ರೇಮ್ ಕಹಾನಿ ನಡೆದಿದೆ.ಭೀಮನ ಅಮವಾಸ್ಯೆಯಂದೇ ಪತಿಯ ಕೊಲೆ ಮಾಡಿಸಿದ ಪತ್ನಿಯ ಬಂಧನವಾಗಿದೆ.ಮಾಡಿಕೊಂಡ ಗಂಡನ ಕಥೆ ಮುಗಿಸಿ ಪ್ರೇಮಿಯ ಜೊತೆ ಬದುಕು ಸಾಗಿಸುವ ಸ್ಕೇಚ್ ಹಾಕಿದ್ದ ಇವಳು ಈಗ ಲವರ್ ಜೊತೆ ಜೈಲುಪಾಲಾಗಿದ್ದಾಳೆ.
ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದು ಹೋಗಿದೆ.ಅಮವಾಸ್ಯೆ ಪೂಜೆಗೆ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ನಡೆದಿದ್ದ ಕೊಲೆ ಪ್ರಕರಣ ಇದೊಂದು ಪಕ್ಕಾ ಲವ್ ಕೇಸ್ ಅನ್ನೋದು ಬಹಿರಂಗವಾಗಿದೆ.
ಮನೆಯವರ ಒತ್ತಾಯಕ್ಕೆ ಇವಳನ್ನು ಮದುವೆಯಾದ ಯುವಕಬನಸಿದ್ದೇಶ್ವರ ದೇವಸ್ಥಾನದ ಬಳಿ ಹೆಣವಾಗಿದ್ದಾನೆ. ಶಂಕರ ಜಮಗಟ್ಟಿ(28) ಕೊಲೆಯಾದ ಯುವಕ.
ಪತ್ನಿ ಪ್ರೀಯಾಂಕ ಜೊತೆಗೆ ದೇವರ ದರ್ಶಕ್ಕೆ ಬಂದಿದ್ದ ಮೃತ ಶಂಕರ ಜಗಮಟ್ಟಿದೇವಸ್ಥಾನದ ಆವರಣದಲ್ಲಿಯೇ ಕೊಲೆಯಾಗಿದ್ದ.
ಈ ಕೊಲೆ ಪ್ರಕರಣ ಸಂಬಂಧ ಶ್ರೀಧರ ತಳವಾರ ಎಂಬ ಆರೋಪಿ ಬಂಧಿಸಲಾಗಿದೆ.ಶ್ರೀಧರ ತಳವಾರ ಹಾಗೂ ಪ್ರೀಯಾಂಕ ಅನೇಕ ವರ್ಷಳಿಂದ ಪ್ರೀತಿಸುತ್ತಿದ್ದರು
ಒತ್ತಾಯಪೂರ್ಕವಾಗಿ ಶಂಕರ್ ಜೊತೆಗೆ ಪ್ರೀಯಾಂಕ ಮದುವೆ ಮಾಡಿದ್ದ ಮನೆಯವರುಪ್ರೀಯಾಂಕಾ ಹಾಗೂ ಕೊಲೆಯಾದ ಗಂಡ ಶಂಕರ…..ಕೊಲೆ ಆರೋಪಿ ಪ್ರೀಯಾಂಕಾ ಲವರ್ ತಳವಾರ…
ಕೇವಲ ಮೂರು ತಿಂಗಳ ಹಿಂದೆ ಸೋದರ ಮಾವನ್ನು ವರಿಸಿದ್ದ ಪ್ರೀಯಾಂಕ ಲವರ್ ಜೊತೆ ಸೇರಿ ಗಂಡನ ಕಥೆ ಮುಗಿಸಿದ್ದಾಳೆ.ಪ್ರಕರಣ ಸಂಬಂಧ ಪ್ರೀಯಾಂಕ, ಶ್ರೀಧರ್ ತಳವಾರ ಬಂಧನವಾಗಿದೆ.ಮೂಡಲಗಿ ಪೊಲೀಸರಿಂದ ವಿಚಾರಣೆ ಮುಂದುವರೆದಿದೆ.