Breaking News

ಬೆಳಗಾವಿ ಜಿಲ್ಲೆಯಲ್ಲಿ ಮುಂದುವರೆದ ಮರ್ಡರ್ ಗಳ ಸರಣಿ…!!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಮೇಲೆ ಯಾರ ದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ, ಇಲ್ಲಿ ಸಿಂಗಲ್ ಆದ್ಮೇಲೆ ಡಬಲ್ ಹೀಗೆ ಮರ್ಡರ್ ಗಳ ಸರಣಿ ಮುಂದುವರೆದಿದೆ,ಇಂದು ಬೆಳ್ಳಂ ಬೆಳಗ್ಗೆ ಜಿಲ್ಲೆಯಲ್ಲಿ ಮೊತ್ತೋರ್ವ ಯುವಕನ ಮರ್ಡರ್ ಆಗಿದೆ.

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಹತ್ಯೆಯಾದ ಯುವಕನ ಕುಟುಂಬಸ್ಥರನ್ನು ವಿಚಾರಣೆ ನಡೆಸುತ್ತಿದ್ದು ಕೊಲೆಗೆ ಕಾರಣ ಏನು ಅನ್ನೋದು ಇನ್ನುವರೆಗೆ ಗೊತ್ತಾಗಿಲ್ಲ.

ಕೊಲೆಯಾದ ಯುವಕನನ್ನು ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ವಡೇರಹಟ್ಟಿ ಗ್ರಾಮದ ಶಂಕರ ಸಿದ್ಧಪ್ಪಾ ಜಗಮೋತಿ 30 ಎಂದು ಗುರುತಿಸಲಾಗಿದೆ.

Check Also

ನಾಳೆ ಗುರುವಾರ ಶಾಲಾ ಕಾಲೇಜಿಗೆ ರಜೆ ಘೋಷಣೆ

  ಬೆಳಗಾವಿ- ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಬೆಳಗಾವಿ,ಖಾನಾಪೂರ ಮತ್ತು ಕಿತ್ತೂರು ತಾಲ್ಲೂಕುಗಳ ಶಾಲೆ ಮತ್ತು ಪಿಯುಸಿ …

Leave a Reply

Your email address will not be published. Required fields are marked *