Home / Breaking News / ಸುರೇಶ ಅಂಗಡಿ ಸ್ಮರಿಸಿ ಭಾವುಕರಾದ ಜಗದೀಶ್ ಶೆಟ್ಟರ್

ಸುರೇಶ ಅಂಗಡಿ ಸ್ಮರಿಸಿ ಭಾವುಕರಾದ ಜಗದೀಶ್ ಶೆಟ್ಟರ್

ಬೆಳಗಾವಿ- ಯಾವುದೇ ಚಟವಿಲ್ಲದೇ ನನಗೆ ಏನೂ ಆಗುವದಿಲ್ಲ,ಎನ್ನುವ ಅತೀವ ಆತ್ಮ ವಿಶ್ವಾಸ ಅವರಲ್ಲಿತ್ತು,ಅದಕ್ಕಾಗಿಯೇ ಅವರು ಮಾಸ್ಕ ಹಾಕಿಕೊಳ್ಳುವದರಲ್ಲಿ ನಿರ್ಲಕ್ಷ್ಯ ಮಾಡಿದ್ರು,ಈ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದ್ದರೆ ಸುರೇಶ ಅಂಗಡಿ ಬದುಕುತ್ತಿದ್ದರೆನೋ,ಎಂದು ಕೈಗಾರಿಕಾ ಸಚಿವ,ಸುರೇಶ ಅಂಗಡಿ ಅವರ ಬೀಗರು ಆದ ಜಗದೀಶ ಶೆಟ್ಟರ್ ಭಾವುಕರಾದರು.

ಬೆಳಗಾವಿ ಅನಿಗೋಳದಲ್ಲಿ ನಡೆದ ಸಂತ ಮೀರಾ ಶಾಲೆಯಲ್ಲಿ ಆರ್ ಎಸ್ ಎಸ್ ವತಿಯಿಂದ ನಡೆದ ಸುರೇಶ ಅಂಗಡಿ ಶೃದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಮಾಡಬೇಡಿ,ಮಾಸ್ಕ ಹಾಕಿಕೊಳ್ಳಿ ಎಂದು ಸುರೇಶ ಅಂಗಡಿ ಅವರಿಗೆ ಹಲವಾರು ಬಾರಿ ಹೇಳಿದ್ದೆ,ಆದ್ರೆ ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ ಮಾಡಿದ್ರು ಅನಿಸುತ್ತೆ,ವೈದ್ಯರ ಬಳಿಯೂ ಅವರು ನಾನು ಆರಾಮವಾಗಿದ್ದೇನೆ ಎಂದಿದ್ದರು,ಎಂದು ಜಗದೀಶ ಶೆಟ್ಟರ್ ಭಾವುಕರಾಗಿ ಗದ್ಗಧಿತರಾಗಿ ಸುರೇಶ್ ಅಂಗಡಿ ಅವರ ಜೊತೆಗಿನ ಒಡನಾಟವನ್ನು ಸಭೆಯಲ್ಲಿ ಬಿಚ್ಚಿಟ್ಟರು.

ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ,ನಾನು ಮತ್ತು ಸುರೇಶ್ ಅಂಗಡಿ ಬೆಳಗಾವಿ ಅಭಿವೃದ್ಧಿಯ ವಿಷಯದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೇವು,ಏನೇ ಹೇಳಿದ್ರೂ ಸುರೇಶ ಅಂಗಡಿ ಯಾವತ್ತೂ ಸಿಟ್ಟು ಮಾಡಿಕೊಂಡಿರಲಿಲ್ಲ,ಸದಾ ಹಸನ್ಮುಖಿಯಾಗಿಯೇ ಎಲ್ಲದಕ್ಕು ಸ್ಪಂದನೆ ಮಾಡುತ್ತಿದ್ದರು ಎಂದು ಕೋರೆ ಅಂಗಡಿ ಅವರ ಜೊತೆಗಿನ ಒಡನಾಟ ಸ್ಮರಿಸಿದರು.

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಮಾತನಾಡಿ,ಸುರೇಶ ಅಂಗಡಿ ಕಾಯಕದಿಂದ ಬದುಕು ರೂಪಿಸಿಕೊಂಡಿದ್ದರು,ಒಬ್ಬ ರಾಜಕಾರಣಿ ಹೇಗೆ ಇರಬೇಕು ಎಂದು ತೋರಿಸಿ ಕೊಟ್ಟವರೇ ಸುರೇಶ ಅಂಗಡಿ ಎಂದು ಸ್ಮರಿಸಿದರು

ಸುರೇಶ ಅಂಗಡಿ ಅವರ ಹಿರಿಯ ಅಳಿಯ ರಾಹುಲ್ ಪಾಟೀಲ್ ಮಾತನಾಡಿ,ಧಾರವಾಡ ಕಿತ್ತೂರು ಬೆಳಗಾವಿ ರೈಲು ಮಾರ್ಗದ ಮಂಜೂರಾತಿ ಸಿಕ್ಕ ಬಳಿಕ ಸುರೇಶ ಅಂಗಡಿ ಬಹಳ ಸಂತಸ ಪಟ್ಟಿದ್ದರು,ಜ್ವರ ಇದ್ದರೂ ವಿಶ್ರಾಂತಿ ಪಡೆಯದೇ ಮಾತ್ರೆ ತಗೊಂಡು ಜನ ಸೇವೆಗೆ ಧಾವಿಸಿದ್ದರು,ಪುತ್ರಿಯರು ಹಲವಾರು ಬಾರಿ ಹೇಳಿದರೂ ಅವರು ಪರೀಕ್ಷೆ ಮಾಡಿಸಿಕೊಳ್ಳಲಿಲ್ಲ,ಸೊಂಕಿನ ಅಪಾಯ ಕೈಮೀರಿ ಹೋಗಿತ್ತು,ಕೊನೆಯ ಒಂಬತ್ತು ದಿನ ಅವರು ಯಾರ ಸಂಪರ್ಕಕ್ಕೂ ಬರಲು ಸಾದ್ಯವಾಗಲಿಲ್ಲ,ಅದಕ್ಕೆ ಅವರು ನೊಂದಿದ್ದರು,ಕಾಯಕವೇ ಕೈಲಾಸ ಎನ್ನುವದಕ್ಕೆ ಸುರೇಶ ಅಂಗಡಿ ಅವರೇ ಉದಾಹರಣೆ ಎಂದರು

ಈರಣ್ಣಾ ಕಡಾಡಿ ಸೇರಿದಂತೆ ಅನೇಕ ಗಣ್ಯರು ಸುರೇಶ ಅಂಗಡಿ ಅವರ ಸೇವೆಯನ್ನು ಸ್ಮರಿಸಿದರು

ಸಭೆಯಲ್ಲಿ ಪುತ್ರಿ ಶ್ರದ್ಧಾ ಉಪಸ್ಥಿತರಿದ್ದರು.

Check Also

ಒಂದು ಟೇಬಲ್ ಎರಡು ಖರ್ಚಿಗೆ ಮಾತ್ರ ಅವಕಾಶ….!!

ಲೋಕಸಭಾ ಚುನಾವಣೆ: ಬಿಗಿ ಬಂದೋಬಸ್ತ್ ಸುಗಮ-ಶಾಂತಿಯುತ ಮತದಾನಕ್ಕೆ ಸಕಲ ಸಿದ್ದತೆ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, -: ಲೋಕಸಭಾ ಚುನಾವಣೆ …

Leave a Reply

Your email address will not be published. Required fields are marked *