ಬೆಳಗಾವಿ- ಭೂಸುಧಾರಣೆ,ಹಾಗೂ ಎಪಿಎಂಸಿ ಕಾಯ್ದೆ ವಿರೋಧಿಸಿ ರೈತರು ಇಂದು ಕರ್ನಾಟಕ ಬಂದ್ ಕರೆ ನೀಡಿದ್ದುಬೆಳ್ಳಂ ಬೆಳಿಗ್ಗೆ ಇಂದು ಬೆಳಗಾವಿಯಲ್ಲಿ ಬಂದ್ ಬಿಸಿ ತಟ್ಟಿತು.
ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಇಂದು ಬಸ್ ಗಳು ಬಂದ್ ಇರೋಲ್ಲ,ಎಂದಿನಂತೆ ಓಡಾಡುತ್ತವೆ ಎಂದು ಹೇಳಿಕೆ ನೀಡಿದ್ದನ್ನು ಗಮನಿಸಿದ್ದ ಕನ್ನಡಪರ ಹೋರಾಟಗಾರರು ಇಂದು ಬೆಳಗಿನ ಜಾವವೇ ಬೆಳಗಾವಿಯ ಕೇಂದ್ರ ಬಸ್ ನಿಲ್ಧಾಣಕ್ಕೆ ಮುತ್ತಿಗೆ ಹಾಕಿ ಬಸ್ ಗಳ ಓಡಾಟಕ್ಕೆ ಬ್ರೇಕ್ ಹಾಕಿದ್ರು.
ಕರ್ನಾಟಕ ನವ ನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ಬಾಬು ಸಂಗೋಡಿ ನೇತ್ರತ್ವದಲ್ಲಿ ಬಸ್ ನಿಲ್ಧಾಣಕ್ಕೆ ಮುತ್ತಿಗೆ ಹಾಕಿದ ಕನಸೇ ಕಾರ್ಯಕರ್ತರು ಬಸ್ ಗಳ ಓಡಾಟ ನಿಲ್ಲಿಸುವಂತೆ ಒತ್ತಾಯಿಸಿ ಪ್ರತಿಭಟಿಸಿದರು.
ಬೆಳ್ಳಂ ಬೆಳಿಗ್ಗೆ ಬಸ್ ಗಳ ಓಡಾಟಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿತು,ಬಸ್ ಸಂಚಾರ ಇದೆ ಎಂದು ನಂಬಿಕೊಂಡು ಬಸ್ ಸ್ಟ್ಯಾಂಡ್ ಗೆ ಬಂದಿದ್ದ ನೂರಾರು ಪ್ರಯಾಣಿಕರು ಪರದಾಡುವಂತಾಯಿತು.
ಕರ್ನಾಟಕ ಬಂದ್ ಕರೆಯ ಬಿಸಿ ಬೆಳಿಗ್ಗೆಯೇ ಬೆಳಗಾವಿಯ ಜನತೆಗೆ ತಟ್ಟಿದ್ದು,ಈಗ ಬೆಳಗಾವಿಯಲ್ಲಿ ಬಸ್ ಸಂಚಾರ ಸದ್ಯಕ್ಕೆ ಸ್ಥಗಿತಗೊಂಡಿದೆ.
ಈ ಸಂಧರ್ಭದಲ್ಲಿ ಪ್ರಯಾಣಿಕನೊಬ್ಬ ಪ್ರತಿಭಟನಾಕಾರರ ಜೊತೆ ವಾದಿಸಿದ ಪ್ರಸಂಗವೂ ನಡೆಯಿತು,ಪ್ರತಿಭಟನಾಕಾರರು,ರಿಕ್ಷಾ ಚಾಲಕರಲ್ಲಿಯೂ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು.