ಬೆಳಗಾವಿ- ಶಾಲಾ ಕಾಲೇಜುಗಳ ಮದೆ ಹೊಟೇಲ್ ,ಆಸ್ಪತ್ರೆಗಳ ಮುಂದೆ ನಿಲ್ಲಿಸಲಾಗುಬ ಬೈಕ್ ಗಳನ್ನು ಕದಿಯುವ ಗ್ಯಾಂಗ್ ಸಿಸಿಐಬಿ ಪೋಲೀಸರ ಬಲೆಗೆ ಬಿದ್ದಿದೆ
ಬೆಳಗಾವಿಯಲ್ಲಿ ಪೊಲೀಸ್ ಆಯುಕ್ತ ಟಿ.ಜಿ.ಕೃಷ್ಣಭಟ್ ಸುದ್ದಿಗೋಷ್ಠಿ. ನಡೆಸಿ ಗ್ಯಾಂಗ್ ಕುರಿತು ಮಾಹಿತಿ ನೀಡಿದ್ದಾರೆ
ಸಿಸಿಐಬಿ ಇನ್ಸಪೇಕ್ಟರ್ ಎ.ಎಸ.ಗುದಿಗೊಪ್ಪ ತಂಡದ ಕಾರ್ಯಾಚರಣೆ ನಡೆಸಿ ನಾಲ್ವರು ಅಂತರಾಜ್ಯ ಬೈಕ್ ಕಳ್ಳರ ಬಂಧಿಸಿದ್ದಾರೆ. ಬಂಧಿತರಿಂದ 9ಲಕ್ಷ ಮೌಲ್ಯದ 19 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೋಲೀಸ್ ಆಯುಕ್ತರು ಮಾಹಿತಿ ನೀಡಿದರು
ಗೋವಾ ಮತ್ತು ಬೆಳಗಾವಿಯಲ್ಲಿ ಕಳ್ಳತನ ಮಾಡಿದ್ದ ಖದಿಮರು ಶಾಲಾ-ಕಾಲೇಜು, ಸರ್ಕಾರಿ ಕಚೇರಿ ಮುಂದೆ ನಿಲ್ಲಿಸಿದ ಬೈಕ್ ಕಳ್ಳತನ ಮಾಡುತ್ತಿದ್ದರು ಬೈಕ್ ಗಳ ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದರು ಎಂದು ಗೊತ್ತಾಗಿದೆ
ಬೆಳಗಾವಿ ನಿವಾಸಿಗಳಾದ ಪ್ರಸಾದ ಯಾದವ, ರಹೀಮ ನಾಯಕ, ನಿಕೇಶ ಕಂಗ್ರಾಳಕರ, ರಮೇಶ ಧರ್ಮಾಚೆ ಬಂಧಿತ ಆರೋಪಿಗಳು ಬೆಳಗಾವಿಯ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ