ಬೆಳಗಾವಿ- ಎಸ್ ಸಿ- ಎಸ್ ಟಿ ವರ್ಗಗಳ ಬಡ್ತಿ ಮೀಸಲಾತಿಯನ್ನು ಸಂರಕ್ಷಿಸಲು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟಗೆ ಮರು ಪರಶೀಲನಾ ಅರ್ಜಿಯನ್ನು ಸಲ್ಲಿಸುವಂತೆ ಬೆಳಗಾವಿ ಜಿಲ್ಲಾ ಬಹುಜನ ಸಮಾಜ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲಗಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು
ಮಾನ್ಯ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಚನ್ನಪ್ಪರೆಡ್ಡಿ ಅವರು ಮೀಸಲಾತಿ ಬಿಕ್ಷೆ ಅಲ್ಲ ಅದು ಸಮಾನತೆಯ ಸಾಧನ ಎಂದು ಹೇಳಿದ್ದು sc/st ವರ್ಗಗಳ ನೌಕರರಿಗೆ ಬಡ್ತಿಯಲ್ಲಿ ಮೀಸಲಾತಿ ನೀಡಿದರೆ ಆಡಳಿತದಲ್ಲಿ ದಕ್ಷತೆಗೆ ಧಕ್ಕೆ ಆಗುವದಿಲ್ಲ ಅವರು ಹಿಂದುಳಿದಿದ್ದಾರೆ ಉನ್ನತ ಹುದ್ದೆಗಳಲ್ಲಿ ಪ್ರಾತಿನಿದ್ಯದ ಕೊರತೆ ಇದೆ ಎಂಬ ಅಂಶಗಳನ್ನು ಸಾಭೀತು ಪಡಿಸಲು ರಾಜ್ಯ ಸರಕಾರ ಯಾವ ಸಾಕ್ಷಾಧಾರಗಳನ್ನು ಹಾಜರು ಪಡಿಸಿಲ್ಲ ಎಂದು ಬಿಎಸ್ಪಿ ಆರೋಪಿಸಿತು
ಸುಪ್ರೀಂ ಕೋರ್ಟಿನ ಆದೇಶ ದಲ್ಲಿ ಹೇಳಿದ ನ್ಯುನ್ಯತೆಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ಬಡ್ತಿಯಲ್ಲಿ ಮೀಸಲಾತಿ ಕಲ್ಪಿಸುವ ಹೊಸ ಕಾನೂನು ಈ ವರ್ಷದ ಬಜೆಟ್ ಅಧಿವೇಶನದಲ್ಲಿಯೇ ಮಂಡಿಸಿ ಪಾಸು ಮಾಡುವದು ಸೇರಿದಂತೆ ವಿವಿಧ ಬೇಡಿಕೆಗಳ್ನು ಈಡೇರಿಸುವಂತೆ ಒತ್ತಾಯಿಸಲಾಯಿತು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ